ಆಪರೇಷನ್ ಸಿಂಧೂರ್: ಭಾರತದ ವೇಗದ ನಿಖರ ದಾಳಿ, ಕುಗ್ಗಿದ ಪಾಕಿಸ್ತಾನದ ಯುದ್ಧ ತಂತ್ರಗಳು
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಭಾರತ ವಿಶ್ವಕ್ಕೆ ಸ್ಪಷ್ಟವಾದ ಸಂದೇಶವನ್ನು ಕೊಟ್ಟಿದೆ. ಪಾಕಿಸ್ತಾನದಲ್ಲಿರುವ ಉಗ್ರರ ಶಿಬಿರಗಳನ್ನು ಬಿಡುವುದಿಲ್ಲ ಎಂದು ಹೇಳಿದೆ. ಈ ಬಾರಿ ಭಾರತ ತಳಮಟ್ಟದಲ್ಲಿ ತನ್ನ ದಾಳಿಯನ್ನು ಮಾಡಲಿಲ್ಲ. ಬದಲಾಗಿ ತಂತ್ರವನ್ನು ಬದಲಾವಣೆ ಮಾಡಿ 'ಹಾವಿನ ತಲೆ'ಯನ್ನು ಗುರಿಯಾಗಿಸಿತು. ಇದರ ಉದ್ದೇಶ ಸ್ಪಷ್ಟವಾಗಿತ್ತು, ಭಯೋತ್ಪಾದನೆ ನಿರ್ಮೂಲನೆ ಮಾಡಬೇಕಾದರೆ ಮೊದಲು ಮಾಸ್ಟರ್ ಮೈಂಡ್‌ಗಳ ಮೇಲೆ ದಾಳಿ ನಡೆಸಬೇಕು.
ಭಾರತದ ಭದ್ರತಾ ಪಡೆಗಳು ಸೂಕ್ಷ್ಮವಾಗಿ ತಮ್ಮ ಕಾರ್ಯತಂತ್ರವನ್ನು ಜಾರಿಗೊಳಿಸಿದವು. 'ಆಪರೇಷನ್ ಸಿಂಧೂರ್' ಹೆಸರಿನಲ್ಲಿ ನಡೆಸಿದ ವ್ಯವಸ್ಥಿತಿ, ಯೋಜಿತ ದಾಳಿ ಪಾಕಿಸ್ತಾನದ ಯುದ್ಧದ ತಯಾರಿಗೆ ಸರಿಯಾದ ಪೆಟ್ಟು ನೀಡಿತು. ಪಾಕಿಸ್ತಾನಕ್ಕೆ ಇದು ರಾಜತಾಂತ್ರಿಕವಾಗಿ ಹಿನ್ನಡೆಯನ್ನು ಉಂಟು ಮಾಡಿತು. ರಕ್ಷಣಾ ವಲಯದ ದೃಷ್ಠಿಯಲ್ಲಿಯೂ ಹೊಡೆತ ನೀಡಿತು ಮತ್ತು ತತ್ ಕ್ಷಣವಾಗಿ ದಾಳಿಗಳನ್ನು ನಿಲ್ಲಿಸುವ ಕುರಿತು ಆಲೋಚಿಸುವಂತೆ ಮಾಡಿತು.
