ಇರಾನ್ ಪ್ರತಿಭಟನೆಯ ಭಯಾನಕತೆ ಬಿಚ್ಚಿಟ್ಟ ಭಾರತೀಯ ಪ್ರಜೆಗಳು, ಆಪರೇಷನ್ ಸ್ವದೇಶ್ ಸಕ್ಸಸ್! Operation Swades
ನವದೆಹಲಿ: ಭಾರತೀಯರು ಇರಾನ್ ನೆಲದಲ್ಲಿ ಸಿಲುಕಿ ಒದ್ದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಆ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ನೋಡ ನೋಡುತ್ತಲೇ ಇಡೀ ಇರಾನ್ ಈಗ ಧಗಧಗ ಅಂತಿದೆ. ಹೀಗಿದ್ದಾಗ 10,000ಕ್ಕೂ ಹೆಚ್ಚು ಭಾರತೀಯರ ಪರಿಸ್ಥಿತಿ ಇರಾನ್ ನೆಲದಲ್ಲಿ ಅತಂತ್ರವಾಗಿತ್ತು.
ಭಾರತ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಇರಾನ್ ನೆಲದಿಂದ ಭಾರತೀಯರನ್ನು ಕರೆದುಕೊಂಡು ಬರಲು ಮಹತ್ವದ ಕಾರ್ಯಾಚರಣೆ, ಆಪರೇಷನ್ ಸ್ವದೇಶ್ ಅರಂಭ ಮಾಡಿತ್ತು. ಈ ಕಾರ್ಯಾಚರಣೆಯ ಭಾಗವಾಗಿ ಇರಾನ್ ರಾಜಧಾನಿ ತೆಹ್ರಾನ್ ಮೂಲಕ ಮೊದಲ ವಿಮಾನ ಭಾರತಕ್ಕೆ ಬಂದಿಳಿದಿದೆ. ಇದೇ ವೇಳೆ ಇರಾನ್ ಹಿಂಸಾಚಾರದ ಭಯಾನಕತೆ ಬಿಡಿಸಿಟ್ಟಿದ್ದಾರೆ ಭಾರತೀಯರು.

ಭಯಾನಕ ಅನುಭವ, ಘೋರ ಹಿಂಸಾಚಾರ
ಇರಾನ್ ಸರ್ವಾಧಿಕಾರಿ ಖಮೇನಿ ಅಧಿಕಾರ ಬಿಟ್ಟು ತೊಲಗಲಿ ಎಂದು ಇರಾನ್ ಪ್ರಜೆಗಳು ಹೋರಾಟ ಶುರು ಮಾಡಿದ್ದರು. ಆಡಳಿತ ವೈಫಲ್ಯದ ವಿರುದ್ಧ ಶುರುವಾದ ಪ್ರತಿಭಟನೆಗಳು ಘೋರ ರೂಪ ಪಡೆದು, ಈವರೆಗೂ ಸುಮಾರು 3,400ಕ್ಕೂ ಜನರನ್ನ ಬಲಿ ಪಡೆಯಲಾಗಿದೆ ಎಂಬ ಆರೋಪ ಇದೆ. ಹೀಗಿದ್ದಾಗ ಆ ದೇಶದ ವಿರುದ್ಧ ಅಮೆರಿಕ ಕೂಡ ಯುದ್ಧ ಸಾರಲು ಸನ್ನದ್ಧವಾಗಿದೆ.
ಇಷ್ಟೆಲ್ಲಾ ಪರಿಸ್ಥಿತಿಯು ಕೈಮೀರಿರುವಾಗ ಯಾವುದೇ ಕ್ಷಣದಲ್ಲಿ ಇರಾನ್ ನೆಲದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಆಗಬಹುದು ಎಂಬ ಆತಂಕವು ಮನೆಮಾಡಿತ್ತು. ಅಲ್ಲದೆ ಪ್ರಮುಖವಾಗಿ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಮುತುವರ್ಜಿ ವಹಿಸಿ ಮಹತ್ವದ ಕ್ರಮ ಕೈಗೊಂಡಿತ್ತು. ಈಗ ಅದು ಫಲ ನೀಡುತ್ತಿದ್ದು, ಭಾರತೀಯರು ತವರಿಗೆ ಬರುತ್ತಿದ್ದಾರೆ. ಆಪರೇಷನ್ ಸ್ವದೇಶ್ ಕಾರ್ಯಾಚರಣೆಯ ಭಾಗವಾಗಿ ಮೊದಲ ವಿಮಾನದಲ್ಲಿ ದೆಹಲಿಗೆ ಬಂದಿಳಿದ ಭಾರತೀಯರು ಇರಾನ್ ನೆಲದಲ್ಲಿ ತಾವು ಅನುಭವಿಸಿದ ಸಂಕಷ್ಟಗಳ ಸರಮಾಲೆ ಬಿಡಿಸಿಟ್ಟಿದ್ದಾರೆ.
ಭಾರತೀಯರಿಗೆ ಎದುರಾಗಿದ್ದ ಸವಾಲುಗಳು ಇವು
ಇರಾನ್ ದೇಶದಲ್ಲಿ ಎಂಬಿಬಿಎಸ್ ಕಲಿಯಲು ಹೋಗಿದ್ದ ವಿದ್ಯಾರ್ಥಿನಿ ಒಬ್ಬರು ಅಲ್ಲಿನ ಪ್ರತಿಭಟನೆಯ ಕರಾಳತೆ ಬಿಚ್ಚಿಟ್ಟಿದ್ದಾರೆ. ಹೋರಾಟ ಆರಂಭವಾದ ನಂತರ ಇಂಟರ್‌ನೆಟ್ ಸ್ಥಗಿತವಾಗಿತ್ತು, ಆ ನಂತರ ನೋಡ ನೋಡುತ್ತಲೇ ಪ್ರತಿಭಟನೆ ಹಾಗೂ ಹಿಂಸಾಚಾರ ಇನ್ನಷ್ಟು ಹೆಚ್ಚಾಗಿತ್ತು. ಇದು ನಮಗೆ ಭಯ ತರಿಸಿತ್ತು ಎಂದಿದ್ದಾರೆ.
ಹಾಗೆಯೇ ಒಂದು ತಿಂಗಳಿನಿಂದ ಇರಾನ್‌ನಲ್ಲಿದ್ದ ಮತ್ತೊಬ್ಬ ಭಾರತೀಯ ಪ್ರಜೆ ಕೂಡ ಅಲ್ಲಿನ ಕರಾಳ ದಿನಗಳನ್ನ ಮೆಲುಕು ಹಾಕಿದ್ದಾರೆ. ನಾವು ಹೊರ ಹೋದಾಗ ಪ್ರತಿಭಟನೆಯನ್ನು ನಡೆಸುತ್ತಿದ್ದವರು ಕಾರಿನ ಎದುರು ಬರುತ್ತಿದ್ದರು, ಹೀಗಾಗಿ ನಮಗೆ ಆತಂಕ ಎದುರಾಗಿತ್ತು. ಈ ಬಗ್ಗೆ ನಮ್ಮ ಕುಟುಂಬಗಳಿಗೆ ಮಾಹಿತಿ ನೀಡುವುದಕ್ಕೆ ಕೂಡ ಸಾಧ್ಯ ಆಗದ ಪರಿಸ್ಥಿತಿ ನಿರ್ಮಾಣವಾಗಿ ಭಯ ಇನ್ನಷ್ಟು ಹೆಚ್ಚಾಗಿತ್ತು ಎಂದಿದ್ದಾರೆ.












Click it and Unblock the Notifications