ಮದುವೆಯಾದ ಹುಡುಗಿ ಹುಡುಗನಾಗಿ ಬದಲಾದ!

ಲಕ್ನೋ, ನ.12: ಹೆಣ್ಣು ನೋಡಿ 48 ಗಂಟೆಯಲ್ಲಿ ಮದುವೆ ಮುಗಿದು ಹೋಗಿತ್ತು. ಮದುವೆಗೆ ನೆಂಟರಿಷ್ಟರು ಬಂದಿದ್ದರು. ಭರ್ಜರಿ ಊಟ ಉಪಚಾರವೂ ನಡೆಯಿತು. ಇದೇನು ಹೊಸ ಕತೆ ಮದುವೆ ಅಂದ ಮೇಲೆ ಇದೆಲ್ಲ ಸಾಮಾನ್ಯ ಎಂದು ಕೊಳ್ಳುತ್ತಿದ್ದೀರಾ?

ಆದರೆ ಇಲ್ಲಾಗಿದ್ದೇ ಬೇರೆ, ಮದುವೆಯಾಗಿದ್ದು ಹುಡುಗಿಯನ್ನಲ್ಲ, ಹುಡುಗನ್ನ! ರಾಜಕುಮಾರಿಯಾಗಿ ಮನೆ ಸೇರಿದ್ದವಳು ರಾಜಕುಮಾರನಾಗುತ್ತಾಳೆ. ತಕ್ಷಣಕ್ಕೆ ಸುದ್ದಿ ಅರ್ಥವಾಗುತ್ತಿಲ್ಲ ಅಲ್ಲವೇ?

marriage

ಆಗಿದ್ದಿಷ್ಟು, ಮದುವೆ ವಯಸ್ಸು ಮೀರುತ್ತಿದೆ ಎಂದು ಗೊತ್ತಾದವನೊಬ್ಬ ಗ್ರಹಸ್ಥಾಶ್ರಮಕ್ಕೆ ಕಾಲಿಡಬೇಕು ಎಂದು ನಿರ್ಧರಿಸಿ ನೃತ್ಯ ತಂಡದ ನಾಯಕನೊಬ್ಬನಿಗೆ 50 ಸಾವಿರ ರೂ. ನೀಡುತ್ತಾನೆ. ಹೆಣ್ಣು ಹುಡುಕಲಾಗದ ಆತ 15 ವರ್ಷದ ಹುಡುಗನೊಬ್ಬನನ್ನೆ ವಧುವೆಂದು ನಂಬಿಸಿ ಅಲಂಕಾರ ಮಾಡಿ ತರುತ್ತಾನೆ. ವಿಜೃಂಭಣೆಯಿಂದ ಮದುವೆಯೂ ನಡೆದು ಹೋಗುತ್ತದೆ.[ಮದುವೆ ಪ್ರಮಾಣ ಪತ್ರ ಪಡೆಯುವುದು ಹೇಗೆ?]

ಇಂಥ ಒಂದು ವಂಚನೆ ಪ್ರಕರಣ ನಡೆದಿರುವುದು ಉತ್ತರ ಪ್ರದೇಶದ ಬದುನ್ ನಲ್ಲಿ. ಮದುವೆಗೆ ಸಿದ್ಧನಾಗಿದ್ದ 37 ವರ್ಷದ ಬಲಕ್ ರಾಮ್ ವಧು ಹುಡುಕಿಕೊಡುವಂತೆ ಹುಕುಂ ಸಿಂಗ್ ಎಂಬಾತನಿಗೆ ಹಣ ನೀಡುತ್ತಾನೆ. ಅದರಂತೆ ಹುಡುಗಿ(ಹುಡುಗ)ಯೊಬ್ಬಳನ್ನು ಕರೆತಂದು ಮದುವೆಯನ್ನು ಮಾಡಿಸುತ್ತಾನೆ. ಚಾಲಾಕಿ ಹುಕುಂ ಸಿಂಗ್ ಹುಡುಗಿಗೆ 29 ವರ್ಷ ವಯಸ್ಸು ಆಕೆ ಮಾನಸಿಕವಾಗಿ ಸ್ವಲ್ಪ ಸ್ಥಿಮಿತವಿಲ್ಲದವಳು ಎಂದು ಹೇಳಿರುತ್ತಾನೆ.

ಒಂದು ವಾರದ ನಂತರ ಹೌಹಾರುವ ಸರದಿ ಬಂದಿದ್ದು ಮದುಮಗನಿಗೆ. ಇವಳು ಹುಡುಗಿಯಲ್ಲ ಹುಡುಗ. ನಾನು ಮೋಸ ಹೋಗಿದ್ದೇನೆ ಎಂಬ ಸಂಗತಿ ಗೊತ್ತಾಗುತ್ತದೆ. ಹುಕುಂ ಸಿಂಗ್ ತಂಡದಲ್ಲಿಯೇ ಒಬ್ಬನಾಗಿದ್ದ ರಾಜ್ ಕುಮಾರ್ ಗೆ 10 ಸಾವಿರ ರೂ. ನೀಡಿ ವಧುವಿನ ಪಾತ್ರ ಮಾಡುವಂತೆ ಹೇಳುತ್ತಾನೆ.[ಹುಡಗಿ ಐಕ್ಯೂ ನೋಡಿ ಮದವಿ ಆಗ್ರೀಪಾ ಮತ್ತ!]

ಅಲ್ಲದೇ ಮದುವೆಯಾದ ನಂತರ ಅವಕಾಶ ನೋಡಿಕೊಂಡು ಊರಿಂದ ಪರಾರಿಯಾಗು ಎಂದು ಹೇಳಿರುತ್ತಾನೆ. ಆದರೆ ಅಷ್ಟರಲ್ಲಿಯೇ ಸತ್ಯ ಬಯಲಿಗೆ ಬಂದಿದ್ದು ಪ್ರಕರಣವೀಗ ಪೊಲೀಸರ ಬಳಿಯಲ್ಲಿದೆ. ಹಣ ಕೊಟ್ಟು ಮದುವೆ ಮಾಡಿಸಿಕೊಂಡಾತ ಇನ್ನೊಂದು ಹೆಣ್ಣು ಹುಡುಕಲು ಇನ್ಯಾರ ಕಾಲಿಗೆ ಬೀಳಬೇಕೋ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+