ಕೇವಲ ಪ್ರತೀಕಾರವಲ್ಲ; ಪೂರ್ವನಿಯೋಜಿತ ತಂತ್ರ
ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಬಳಿಕ ಭಾರತ ನಡೆಸಿದ ತಳಮಟ್ಟದ ಅಧ್ಯಯನ, ಕಾರ್ಯಾಚರಣೆ ಮತ್ತು ಮೇ 9ರಂದು 26 ಭಾರತದ ಸ್ಥಳಗಳನ್ನು ಗುರಿಯಾಗಿಸಿ ಪಾಕಿಸ್ತಾನ ನಡೆಸಿದ ಡ್ರೋನ್‌ದಾಳಿಯನ್ನು ವ್ಯವಸ್ಥಿತವಾಗಿ ತಡೆಯಲಾಯಿತು. ಭಾರತದ ಪ್ರತಿಕ್ರಿಯೆ ಹಠಾತ್ ದಾಳಿಯಾಗಿರಲಿಲ್ಲ, ಇದು ಹಲವು ಲೆಕ್ಕಾಚಾರದ ಯೋಜಿತ ದಾಳಿಯಾಗಿತ್ತು. ಬಹು ಆಯಾಮದಲ್ಲಿ ಚರ್ಚಿಸಿದ ಮತ್ತು ಸಮಯಕ್ಕೆ ಸರಿಯಾಗಿ ನಡೆಸಿದ ದಾಳಿಯಾಗಿತ್ತು. ಮೇ 10ರ ತಡರಾತ್ರಿ 90 ನಿಮಿಷಗಳ ಕಾಲ ನಿಖರವಾದ ಯೋಜನೆಯೊಂದಿಗೆ ಪಾಕಿಸ್ತಾನದ ವಾಯುನೆಲೆಯ 11 ಪ್ರದೇಶದ ಮೇಲೆ ದಾಳಿ ಮಾಡಲಾಯಿತು. ಇದು ಶತ್ರುಗಳಿಗೆ ಅವರ ಪ್ರದೇಶದ ಆಳಕ್ಕೆ ನಡೆದು ನಡೆಸಿದ ದಾಳಿಯಾಗಿತ್ತು. ಕೆಲವು ಗಂಟೆಗಳ ನಂತರ ನಡೆಯಬೇಕಾದ ಕಾರ್ಯಾಚರಣೆಗೆ ವೇದಿಕೆಯಾಯಿತು. ಇದು ಕೇವಲ ಪ್ರತೀಕಾರದ ದಾಳಿಯಾಗಿರಲಿಲ್ಲ. ಪಾಕಿಸ್ತಾನದ ವಾಯುದಾಳಿಯನ್ನು ಛಿದ್ರಗೊಳಿಸುವ, ಅದು ಯುದ್ಧ ಮಾಡುವುದನ್ನು ತಡೆಯುವ ರಕ್ಷಣಾತ್ಮಕ ತಂತ್ರವಾಗಿತ್ತು.

ಪಾಕಿಸ್ತಾನ ವಾಯುಪಡೆಯ ಬೆನ್ನೆಲುಬು ಮುರಿಯುವುದು
ಪ್ರಮುಖ ಗುರಿಗಳಲ್ಲಿ ಪಾಕಿಸ್ತಾನ ವಾಯುಪಡೆಯ ಕೆಲವು ಪ್ರಮುಖ ಸ್ಥಳಗಳು ಸೇರಿದ್ದವು. ಇವುಗಳಲ್ಲಿ
ನೂರ್ ಖಾನ್ ಏರ್ ಬೇಸ್ (ರಾವಲ್ಪಿಂಡಿ) - ಮಿಲಿಟರಿ ಸಂಚಾರದ ವಿಐಪಿ ಹಬ್, ಪಾಕಿಸ್ತಾನದ ಜನರಲ್ ಹೆಡ್ ಕ್ವಾಟ್ರರ್ಸ್ ಸಮೀಪವೇ ಇದು ಇದೆ. ಇದರ ಮೇಲಿನ ದಾಳಿ ಸಂಯೋಜನೆಯನ್ನು ಕಡಿತಗೊಳಿಸುವ ಮಾದರಿಯಲ್ಲಿಯೇ ನಡೆಯಿತು.
OPERATION SINDOOR
— ADG PI - INDIAN ARMY (@adgpi) May 10, 2025
Indian Army Pulverizes Terrorist Launchpads
As a response to Pakistan's misadventures of attempted drone strikes on the night of 08 and 09 May 2025 in multiple cities of Jammu & Kashmir and Punjab, the #Indian Army conducted a coordinated fire assault on… pic.twitter.com/2i5xa3K7uk
ಸರಗೋಧಾ (ಮುಷಾಫ್ ಬೇಸ್) - ಇದು ಪಾಕಿಸ್ತಾನದ ಅಣ್ವಸ್ತ್ರ ವಿತರಣಾ ವೇದಿಕೆಗಳ ಮೂಲವಾಗಿದೆ. ಎಲಿಟ್ ಕಾಂಬಾಟ್ ಕಮಾಂಡರ್ಸ್ ಶಾಲೆಯೂ ಇಲ್ಲಿದೆ. ಇದರ ನಾಶ ದೇಶವನ್ನು ಗೊಂದಲಕ್ಕೆ ತಳ್ಳಿತು, ಪಾಕಿಸ್ತಾನ ವಾಯುಪಡೆಯನ್ನು ಅಂಧಕಾರಕ್ಕೆ ದೂಡಿತು.
