ಬಿಜೆಪಿಗೆ ತಿರುಗೇಟು ನೀಡಲು ವಿಪಕ್ಷಗಳು ಸಜ್ಜು; ಇಡಿ, ಸಿಬಿಐ ಕಚೇರಿಗೆ ಮುತ್ತಿಗೆ ಹಾಕಲು ತಯಾರಿ!

ಸಂಸತ್ ಅಧಿವೇಶನಕ್ಕೆ ಬಿಜೆಪಿಗೆ ತಿರುಗೇಟು ನೀಡಲು ವಿಪಕ್ಷಗಳು ಸಜ್ಜಾಗಿವೆ.

ದೆಹಲಿ,ಮಾರ್ಚ್ 15:‌ ಬಿಜೆಪಿಗೆ ತಿರುಗೇಟು ನೀಡಲು ವಿಪಕ್ಷಗಳು ಸಜ್ಜಾಗಿದ್ದು, ಅದಾನಿ ಗ್ರೂಪ್ ವಿರುದ್ಧ ಕೇಂದ್ರ ಏಜೆನ್ಸಿ ತನಿಖೆ ನಡೆಸದಿರುವುದನ್ನು ವಿರೋಧಿಸಿ ಪ್ರತಿಪಕ್ಷಗಳು ಸಂಸತ್ತಿನಿಂದ ಜಾರಿ ನಿರ್ದೇಶನಾಲಯ (ಇಡಿ ಮತ್ತು ಸಿಬಿಐ) ಕಚೇರಿವರೆಗೆ ಮೆರವಣಿಗೆ ನಡೆಸಲು ಸಿದ್ದತೆ ನಡೆಸಿವೆ.

ಆಡಳಿತಾರೂಢ ಬಿಜೆಪಿಯು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯವರು ಲಂಡನ್‌ ನಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬ ಹೇಳಿಕೆಗಳನ್ನ ತರಾಟೆಗೆ ತೆಗೆದುಕೊಳ್ಳುವ ಮೂಲಕ ಕಾಂಗ್ರೆಸ್ ಅನ್ನು ಮೂಲೆಗುಂಪು ಮಾಡಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ವಿರುದ್ದ ತಿರುಗೇಟು ನೀಡಲು ಇ ಡಿ ಹಾಗೂ ಸಿಬಿಐ ಕಚೇರಿಗೆ ಪಾದಯಾತ್ರೆಯನ್ನ ನಡೆಸಲು ವಿಪಕ್ಷಗಳು ಸಿದ್ದತೆ ನಡೆಸಿದೆ.

Opposition May March To ED, CBI Office Asking Why Adani Issue Not Being Probed

ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಲೆಕ್ಕಪತ್ರ ವಂಚನೆ ಆರೋಪ ಎದುರಿಸುತ್ತಿರುವ ಅದಾನಿ ವಿಚಾರವನ್ನು ಏಕೆ ತನಿಖೆ ಮಾಡುತ್ತಿಲ್ಲ ಎಂದು ಪ್ರತಿಪಕ್ಷಗಳು ಇಡಿ, ಸಿಬಿಐ ಕಚೇರಿಗೆ ಮೆರವಣಿಗೆ ಸಜ್ಜಾಗಿದ್ದು, ಸಂಸತ್ ಅಧಿವೇಶನಕ್ಕೆ ತಂತ್ರ ರೂಪಿಸಲು ಕಳೆದ ಎರಡು ದಿನಗಳ ಹಿಂದೆ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಸಭೆಯನ್ನು ಕರೆದಿದ್ದರು. ಈ ಸಭೆಯಲ್ಲೂ ಭಿನ್ನಾಭಿಪ್ರಾಯಗಳು ಕಂಡು ಬಂದಿದ್ದವು ಎಂದು ಮೂಲಗಳು ತಿಳಿಸಿವೆ. ಎರಡು ದಿನಗಳ ಸಭೆಯಲ್ಲಿ ಎಎಪಿ ಹಾಜರಾಗಿದ್ದರೆ, ಟಿಎಂಸಿ ಮಾತ್ರ ದೂರ ಉಳಿದಿತ್ತು ಎಂದು ತಿಳಿದುಬಂದಿದೆ.

ಇನ್ನೂ ಸೋಮವಾರ ಹಾಗೂ ಮಂಗಳವಾರ ಎಐಸಿಸಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದು, ಸಭೆಯಲ್ಲಿ 16 ಭಾಗವಹಿಸಿದ್ದವು. ಎಎಪಿ ಈ ಸಭೆಗಳಲ್ಲಿ ಭಾಗವಹಿಸಿದರೆ, ಬಿ ಆರ್‌ ಎಸ್‌ ಹಾಗೂ ತೃಣಮೂಲ ಕಾಂಗ್ರೆಸ್‌ ಸಭೆಯಲ್ಲಿ ಭಾಗವಹಿಸಿರಲಿಲ್ಲ. ಬುಧವಾರದಂದು ಇಡಿ ಮತ್ತು ಗುರುವಾರ ಸಿಬಿಐಗೆ ಪಾದಯಾತ್ರೆ ನಡೆಯಬಹುದು ಚಿಂತನೆ ನಡೆಸಿವೆ. ಆದರೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಸಂಸತ್ತಿನ ಅವರ ಕಚೇರಿಯಲ್ಲಿ ಪ್ರತಿಪಕ್ಷಗಳ ಸಭೆಯಲ್ಲಿ ಮಾತ್ರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ಸಭೆಯಲ್ಲಿ 18 ಪಕ್ಷಗಳು ಭಾಗವಹಿಸುವ ಸಾಧ್ಯತೆಯಿದೆ.

ಅದಾನಿ ಅವ್ಯವಹಾರದ ಕುರಿತು ಜಂಟಿ ಸಂಸದೀಯ ಸಮಿತಿಯಿಂದ (ಜೆಪಿಸಿ) ತನಿಖೆಗೆ ಒತ್ತಾಯಿಸಿ ಎಲ್ಲಾ ವಿರೋಧ ಪಕ್ಷದ ಸಂಸದರು ಸಹಿ ಮಾಡಿದ ಜಂಟಿ ಪತ್ರ ಅಥವಾ ಹೇಳಿಕೆಯನ್ನು ನೀಡಲು ಪ್ರತಿಪಕ್ಷಗಳು ಚಿಂತನೆ ನಡೆಸುತ್ತಿವೆ.

ಇನ್ನೂ ರಾಜ್ಯಸಭೆಯಲ್ಲಿ ಈ ವಿಚಾರದಲ್ಲಿ ಎಲ್ಲ ಪಕ್ಷಗಳು ಕಾಂಗ್ರೆಸ್ ಜೊತೆ ನಿಂತಿವೆ ಆದರೆ ಬಿಜೆಪಿ ಇದನ್ನು ಬಳಸಿಕೊಂಡು ಗಮನ ಬೇರೆಡೆ ಸೆಳೆಯಲು ಮತ್ತು ಅದಾನಿ ವಿಷಯದ ಚರ್ಚೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂಬ ಪ್ರತಿಪಕ್ಷಗಳು ಅಭಿಪ್ರಾಯಪಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+