ಸಿಎಎ ಗಲಾಟೆ: ಭಾರತದಲ್ಲಿನ ಮುಸ್ಲಿಮರ ಸ್ಥಿತಿ ಬಗ್ಗೆ ಒಐಸಿ ಕಳವಳ

ನವದೆಹಲಿ, ಡಿಸೆಂಬ್ 24: ಭಾರತದಲ್ಲಿನ ಇತ್ತೀಚಿನ ಬೆಳವಣಿಗೆಗಳು ಅಲ್ಲಿನ ಮುಸ್ಲಿಂ ಜನಸಂಖ್ಯೆಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಇಸ್ಲಾಮಿಕ್ ಸಹಕಾರ ಸಂಸ್ಥೆ (ಒಐಸಿ) ಭಾನುವಾರ ಹೇಳಿದೆ.

ಇತ್ತೀಚಿನ ಭಾರತದ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಬಾಬ್ರಿ ಮಸೀದಿ ಕುರಿತಾದ ಸುಪ್ರೀಂಕೋರ್ಟ್ ತೀರ್ಪು ಕುರಿತು ಇಸ್ಲಾಮಿಕ್ ಸಂಸ್ಥೆಯು ಕಳವಳಗೊಂಡಿದೆ. ಭಾರತದಲ್ಲಿನ ಇಸ್ಲಾಂನ ಪವಿತ್ರ ಸ್ಥಳಗಳ ರಕ್ಷಣೆಗೆ ಮತ್ತು ಮುಸ್ಲಿಮರ ಸುರಕ್ಷತೆಗೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಒಐಸಿ ಹೇಳಿಕೆಯಲ್ಲಿ ಮನವಿ ಮಾಡಿದೆ.

ಅಲ್ಪಸಂಖ್ಯಾತರ ಹಕ್ಕುಗಳನ್ನು ಯಾವುದೇ ತಾರತಮ್ಯವಿಲ್ಲದೆ ಕಾಪಾಡುವ ವಿಶ್ವಸಂಸ್ಥೆಯ ಸೂಚನೆಗಳು ಮತ್ತು ಅಂತಾರಾಷ್ಟ್ರೀಯ ಒಪ್ಪಂದಗಳಿಗೆ ಬದ್ಧವಾಗಿರುವುದು ಹಾಗೂ ತತ್ವಗಳನ್ನು ಎತ್ತಿಹಿಡಿಯುವ ವಿಚಾರವು ಬಹಳ ಮಹತ್ವದ್ದಾಗಿದೆ ಎಂದು ಹೇಳಿದೆ.

Organisation Of Islamic Cooperation Expresses Concern On CAA Indian Muslim

1969ರಲ್ಲಿ ಆರಂಭವಾದ ಐಒಸಿ 57 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಇತರೆ ದೇಶಗಳಲ್ಲಿ ಅಲ್ಪಸಂಖ್ಯಾತ ಮುಸ್ಲಿಮರಿಗೆ ತೊಂದರೆಯಾಗುವ ಸನ್ನಿವೇಶ ಕಂಡುಬಂದಾಗ ಧ್ವನಿ ಎತ್ತುವ ಒಐಸಿ, ಚೀನಾದಲ್ಲಿನ ಯುಯಿಘರ್ ಮುಸ್ಲಿಮರ ಮೇಲಿನ ದಬ್ಬಾಳಿಕೆ, ರೊಹಿಂಗ್ಯಾ ಮುಸ್ಲಿಮರ ಶೋಷಣೆಯ ಕುರಿತು ಇದುವರೆಗೂ ಚಕಾರ ಎತ್ತಿಲ್ಲ ಎಂಬ ಟೀಕೆ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+