ರಫೀಕಿ, ಮುರೀದ್, ಸಿಯಾಲ್‌ಕೋಟ್, ಸ್ಕಾರ್ಡು, ಜೇಕೊಬಾಬಾದ್, ಸುಕ್ಕರ್, ಪಾಸ್ರೂರ್, ಚುನಿಯನ್ ಮತ್ತು ಭೋಲಾರಿ - ಇವುಗಳೆಲ್ಲಾ ಒಟ್ಟಾಗಿ ಪಾಕಿಸ್ತಾನದ ಎಫ್-16 ವಿಮಾನಗಳು, ಜೆಎಫ್-17 ಥಂಡರ್ಸ್, ಮಿರೇಜ್‌ಗಳು ಮತ್ತು ಎಲೆಕ್ಟ್ರಾನಿಕ್ ಯುದ್ಧ ಘಟಕಗಳನ್ನು ಹೊಂದಿವೆ. ಇವುಗಳ ಮೇಲಿನ ದಾಳಿ ಪಾಕಿಸ್ತಾನದ ವಾಯುಪಡೆಯ ದಾಳಿಯ ಬಹುತೇಕ ಅಂಶಗಳನ್ನು ಮೂಲದಲ್ಲಿಯೇ ತಡೆಯುವಂತೆ ಮಾಡಿತು.
ಈ ದಾಳಿಗಳು ವಾಯುಪಡೆಯ ಸ್ಕ್ವಾಡ್ರನ್, ಡ್ರೋನ್ ತಾಣಗಳು, ರಡಾರ್ ಜಾಲಗಳನ್ನು ಮತ್ತು ಯುದ್ಧಕ್ಕೆ ಸಿದ್ಧವಾದ ವಿಮಾನಗಳನ್ನು ನಿಷ್ಕ್ರಿಯಗೊಳಿಸಿತು, ಒಂದು ರಾತ್ರಿಯಲ್ಲಿಯೇ ಪಾಕಿಸ್ತಾನದ ವಾಯುಪಡೆಯ ಬಲವನ್ನು ಕಡಿಮೆ ಮಾಡಿತು.
ಆಪರೇಷನ್ ಸಿಂಧೂರ್: ನಿರ್ಣಾಯಕ ಹೊಡೆತ
ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಮುಂದಿನ ಹಂತವಾಗಿ ಕೆಲವೇ ಗಂಟೆಗಳ ನಂತರ, ಭಾರತ ನಿಖರವಾಗಿ 1:04ಕ್ಕೆ ಪ್ರಾರಂಭವಾಯಿತು, ಪಾಕಿಸ್ತಾನ ಮತ್ತು ಪಾಕ್-ಆಕ್ರಮಿತ ಕಾಶ್ಮೀರದಲ್ಲಿ 9 ಸ್ಥಳಗಳನ್ನು ಗುರಿಯಾಗಿಸಿಕೊಂಡಿತ್ತು. ಇವುಗಳಲ್ಲಿ ಬಹಾವಲ್ಪುರ್ ಮತ್ತು ಮುರಿದ್ಕೆಯಲ್ಲಿನ ಭಯೋತ್ಪಾದನಾ ಕೇಂದ್ರಗಳು ಸೇರಿದ್ದವು. ಜೈಷ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೋಯ್ಬಾ ಎಂಬ ಸಂಘಟನೆಗಳ ಮುಖ್ಯಸ್ಥರು, ಕಳೆದ ಮೂರು ದಶಕಗಳಲ್ಲಿ ಭಾರತದ ಭೂಮಿಯಲ್ಲಿ ನಡೆಸಿದ ಮಾರಕ ದಾಳಿಗಳ ಸಂಚನ್ನು ಇಲ್ಲಿಯೇ ಯೋಜಿಸಿದ್ದರು.
