ಆನ್‌ಲೈನ್‌ನಲ್ಲಿ ಬೆಟ್ಟಿಂಗ್: ಒಂದು ತಿಂಗಳಲ್ಲಿ ಛತ್ತೀಸ್‌ಗಢದಲ್ಲಿ 250 ಮಂದಿ ಬಂಧನ
ರಾಯ್‌ಪುರ, ಅ.24 : ಆನ್‌ಲೈನ್ ಅಪ್ಲಿಕೇಶನ್ ಮೂಲಕ ಬೆಟ್ಟಿಂಗ್‌ನಲ್ಲಿ ಜನರನ್ನು ತೊಡಗಿಸಿಕೊಳ್ಳುವಂತೆ ಮಾಡುತ್ತಿದ್ದ 250 ಕ್ಕೂ ಹೆಚ್ಚು ಜನರನ್ನು ಛತ್ತೀಸ್‌ಗಢ ಪೊಲೀಸರು ಬಂಧಿಸಿದ್ದಾರೆ.
ಆನ್‌ಲೈನ್ ಅಪ್ಲಿಕೇಶನ್ ಮಹಾದೇವ್ ಮೂಲಕ ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ತೊಡಗಿಸಿಕೊಳ್ಳಲು ಜನರನ್ನು ಸೆಳೆಯಲು ಛತ್ತೀಸ್‌ಗಢದಲ್ಲಿ ಹಲವು ಕೇಂದ್ರಗಳನ್ನು ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಪೊಲೀಸರು ಕಳೆದ ಒಂದು ತಿಂಗಳಿನಿಂದ 250 ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದುಬೈನಿಂದ ಕಾರ್ಯನಿರ್ವಹಿಸುವ ಜನರ ಗುಂಪು ಈ ಆನ್‌ಲೈನ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಆಪ್ ಡೌನ್‌ಲೋಡ್ ಮಾಡಲು ಮತ್ತು ಬೆಟ್ಟಿಂಗ್‌ನಲ್ಲಿ ತೊಡಗಿಸಿಕೊಳ್ಳಲು ಜನರನ್ನು ಆಕರ್ಷಿಸಲು ದೂರದ ಪ್ರದೇಶಗಳಲ್ಲಿ ಕೇಂದ್ರಗಳನ್ನು ತೆರೆಯಲಾಗಿದೆ. ಇಂತಹ ರಾಜ್ಯಗಳಲ್ಲಿ ಛತ್ತೀಸ್‌ಗಢವೂ ಒಂದಾಗಿದೆ.
"ಆರೋಪಿಗಳು ಸುಮಾರು 30 ಕೇಂದ್ರಗಳನ್ನು ತೆರೆದಿದ್ದಾರೆ. ಹೆಚ್ಚಾಗಿ ಛತ್ತೀಸ್‌ಗಢದಲ್ಲಿ ಕೇಂದ್ರಗಳನ್ನು ತೆರೆದಿದ್ದಾರೆ. ಪ್ರತಿಯೊಂದು ಕೇಂದ್ರಗಳಿಂದ 200 ಕೋಟಿಗೂ ಹೆಚ್ಚು ವಹಿವಾಟು ನಡೆಯುತ್ತದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದುವರೆಗೆ 25 ಪ್ರಕರಣಗಳಲ್ಲಿ 258 ಜನರನ್ನು ಬಂಧಿಸಲಾಗಿದೆ. ಅಪ್ಲಿಕೇಶನ್ ಸುಮಾರು ನಾಲ್ಕು ಮಿಲಿಯನ್ ಡೌನ್‌ಲೋಡ್‌ಗಳನ್ನು ಹೊಂದಿದೆ ಮತ್ತು ಹೆಚ್ಚಿನ ಬೆಟ್ಟಿಂಗ್‌ಗಳು 1,000 ರಿಂದ 5,000 ರೂಪಾಯಿ ವ್ಯಾಪ್ತಿಯಲ್ಲಿವೆ" ಎಂದು ಪೊಲೀಸರು ಹೇಳಿದ್ದಾರೆ.

1,000 ರಿಂದ 5,000 ರೂಪಾಯಿ ಬೆಟ್ಟಿಂಗ್
ರಾಯ್‌ಪುರ, ಭಿಲಾಯಿ ಮತ್ತು ಬಿಲಾಸ್‌ಪುರ ಮೂರು ಜಿಲ್ಲೆಗಳ ಪೊಲೀಸ್ ತಂಡಗಳು ಆನ್‌ಲೈನ್ ಅಪ್ಲಿಕೇಶನ್‌ಗೆ ಸಂಬಂಧಿಸಿದ ಪ್ರಕರಣಗಳ ತನಿಖೆ ನಡೆಸುತ್ತಿವೆ. ಈವರೆಗೆ 25 ಪ್ರಕರಣಗಳಲ್ಲಿ 258 ಜನರನ್ನು ಬಂಧಿಸಲಾಗಿದೆ.
