ವಿಡಿಯೋ: ರಂಗಸ್ಥಳದಲ್ಲಿ ಕುಸಿದು ಮೃತರಾದ ಕಲಾವಿದ

ತ್ರಿಶೂರ್, ಜನವರಿ 30: ಕೇರಳದ ತ್ರಿಶೂರ್ ಸಮೀಪದ ಇರಿಂಜಿಲಾಕುದ ಅವೈತತ್ತೂರು ದೇವಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುವಾಗ ಖ್ಯಾತ ಕಲಾವಿದ ಕಲಾಮಂಡಲಂ ಗೀತಾನಂದನ್ ಅವರು ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ.

ಪ್ರೇಕ್ಷಕರ ಎದುರು ಪ್ರದರ್ಶನ ನೀಡುವಾಗಲೇ ಮೃತಪಟ್ಟ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿವೆ.

Ottamthullal dancer Kalamandalam Geethanandan collapses on stage, dies

ವೇದಿಕೆ ಮೇಲೆಯೇ ಕುಸಿದು ಬಿದ್ದ ಒತ್ತುಮ್ ತುಳ್ಳಲ್ ನೃತ್ಯಪಟು ಗೀತಾನಂದನ್ ಅವರನ್ನು ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದ ಅವರು ಬದುಕುಳಿಯಲಿಲ್ಲ.

ಸೂಪರ್ ಸ್ಟಾರ್ ಮೋಹನ್ ಲಾಲ್ ಅಭಿನಯದ 'ಕಲಾಮಂಡಲಂ' ಸೇರಿದಂತೆ ಸುಮಾರು 30 ಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು. ಕೇರಳ ಶಾಸ್ತ್ರೀಯ ನೃತ್ಯ ಶಿಕ್ಷಕರಾಗಿಯೂ ಅವರು ಕೆಲಸ ಮಾಡಿದ್ದಾರೆ.

ಕಲಾಮಂಡಲಂ ಗೀತಾನಂದನ್‌ ನಿಧನಕ್ಕೆ ಕೇರಳ ಸಿಎಂ ಪಿಣರಾಯಿ ವಿಜಯನ್‌ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+