ಭಾರತ ಈ ಸ್ಥಳಗಳನ್ನು ಸರಿಯಾದ ಲೆಕ್ಕಾಚಾರದ ಮೇಲೆಯೇ ಆಯ್ಕೆ ಮಾಡಲಾಗಿತ್ತು. ಈ 9 ಸ್ಥಳಗಳು ಸಹ ಉಗ್ರರಿಗೆ ಮೂಲ ಸೌಲಭ್ಯ ಒದಗಿಸುವ, ತರಬೇತಿ ನೀಡುವ, ಭಾರತೀಯ ಆಸ್ತಿಗಳ ಮೇಲೆ ದಾಳಿ ಮಾಡುವ ಸ್ಥಳಗಳಾಗಿದ್ದವು.
ಸಿಯಾಲ್ಕೋಟ್ ಮತ್ತು ಕೋಟ್ಲಿ - ಗಡಿಯಿಂದ ನುಸುಳುವ, ಮೂಲ ಸೌಕರ್ಯಕ್ಕೆ ಪ್ರಮುಖ ಸ್ಥಳಗಳು.
ಭೀಂಬರ್ - ಐಎಸ್‌ಐ ಸಂಯೋಜಿತ ಕಾರ್ಯಾಚರಣೆಯ ಕೇಂದ್ರ.
ಬಹಾವಲ್ಪುರ್ ಮತ್ತು ಮುರಿದ್ಕೆ - ಜೆಎಂ ಮತ್ತು ಎಲ್‌ಇಟಿಯ ಆಧ್ಯಾತ್ಮಿಕ ಮತ್ತು ಕಾರ್ಯಾಚರಣಾ ಮುಖ್ಯ ಕೇಂದ್ರ.
25 ನಿಮಿಷಗಳ ನಿಖರವಾದ ದಾಳಿ ದೊಡ್ಡ ಸಂದೇಶವನ್ನು ಕಳುಹಿಸಿತು: ಭಾರತ ಕೇವಲ ಪ್ರತಿಕ್ರಿಯಿಸುತ್ತಿಲ್ಲ, ಅದು ಪಾಕಿಸ್ತಾನದ ಭಯೋತ್ಪಾದಕರ ರಫ್ತು ಕಾರ್ಯವನ್ನು ವ್ಯವಸ್ಥಿತವಾಗಿ ಅಸ್ತವ್ಯಸ್ತಗೊಳಿಸುತ್ತಿದೆ.
ಆಕಾಶ್ ತೀರ್: ಭಾರತದ ಶಸ್ತ್ರಾಗಾರದ ಬದಲಾವಣೆಯ ಆಯುಧ
ಸ್ವದೇಶಿ ನಿರ್ಮಿತವಾದ ಆಕಾಶ್ ತೀರ್ ಭಾರತದ ಮಿಲಿಟರಿ ಶಸ್ತ್ರಾಗರಕ್ಕೆ ಹೊಸ ಶಕ್ತಿಯನ್ನು ತುಂಬಿದೆ. ಆಕಾಶ್ ತೀರ್ ಪರಿಣಾಮಕಾರಿ, ರಿಯಲ್ ಟೈಂ ಟಾರ್ಗೆಟ್‌ಗಳನ್ನು ತಲುಪಬಲ್ಲ ಸಾಧನಾ ವ್ಯವಸ್ಥೆಯಾಗಿದೆ. ಈ ಸಾಧನವನ್ನು ಭಾರತದ ಡಿಆರ್‌ಡಿಒ, ಬಿಇಎಲ್ ಸೇರಿಕೊಂಡು ಅಭಿವೃದ್ಧಿಗೊಳಿಸಿದ್ದು, ಇಸ್ರೋ, ನಾವಿಕ್-ಚಾಲಿತ ನಿಖರ ಮಾರ್ಗದರ್ಶನ, ಉಪಗ್ರಹ ಸಂಪರ್ಕಿತ ಸ್ವಾಯತ್ತತೆಯ ನೆರವು ನೀಡಿದೆ. ಡ್ರೋನ್‌ಗಳನ್ನು ಬಳಸಿಕೊಂಡು ವಾಯುಪ್ರದೇಶದ ನಿಯಂತ್ರಣ ಮತ್ತು ನಿಖರ ದಾಳಿಗಳನ್ನು ಇದು ಸಾಧಿಸುತ್ತದೆ.
ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಆಕಾಶ್ ತೀರ್ ಸಾಮರ್ಥ್ಯ ಅನಾವರಣಗೊಂಡಿತು, ಭಾರತದ ಯುದ್ಧದ ಇತಿಹಾಸದಲ್ಲಿ ಹೊಸ ಕ್ಷಣಕ್ಕೆ ಸಾಕ್ಷಿಯಾಯಿತು. ಇದೇ ಮೊದಲ ಬಾರಿಗೆ ಪಶ್ಚಿಮತೇತರ ರಾಷ್ಟ್ರವು ಸಂಪೂರ್ಣ ಸ್ವದೇಶಿ, ಸಮನ್ವಯತೆಯ, ಕೃತಕ ಬುದ್ಧಿಮತ್ತೆಯ ಸಹಾಯವಿರುವ ಉಪಗ್ರಹ-ಸಂಬಂಧಿತ ಸಾಧನದ ಶಕ್ತಿಯನ್ನು ಪ್ರದರ್ಶಿಸಿತು. ಇದು ಯುದ್ಧ ಕಾರ್ಯಾಚರಣೆಗಳ ಭವಿಷ್ಯವನ್ನು ಪುನರ್ ವ್ಯಾಖ್ಯಾನಿತು. ಎಐ-ಆಧಾರಿತ ತಂತ್ರಜ್ಞಾನದ ಸಹಾಯ ಇರುವ ಇದು ಭವಿಷ್ಯದಲ್ಲಿ ಯುದ್ಧಭೂಮಿಯನ್ನು ಹೇಗೆ ರೂಪಿಸುತ್ತದೆ ಎಂಬುದನ್ನು ತೋರಿಸಿತು.
ಇಸ್ರೋ ಉಪಗ್ರಹ ಜಾಲದ ಸಹಾಯ ಮತ್ತು ಎಐ ಆಧಾರಿತ ತಂತ್ರಜ್ಞಾನ ಬಳಕೆ ಮಾಡಿಕೊಂಡು ಆಕಾಶ್ ತೀರ್ ಬಹುಪದರದ ರಕ್ಷಣಾ ಮತ್ತು ದಾಳಿಯ ಕಮಾಂಡ್ ವ್ಯವಸ್ಥೆಯಾಗಿ ಕೆಲಸ ಮಾಡುತ್ತದೆ. ಇದು ರಿಯಲ್-ಟೈಮ್ ಉಪಗ್ರಹ ಚಿತ್ರಗಳು, ನಾವಿಗೇಷನ್ ಮತ್ತು ಸ್ವಾಯತ್ತ ಡ್ರೋನ್‌ಗಳನ್ನು ಬಳಸಿಕೊಂಡು ವಾಯುಪಡೆಯ ಬೆದರಿಕೆಗಳನ್ನು ಗುರಿಯಾಗಿಸಿ ನಿಖರವಾಗಿ ನಿಷ್ಕ್ರಿಯಗೊಳಿಸುತ್ತದೆ. ಇದರಿಂದ ಭಾರತದ ಸೈನಿಕ ಕಾರ್ಯಾಚರಣೆಯ ಶಕ್ತಿ ಹೆಚ್ಚಿದೆ.
ಆಕಾಶ್ ತೀರ್ ಉದಯ 'ಆಪರೇಷನ್ ಸಿಂಧೂರ್'ನಲ್ಲಿ ಭಾರತದ ಪ್ರತಿಕ್ರಿಯೆಗೆ ಕೇವಲ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿರಲಿಲ್ಲ. ಇದು ಭಾರತದ ತಂತ್ರಜ್ಞಾನ ಸಾಮರ್ಥ್ಯದ ಪ್ರದರ್ಶನವಾಗಿತ್ತು. ಇದು ಪ್ರತಿಸ್ಪರ್ಧಿಗಳಿಗೆ ಸ್ಪಷ್ಟ ಸಂದೇಶವನ್ನು ಕಳುಹಿಸಿದೆ. ಭಾರತದ ಸೈನಿಕ ಸಾಮರ್ಥ್ಯಗಳು ಭವಿಷ್ಯದಲ್ಲಿ ಹೇಗಿರಲಿವೆ? ಎಂಬುದನ್ನು ತೋರಿಸಿತು.