ದುರ್ಗದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಭಿಷೇಕ್ ಪಲ್ಲವ ಮಾತನಾಡಿ, ಮಹಾದೇವ್ ಅಪ್ಲಿಕೇಶನ್‌ನ ಕೇಂದ್ರ ಅಥವಾ ಶಾಖೆಯನ್ನು ನಡೆಸಲು ಬಯಸುವವರು ಸುಮಾರು 20 ಲಕ್ಷ ರೂಪಾಯಿ ಠೇವಣಿ ಮಾಡಬೇಕಾಗುತ್ತದೆ. ನಂತರ ಅವರು ತಮ್ಮ ಗ್ರಾಹಕರಿಗೆ ನೀಡಿದ ವಿಶಿಷ್ಟ ಐಡಿಗಳಿಗೆ ಅಡ್ಮಿನ್ ಆಗುವ ಅಧಿಕಾರವನ್ನು ಪಡೆಯುತ್ತಾರೆ.

ಮಿಸ್ಡ್ ಕಾಲ್, ವಾಟ್ಸಾಪ್, ಸಿಗ್ನಲ್ ಮೂಲಕವೂ ಆಪ್‌ಗೆ ಪ್ರವೇಶ!
ಈ ಶಾಖೆಗಳು ಗ್ರಾಹಕರನ್ನು ಸೆಳೆಯಲು ಏಜೆಂಟರನ್ನು ನೇಮಿಸಿಕೊಂಡು, ಅವರಿಗೆ ವಿಶಿಷ್ಟವಾದ ಐಡಿಗಳನ್ನು ಹಂಚಿದವು. ಆಪ್‌ನ ಆಫ್‌ಲೈನ್ ಸ್ಥಾಪನೆಯ ಹೊರತಾಗಿ, ನಿರ್ದಿಷ್ಟ ಸಂಖ್ಯೆಯ ಮಿಸ್ಡ್ ಕಾಲ್ ಮೂಲಕ ಅಥವಾ ಸಂದೇಶ ಕಳುಹಿಸುವ ಅಪ್ಲಿಕೇಶನ್‌ಗಳು, ವಾಟ್ಸಾಪ್ ಮತ್ತು ಸಿಗ್ನಲ್ ಮೂಲಕ ಆನ್‌ಲೈನ್ ಮೂಲಕವೂ ಆಪ್‌ಗೆ ಪ್ರವೇಶ ಲಭ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಏಜೆಂಟರು ಸಂಬಳದ ಹೊರತಾಗಿ 6% ರಿಂದ 8% ರಷ್ಟು ಕಮಿಷನ್ ಪಡೆದಿದ್ದಾರೆ. ಇನ್ನೂ ಆಪರೇಟರ್‌ಗಳು 20% ವರೆಗೆ ಹಣ ಪಡೆದಿದ್ದಾರೆ. ಇದು ತ್ವರಿತವಾಗಿ ಹಣ ಗಳಿಸುವ ಮಾರ್ಗವಾಗಿ ಪ್ರಚಾರ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಅಪ್ಲಿಕೇಶನ್ ಆಪರೇಟರ್‌ಗಳ ಹಲವಾರು ಬ್ಯಾಂಕ್ ಖಾತೆಗಳೊಂದಿಗೆ ಲಿಂಕ್ ಆಗಿರುವ ಪೇಟಿಎಂ ಮತ್ತು ಫೋನ್‌ಪೇಯಂತಹ ಯುಪಿಐ ಆಧಾರಿತ ಪಾವತಿ ವ್ಯವಸ್ಥೆಗಳ ಮೂಲಕ ಹೆಚ್ಚಾಗಿ ಹಣ ಪಾವತಿ ಮಾಡಿದ್ದಾರೆ ಎಂದು ಛತ್ತೀಸ್‌ಗಢ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಡವರ ಆಧಾರ್, ಪ್ಯಾನ್ ಕಾಡ್ ಬಳಸಿ ಬ್ಯಾಂಕ್ ಖಾತೆ!
"ಈ ಬ್ಯಾಂಕ್ ಖಾತೆಗಳಲ್ಲಿ ಹಲವು ಬಡವರ ಹೆಸರಿನಲ್ಲಿವೆ. ಅವರ ಆಧಾರ್ ಮತ್ತು ಪ್ಯಾನ್ ಕಾರ್ಡ್ ಬಳಸಿ ಖಾತೆ ತೆರೆಯಲಾಗಿದೆ. ಬ್ಯಾಂಕ್ ಖಾತೆ ತೆರೆಯಲು ದಾಖಲೆಗಳ ನಕಲು ಪ್ರತಿಗಳನ್ನು ನೀಡಿದರೆ ಒಬ್ಬ ವ್ಯಕ್ತಿಗೆ 5,000 ರೂಪಾಯಿ ನೀಡಲಾಗಿದೆ' ಎಂದು ಅಧಿಕಾರಿ ಹೇಳಿದರು.
