ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಕೆಯಿಂದ ಕಲಿಯಬೇಕು: ರಿಷಿ ಆಯ್ಕೆ ಕುರಿತು ಬಿಜೆಪಿಗೆ ಸಲಹೆ ನೀಡಿದ ವಿಪಕ್ಷ ನಾಯಕರು

|
Google Oneindia Kannada News

ಬೆಂಗಳೂರು, ಅಕ್ಟೋಬರ್‌ 25: ಭಾರತ ಮೂಲದ ರಿಷಿ ಸುನಕ್‌ ಬ್ರಿಟನ್‌ ದೇಶದ ಪ್ರಧಾನಿ ಹುದ್ದೆಗೆ ಆಯ್ಕೆಯಾಗಿದ್ದಾರೆ. ಅವರು ಬ್ರಿಟನ್‌ ಪ್ರಧಾನಿ ಹುದ್ದೆಗೆ ಆಯ್ಕೆಯಾದ ಬಿಳಿಯನಲ್ಲದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ರಿಷಿ ಅವರ ಆಯ್ಕೆಯು ಭಾರತದಲ್ಲಿ ಸಂಭ್ರಮವನ್ನು ತಂದಿದೆ. ಆದರೆ, ಈ ವಿಚಾರವಾಗಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ವಾಗ್ದಾಳಿ ನಡೆಸಿವೆ. ಭಾರತವು ಬ್ರಿಟನ್‌ನಿಂದ ವೈವಿಧ್ಯತೆಯ ಪಾಠ ಕಲಿಯಬೇಕು ಎಂದು ವಿಪಕ್ಷ ನಾಯಕರು ಹೇಳಿದ್ದಾರೆ.

ಯುಕೆ ನೂತನ ಪ್ರಧಾನಿ, ಅಳಿಯ ರಿಷಿ ಸುನಕ್ ಕುರಿತು ನಾರಾಯಣ ಮೂರ್ತಿ ಹೇಳಿದ್ದೇನು? ಯುಕೆ ನೂತನ ಪ್ರಧಾನಿ, ಅಳಿಯ ರಿಷಿ ಸುನಕ್ ಕುರಿತು ನಾರಾಯಣ ಮೂರ್ತಿ ಹೇಳಿದ್ದೇನು?

ಈ ವಿಚಾರವಾಗಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಕಾಂಗ್ರೆಸ್‌ ನಾಯಕ, 'ವೈವಿಧ್ಯತೆಯನ್ನು ಗೌರವಿಸುವುದು ಹೇಗೆ ಎಂಬುದನ್ನು ಈಗ ಭಾರತವು ಬ್ರಿಟನ್‌ನಿಂದ ಕಲಿಯಬೇಕಿದೆ. ತನ್ನ ವೈವಿಧ್ಯತೆ ಹಾಗೂ ಅದರ ಬಗ್ಗೆ ಹೊಂದಿದ್ದ ಗೌರವಕ್ಕಾಗಿ ಭಾರತವು ಪ್ರಪಂಚದಾದ್ಯಂತ ಹೆಸರುವಾಸಿಯಾಗಿತ್ತು. ಆದರೆ, ಕಳೆದ ಎಂಟು ವರ್ಷಗಳಲ್ಲಿ ಎಲ್ಲವೂ ಬದಲಾಗಿದೆ' ಎಂದು ತಿಳಿಸಿದ್ದಾರೆ.

Opposition trains gun at BJP after India Rishi Sunak elevation United Kingdom

ಸುನಕ್‌ ಅವರ ಆಯ್ಕೆಯಿಂದ ಭಾರತವು ಪಾಠ ಕಲಿಯಬೇಕಿದೆ ಎಂದು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಹೇಳಿದ್ದಾರೆ. ಅಲ್ಪ ಸಂಖ್ಯಾತ ಸಮುದಾಯದ ಒಬ್ಬ ವ್ಯಕ್ತಿಯನ್ನು ಉನ್ನತ ಹುದ್ದೆಗೆ ಆಯ್ಕೆ ಮಾಡುವ ಅಭ್ಯಾಸವನ್ನು ಭಾರತವು ಅಳವಡಿಕೊಳ್ಳಬಹುದು ಎಂಬುದಾಗಿ ನಾನು ನಂಬಿದ್ದೇನೆ ಎಂದು ಅವರು ಹೇಳಿದ್ದಾರೆ.

ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಅವರು, 'ಮೊದಲಿಗೆ ಕಮಲಾ ಹ್ಯಾರಿಸ್, ಈಗ ರಿಷಿ ಸುನಕ್. ಯುಎಸ್ ಮತ್ತು ಯುಕೆ ಜನರು ತಮ್ಮ ದೇಶಗಳ ಬಹುಸಂಖ್ಯಾತರಲ್ಲದ ನಾಗರಿಕರನ್ನು ಅಪ್ಪಿಕೊಂಡಿದ್ದಾರೆ. ಅವರನ್ನು ಸರ್ಕಾರದ ಉನ್ನತ ಹುದ್ದೆಗೆ ಆಯ್ಕೆ ಮಾಡಿದ್ದಾರೆ' ಎಂದು ಚಿದಂಬರಂ ತಿಳಿಸಿದ್ದಾರೆ.