ಮಾನಸಿಕ ಮತ್ತು ತಂತ್ರಜ್ಞಾನದ ಪ್ರಾಬಲ್ಯ
ಭಾರತೀಯ ಸೇನೆಯ ಪ್ರತಿಕ್ರಿಯೆ ಐತಿಹಾಸಿಕವಾಗಿದ್ದು ಹೇಗೆ?. ಈ ದಾಳಿಯ ಉದ್ದೇಶ ಪಾಕಿಸ್ತಾನದ ಭೌತಿಕ ಸಾಮರ್ಥ್ಯಗಳನ್ನು ನಾಶಮಾಡುವುದು ಮತ್ತು ಅದರ ನಾಯಕತ್ವವನ್ನು ಮಾನಸಿಕವಾಗಿ ನಿಷ್ಕ್ರಿಯಗೊಳಿಸುವುದು ಆಗಿತ್ತು. ನೂರ್ ಖಾನ್ ಏರ್‌ಬೇಸ್ ಮೇಲೆ ದಾಳಿ ಮಾಡುವ ಮೂಲಕ, ಭಾರತ ಇಸ್ಲಾಮಾಬಾದ್‌ನ ಹತ್ತಿರಕ್ಕೆ ಹೊಡೆದು ಪಾಕಿಸ್ತಾನದ ಸೈನಿಕ ಮತ್ತು ರಾಜಕೀಯದ ಆತ್ಮವಿಶ್ವಾಸವನ್ನು ಕಂಗೆಡಿಸಿತು. ಸ್ಕಾರ್ಡ್ ಮೇಲಿನ ದಾಳಿ ಮೂಲಕ ಭಾರತ ಗಿಲ್ಗಿತ್-ಬಾಲ್ಟಿಸ್ತಾನದಲ್ಲಿ ಅಂತರವನ್ನು ಮೂಡಿಸಿತು. ರಡಾರ್ ಮೂಲಸೌಕರ್ಯವನ್ನು ನಿಷ್ಕ್ರಿಯಗೊಳಿಸುವ ಮೂಲಕ, ಭಾರತ ಪಾಕಿಸ್ತಾನದ ನೆಲದಲ್ಲಿಯೇ ಅದರ ಆಕಾಶವನ್ನು ಕತ್ತಲೆಗೆ ನೂಕಿತು.
ಭಾರತ ನಡೆಸಿದ್ದು ಸಾಮಾನ್ಯವಾದ ವಾಯು ದಾಳಿ ಅಲ್ಲ. ಇದು ಭಾರತೀಯ ವಾಯುಪಡೆಯ, ಗುಪ್ತಚರ ಸಂಸ್ಥೆಗಳ ಮತ್ತು ತಂತ್ರಜ್ಞಾನದ ನಡುವಿನ ಅಪ್ರತಿಮ ಸಮನ್ವಯದ ಪ್ರದರ್ಶನವಾಗಿತ್ತು. ದಾಳಿ ಮಾಡಿದ ಪ್ರತಿಯೊಂದು ಗುರಿಯೂ ಕೇವಲ ಸಂಕೇತಿಕವಾಗಿರಲಿಲ್ಲ, ತಂತ್ರಜ್ಞಾನದ ಪರಿಣಾಮಗಳ ಶಕ್ತಿಯನ್ನು ಹೇಳುತ್ತಿತ್ತು.
ಸಿದ್ದಾಂತ ಬದಲಾಗಿದೆ, ಹೊಣೆಗಾರಿಕೆಯೂ ಕೂಡ
ಪಾಕಿಸ್ತಾನ ದೀರ್ಘಕಾಲದಿಂದಲೂ ಅಣ್ವಸ್ತ್ರವನ್ನು ಮುಂದಿಟ್ಟುಕೊಂಡು ಭಾರತೀಯ ಪ್ರತೀಕಾರವನ್ನು ತಡೆಯಲು ಪ್ರಯತ್ನ ನಡೆಸುತ್ತಿತ್ತು. ಈ ಸಿದ್ಧಾಂತವನ್ನು ಈಗ ಸಂಪೂರ್ಣವಾಗಿ ಬದಲಾಯಿಸಲಾಯಿತು. ಭಾರತದ ದಾಳಿಗಳು ಪಾಕಿಸ್ತಾನದ ಬೆದರಿಕೆಗಳನ್ನು ಬಯಲಿಗೆ ತಂದಿತು. ಒಂದರ ಬಳಿಕ ಒಂದು ವಾಯುನೆಲೆ ಮೇಲೆ ದಾಳಿ ನಡೆದ ಬಳಿಕ ಇಸ್ಲಾಮಾಬಾದ್‌ನ ಅಂದಾಜು ಲೆಕ್ಕಾಚಾರ ರೇಖೆಗಳು ಮಾಯವಾಗಿದವು.