ಈ ಎಲ್ಲಾ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಕಾರ್ಪೊರೇಟ್ ಬ್ಯಾಂಕ್ ಖಾತೆಗಳನ್ನು ತೆರೆದಿರುವವರ ವಿರುದ್ಧವೂ ನಾವು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಅಧಿಕಾರಿ ತಿಳಿಸಿದ್ದಾರೆ.
"ಬೆಟ್ಟಿಂಗ್ ಜಾಮೀನು ಪಡೆಯಬಹುದಾದ ಅಪರಾಧವಾಗಿದೆ. ಇಂಟರ್ನೆಟ್ ಮುಕ್ತ ಸ್ಥಳವಾಗಿರುವುದರಿಂದ ನಾವು ಅಪ್ಲಿಕೇಶನ್ ವಿರುದ್ಧ ಕ್ರಮವನ್ನು ಪ್ರಾರಂಭಿಸಲು ಸಾಧ್ಯವಿಲ್ಲ, ಏಕೆಂದರೆ ಅನೇಕ ದೇಶಗಳಲ್ಲಿ ಬೆಟ್ಟಿಂಗ್ ಕಾನೂನುಬದ್ಧವಾಗಿದೆ" ಎಂದು ಪೊಲೀಸರು ಬೇಸರ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕ ಬೆಟ್ಟಿಂಗ್ ಕಾಯಿದೆ, 1867 ರ ಅಡಿಯಲ್ಲಿ ಜೂಜಾಟ ನಿಷೇಧ
ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ತೊಡಗಿಸಿಕೊಂಡಿರುವ ಹೆಚ್ಚಿನ ಸಂಖ್ಯೆಯ ಜನರು ಮಧ್ಯಮ ವರ್ಗದಿಂದ ಬಂದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕ ಜೂಜಿನ ಕಾಯಿದೆ, 1867 ರ ಅಡಿಯಲ್ಲಿ ಜೂಜಾಟವನ್ನು ನಿಷೇಧಿಸಲಾಗಿದೆ. ಆದರೆ, ಕಾನೂನನ್ನು ಪರಿಣಾಮಕಾರಿಯಾಗಿ ಪರಿಗಣಿಸಲಾಗುತ್ತಿಲ್ಲ. ವಿಶೇಷವಾಗಿ ಆನ್‌ಲೈನ್ ಬೆಟ್ಟಿಂಗ್ ಅನ್ನು ನಿಗ್ರಹಿಸಲು ಸಾಧ್ಯವಾಗುತ್ತಿಲ್ಲ.
"ಜೂಜು ಮತ್ತು ಬೆಟ್ಟಿಂಗ್ ರಾಜ್ಯದ ವಿಷಯವಾಗಿರುವುದರಿಂದ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಮುಂತಾದ ರಾಜ್ಯಗಳು ಮಾಡಿದಂತೆ ಆನ್‌ಲೈನ್ ಜೂಜಾಟವನ್ನು ನಿಯಂತ್ರಿಸಲು ಮತ್ತು ನಿಷೇಧಿಸಲು ಛತ್ತೀಸ್‌ಗಢ ಕೂಡ ಕಾನೂನು ಜಾರಿಗೊಳಿಸಬಹುದು. ಇದರ ಮೂಲಕ, ಆನ್‌ಲೈನ್ ಜೂಜಿನ ಕೃತ್ಯಗಳನ್ನು ನಿರ್ಬಂಧಿಸಲು ರಾಜ್ಯವು ಕಠಿಣವಾದ ಕಾನೂನು ಕಾರ್ಯವಿಧಾನವನ್ನು ನಿರ್ಮಿಸಬಹುದು" ಎಂದು ರಾಯ್‌ಪುರದ ಹಿದಾಯತುಲ್ಲಾ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕಾನೂನು ಪ್ರಾಧ್ಯಾಪಕ ಅಭಿನವ್ ಕೆ ಶುಕ್ಲಾ ಹೇಳಿದ್ದಾರೆ.
ಜೂಜಾಟವನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಆನ್‌ಲೈನ್ ಗೇಮಿಂಗ್ ಅಪ್ಲಿಕೇಶನ್‌ಗಳನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿಯಲ್ಲಿ ತರಬೇಕು ಎಂದು ಕಾನೂನು ಪ್ರಾಧ್ಯಾಪಕ ಅಭಿನವ್ ಕೆ ಶುಕ್ಲಾ ಹೇಳಿದ್ದಾರೆ.












Click it and Unblock the Notifications