ಅಯ್ಯಪ್ಪನ ದರ್ಶನಕ್ಕೆ ಆನ್ ಲೈನ್ ಬುಕ್ಕಿಂಗ್

ಕೇರಳ, ಅ.16 : ಶಬರಿಮಲೆಯಲ್ಲಿ ಸರದಿ ಸಾಲಿನಲ್ಲಿ ಗಂಟೆಗಟ್ಟಲೇ ನಿಲ್ಲುವುದಕ್ಕೆ ಮುಕ್ತಿ ದೊರಕಿದೆ. ಅಯ್ಯಪ್ಪನ ದರ್ಶನಕ್ಕೆ ಬುಕ್ಕಿಂಗ್ ಮಾಡಿಸಿಕೊಂಡು ತೆರಳುವ ವ್ಯವಸ್ಥೆಗೆ ಕೇರಳ ಸರ್ಕಾರ ಚಾಲನೆ ನೀಡಿದೆ.

ಭಕ್ತರ ಅನುಕೂಲಕ್ಕಾಗಿ ಕೇರಳ ಸರ್ಕಾರ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಆನ್‌ಲೈನ್‌ ಸೇವೆಯನ್ನು ಆರಂಭಿಸಿದೆ. ವಾರ್ಷಿಕ ಮಂಡಲ ಮಕರವಿಳಕ್ಕು ಯಾತ್ರಾ ಋತುವಿನಲ್ಲಿ ಅಯ್ಯಪ್ಪನ ದರ್ಶನಕ್ಕೆ ಆನ್‌ಲೈನ್‌ ಬುಕ್ಕಿಂಗ್‌ ಇದೀಗ ಆರಂಭಗೊಂಡಿದೆ. ಕಳೆದ ಎರಡು ವರ್ಷಗಳಲ್ಲಿ ಈ ಬುಕ್ಕಿಂಗ್ ಸೇವೆ ಹೆಚ್ಚು ಜನಪ್ರಿಯವಾಗಿರುವ ಕಾರಣ ಈ ಬಾರಿ ಮುಂಚಿತವಾಗಿಯೇ ಸೇವೆ ಆರಂಭಿಸಲಾಗಿದೆ.

Sabarimala temple

ಯಾತ್ರಾರ್ಥಿಗಳು http://www.keralapolice.org/ ವೆಬ್ ಸೈಟ್ ಗೆ ಭೇಟಿ ನೀಡಬೇಕು. ನಂತರ ದರ್ಶನದ ಸಮಯವನ್ನು ಕಾಯ್ದಿರಿಸಬೇಕು. ಯಾತ್ರಾರ್ಥಿಗಳು ತಮ್ಮ ಇಷ್ಟದ ದಿನವನ್ನು ಆಯ್ದುಕೊಳ್ಳುವ ಸೌಲಭ್ಯವನ್ನು ಈ ವ್ಯವಸ್ಥೆಯಲ್ಲಿ ಕಲ್ಪಿಸಲಾಗಿದೆ.

ಆನ್‌ಲೈನ್‌ ಬುಕ್ಕಿಂಗ್‌ ಮಾಡಿದ ಯಾತ್ರಿಕರು ಪಂಪೆಯಿಂದ ಸರತಿ ಸಾಲಿನಲ್ಲಿ ನಿಲ್ಲುವ ಬದಲಾಗಿ ನೇರವಾಗಿ ವಲಿಯ ಪಂದಲ್‌ಗೆ ಹೋಗಿ ಅಲ್ಲಿಂದ ಕ್ಯೂ ಸೇರಿಕೊಳ್ಳಬಹುದು. ಆನ್‌ಲೈನ್‌ ದರ್ಶನ ಬುಕ್ಕಿಂಗ್‌ ಮಾಡಿದಾಗ ಒಂದು ಕೂಪನ್‌ ಸಿಗುತ್ತದೆ. ಅದರಲ್ಲಿ ದರ್ಶನದ ದಿನ ಮತ್ತು ಸಮಯದ ವಿವರವಿರುತ್ತದೆ.

ಪಂಪಾದಲ್ಲಿರುವ ವರ್ಚುವಲ್‌ ಕ್ಯೂ ಪರಿಶೀಲಿನಾ ಕೇಂದ್ರದಲ್ಲಿ ಆನ್‌ಲೈನ್‌ ದರ್ಶನ ಬುಕ್ಕಿಂಗ್‌ ಮಾಡಿದವರು ಈ ಕೂಪನ್‌ ಮತ್ತು ಫೋಟೊ ಇರುವ ಗುರುತಿನ ಕಾರ್ಡ್‌ ತೋರಿಸಿ ದೃಢೀಕರಣ ಪಡೆದುಕೊಳ್ಳಬೇಕು. ಇಲ್ಲಿರುವ ಪೊಲೀಸರು ಅವರಿಗೆ ದೇವರ ದರ್ಶನ ಪಡೆಯಲು ನೆರವು ನೀಡುತ್ತಾರೆ.

ಹೀಗೆ ಬುಕ್‌ ಮಾಡಿ : ವೆಬ್ ಸೈಟ್ ಗೆ ಭೇಟಿ ನೀಡಿ ನಂತರ ನೀವು ಶಬರಿಮಲೆಗೆ ಹೋಗುವ ದಿನವನ್ನು ನಮೂದಿಸಿ. ದಿನಾಂಕ, ವೇಳೆ ಇರುವ ಕೂಪನ್‌ ಬರುತ್ತದೆ. ಅದರ ಪ್ರಿಂಟ್‌ ತೆಗೆದುಕೊಳ್ಳಿ, ಈ ಕೂಪನ್‌ ಜೊತೆ ಶಬರಿಮಲೆಗೆ ತೆರಳಿ.

ಅಲ್ಲಿಗೆ ತೆರಳಿದ ನಂತರ ಕೇಂದ್ರದಲ್ಲಿ ಪೊಲೀಸರಿಗೆ ನಿಮ್ಮ ಐಡಿ ಕಾರ್ಡ್‌, ಕೂಪನ್‌ ತೋರಿಸಿ. ಅಲ್ಲಿ ಪಂಪಾದಿಂದ ಸರತಿ ಸಾಲಿನಲ್ಲಿ ನಿಲ್ಲುವ ಬದಲು ನೇರವಾಗಿ ವಲಿಯ ಪಂದಲ್‌ಗೆ ದರ್ಶನಕ್ಕೆ ಕಳುಹಿಸುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+