ಅಪಾರವಾದ ನಷ್ಟದ ಬಳಿಕ ಸೇನಾ ಕಮಾಂಡ್‌ನಲ್ಲಿ ಸಂಪೂರ್ಣ ಸಂಪರ್ಕ ವ್ಯತ್ಯಯ ಉಂಟಾಯಿತು. ಪಾಕಿಸ್ತಾನದ ಡಿಜಿಎಂಒ ಭಾರತವನ್ನು ಸಂಪರ್ಕಿಸಿ, ಯುದ್ಧ ವಿರಾಮವನ್ನು ಕೇಳಿದರು. ಹಿಂಬಾಗಿಲ ಮೂಲಕ ಸೇನಾ ಮುಖ್ಯಸ್ಥ ಜನರಲ್ ಆಸಿಮ್ ಮುನೀರ್ ಅಮೆರಿಕಾ, ಸೌದಿ ಅರೇಬಿಯಾ ಮತ್ತು ಚೀನಾವನ್ನು ಮಧ್ಯಸ್ಥಿಕೆಗೆ ಕರೆತರಲು ಪ್ರಯತ್ನಿಸಿದರು. ಆದರೆ ಭಾರತ ಇನ್ನೂ ಯಾವುದನ್ನೂ ಮುಗಿಸಿಲ್ಲ.
ಭಾರತ ಯಾವುದೇ ಮಾರ್ಗದ ಮೂಲಕ ರಾಜತಾಂತ್ರಿಕ ಮಾತುಕತೆಯಲ್ಲಿ ತೊಡಗಿಕೊಳ್ಳಲು ನಿರಾಕರಿಸಿತು. ಶಿಷ್ಟಾಚಾರಕ್ಕೆ ದೃಢವಾಗಿ ಉಳಿದುಕೊಂಡಿತು ಮತ್ತು ತನ್ನ ಸಶಸ್ತ್ರ ಪಡೆಗಳು ಹೆಚ್ಚಿನ ದಾಳಿಗೆ ಸಿದ್ಧವಾಗಿವೆ ಎಂಬ ಸಂದೇಶ ನೀಡಿತು. ಆದರೆ ದಾಳಿ ಈ ಹಂತಕ್ಕೆ ಹೋಗಿದ್ದರೆ ಪಾಕಿಸ್ತಾನಕ್ಕೆ ಅಪಾರವಾದ ಆರ್ಥಿಕ ಹೊಡೆತ ಬೀಳುತ್ತಿತ್ತು. ಅಗತ್ಯವಾದರೆ ಆ ಹಂತಕ್ಕೆ ಹೋಗಲು ಭಾರತ ಸಿದ್ಧವಾಗಿತ್ತು.
ಸ್ಪಷ್ಟವಾದ ತಂತ್ರ: ಹೊಸ ಪ್ರಾದೇಶಿಕ ಸಿದ್ದಾಂತ
ಆಪರೇಷನ್ ಸಿಂಧೂರ್ ಕೇವಲ ಒಂದು ಮಿಲಿಟರಿ ಕಾರ್ಯಾಚರಣೆಯಲ್ಲ. ಇದು ಹೊಸ ಪ್ರಾದೇಶಿಕ ಸಿದ್ದಾಂತವಾಗಿದೆ. ಹಳೆಯ ಸಿದ್ದಾಂತಗಳು ಈಗ ಅನ್ವಯವಾಗುವುದಿಲ್ಲ. ಭಾರತ ಹೊಸ ಅಧ್ಯಾಯವನ್ನು ಆರಂಭಿಸಿದೆ.
ಉಗ್ರರ ದಾಳಿಗಳು ಸಂಪೂರ್ಣ ಪ್ರಮಾಣದ ಪ್ರತೀಕಾರಕ್ಕೆ ಆಹ್ವಾನ ಕೊಡುತ್ತದೆ, ಅಳತೆ ಮಾಡಿದ ಪ್ರತಿಕ್ರಿಯೆ ಅಲ್ಲ.