'ಈ ಪಾಠವನ್ನು ಭಾರತ ಹಾಗೂ ಬಹುಸಂಖ್ಯಾತ ರಾಜಕಾರಣವನ್ನು ಅಪ್ಪಿಕೊಂಡ ಪಕ್ಷಗಳು ಕಲಿಯಬೇಕಿದೆ' ಎಂದು ಅವರು ಹೇಳಿದ್ದಾರೆ.

ಸುನಕ್ ಅವರ ಪ್ರಧಾನಿ ಹುದ್ದೆಯ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಶಶಿ ತರೂರ್, 'ಬ್ರಿಟಿಷರು ವಿಶ್ವದಲ್ಲೇ ಅತ್ಯಂತ ಅಪರೂಪದ ಕೆಲಸವೊಂದನ್ನು ಮಾಡಿದ್ದಾರೆ' ಎಂದು ತಿಳಿಸಿದ್ದಾರೆ.

Opposition trains gun at BJP after India Rishi Sunak elevation United Kingdom

'ಅಲ್ಪಸಂಖ್ಯಾತ ಸದಸ್ಯರೊಬ್ಬರನ್ನು ಅತ್ಯಂತ ಬಲಶಾಲಿ ಕಚೇರಿಯಲ್ಲಿ ಇರಿಸಲು ನಾವೆಲ್ಲರೂ ಒಪ್ಪಿಕೊಳ್ಳಬೇಕೆಂದು ನಾನು ಭಾವಿಸುತ್ತೇನೆ. ರಿಷಿ ಸುನಕ್‌ ಅವರ ಉನ್ನತ ಹುದ್ದೆಯ ಆಯ್ಕೆಯನ್ನು ನಾವು ಆಚರಿಸುತ್ತಿರುವಾಗ, ಇದು ನಮ್ಮಲ್ಲಿ ಸಂಭವಿಸಬಹುದೇ ಎಂದು ಪ್ರಾಮಾಣಿಕವಾಗಿ ಕೇಳಿಕೊಳ್ಳೋನ' ಎಂದು ಅವರು ಹೇಳಿದ್ದಾರೆ.

ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, 'ಬ್ರಿಟಿಷ್ ಏಷ್ಯನ್ನರನ್ನು ನಂಬರ್ 10 ರಲ್ಲಿ ಇರಿಸಿದ್ದಕ್ಕಾಗಿ, ನನ್ನ ಎರಡನೇ ನೆಚ್ಚಿನ ದೇಶವಾದ ಯುಕೆ ಬಗ್ಗೆ ಹೆಮ್ಮೆಯಿದೆ. ಭಾರತವು ಹೆಚ್ಚು ಸಹಿಷ್ಣುವಾಗಿರಲಿ. ಎಲ್ಲಾ ನಂಬಿಕೆಗಳು, ಎಲ್ಲರ ಹಿನ್ನೆಲೆಗಳನ್ನು ಹೆಚ್ಚು ಒಪ್ಪಿಕೊಳ್ಳಲಿ' ಎಂದು ಹೇಳಿದ್ದಾರೆ.

ಬ್ರಿಟನ್‌ನ ಕನ್ಸರ್ವೇಟಿವ್‌ ಪಕ್ಷದ ಹೊಸ ನಾಯಕರಾಗಿ ರಿಷಿ ಸುನಕ್‌ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಭಾರತ ಮೂಲಕ ಬ್ರಿಟನ್‌ನ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ರಿಷಿ ಸುನಕ್‌ ಅವರು ಭಾರತೀಯ ಮೂಲದ ಬ್ರಿಟನ್‌ ಸಂಜಾತ. ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ. ಬ್ರಿಟನ್‌ನ ಮೊದಲ ಹಿಂದೂ ಪ್ರಧಾನಿ. 210 ವರ್ಷಗಳಲ್ಲಿ ಅತ್ಯಂತ ಕಿರಿಯ ಬ್ರಿಟನ್ ಪ್ರಧಾನಿ ಆಗಲಿದ್ದಾರೆ.

Opposition trains gun at BJP after India Rishi Sunak elevation United Kingdom

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಭಾರತದ ಪ್ರಮುಖ ರಾಜಕೀಯ ನಾಯಕರು ರಿಷಿ ಸುನಕ್‌ ಅವರ ಆಯ್ಕೆಯನ್ನು ಸ್ವಾಗತಿಸಿದ್ದಾರೆ. ಉದ್ಯಮಿಗಳಾದ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರು ಅಳಿಯನ ಸಾಧನೆಯನ್ನು ಮೆಚ್ಚಿ ಅಭಿನಂದಿಸಿದ್ದಾರೆ. ರಿಷಿ ಸುನಕ್‌ ಆಯ್ಕೆಯ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುತ್ತಿರುವವರೇ, ಇಟಲಿ ಮೂಲದ ಸೋನಿಯಾ ಆಯ್ಕೆಯನ್ನು ವಿರೋಧಿಸಿದ್ದರು ಎಂದು ಕೆಲವರು ಸಾಮಾಜಿಕ ತಾಣಗಳಲ್ಲಿ ಟೀಕಿಸಿದ್ದಾರೆ.

English summary
India should learn about diversity from UK Opposition trains gun at BJP after Rishi Sunak elevation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X