ಕೇವಲ ಪ್ರದರ್ಶನದಿಂದ ಮಾತ್ರವಲ್ಲ. ಪರಂಪರೆಯ ಮೇಲುಗೈಯಿಂದ ಎಲ್ಲವೂ ನಿರ್ಧಾರವಾಗುತ್ತದೆ.
ಭಾರತವು ಈಗಾಗಲೇ ಸ್ಪಷ್ಟಪಡಿಸಿದೆ, ಇಂಡಸ್ ನೀರು ಒಪ್ಪಂದವನ್ನು ರದ್ದುಗೊಳಿಸಲಾಗಿದೆ. ಯುದ್ಧ ವಿರಾಮ ಇರಲಿ ಅಥವಾ ಇಲ್ಲದಿರಲಿ ಏಪ್ರಿಲ್ 22 ಭಯೋತ್ಪಾದನಾ ದಾಳಿಗೆ ಪ್ರತಿಯಾಗಿ ತೆಗೆದುಕೊಂಡ ನಿರ್ಣಯಗಳನ್ನು ವಾಪಸ್ ಪಡೆಯುವುದಿಲ್ಲ.
ಶಕ್ತಿ ಸಮತೋಲನದಲ್ಲಿ ಆಗಿದೆ ಬದಲಾವಣೆ
ಅಂತಿಮ ಫಲವೇನು?. ಪಾಕಿಸ್ತಾನ ಅವಮಾನಗೊಂಡಿತು, ಅದರ ತಂತ್ರಜ್ಞಾನದ ಜ್ಞಾನ, ಆಳ ಬಹಿರಂಗಗೊಂಡಿತು ಮತ್ತು ಜಿಹಾದಿ ಗುಂಪುಗಳ ಮೇಲಿನ ಅವರ ಅವಲಂಬನೆ ಬಹಿರಂಗವಾಯಿತು. ಸಂಪೂರ್ಣ ನಾಶವಾಗುವ ಅಪಾಯವನ್ನು ಎದುರಿಸುವ ಬದಲು ಶಾಂತಿ ಒಪ್ಪಂದಕ್ಕಾಗಿ ಬೇಡಿಕೊಳ್ಳುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.
ಪಾಕಿಸ್ತಾನ ಅಮೆರಿಕ ಮತ್ತು ನಂತರ ಭಾರತವನ್ನು ಸಂಪರ್ಕಿಸಿದಾಗ, ಈ ಸಂದೇಶವು ಜಗತ್ತಿಗೆ ತಿಳಿಯಿತು. ಭಾರತ ಈಗ ದಕ್ಷಿಣ ಏಷ್ಯಾದಲ್ಲಿ ವೇಗವಾಗಿ ಪರಿಣಾಮಗಳನ್ನು ನಿಯಂತ್ರಿಸುತ್ತದೆ. ತಪ್ಪು ಲೆಕ್ಕಾಚಾರ ಹೇಗೆ ವಿನಾಶಕ್ಕೆ ಕಾರಣವಾಗುತ್ತದೆ ಎಂಬುದನ್ನು ತಿಳಿಸುತ್ತದೆ.
ಆಪರೇಷನ್ ಸಿಂಧೂರ್ ಇನ್ನೂ ಜಾರಿಯಲ್ಲಿದೆ. ಭಾರತದ ಅಧಿಕಾರಿಗಳು ಎಲ್ಲಾ ಸಂಬಂಧಿಸಿದ ರಾಷ್ಟ್ರಗಳಿಗೆ ಪಾಕಿಸ್ತಾನ ಗುಂಡು ಹಾರಿಸಿದರೆ, ನಾವು ಹಾರಿಸುತ್ತೇವೆ ಎಂದು ತಿಳಿಸಿದ್ದಾರೆ. ಇದು ಹೊಸದಾದ ಆದರೆ ಸಾಮಾನ್ಯವಾದ ಪ್ರತಿಕ್ರಿಯೆ ಆಗಿರುವುದಿಲ್ಲ.
-
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್ -
Karnataka Rain Alert: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ, ಮಿನಿ ಕಾಶ್ಮೀರದಂತಾದ ರಸ್ತೆಗಳು; ಇನ್ನೆಷ್ಟು ದಿನ ವರುಣನ ಆರ್ಭಣ?












Click it and Unblock the Notifications