Onion Price: ಕಣ್ಣೀರು ತರಿಸುತ್ತಿದೆ ಈರುಳ್ಳಿ, ಬೆಲೆ ಏರಿಕೆ ಬರೆ ಪಕ್ಕಾ?
ನವದೆಹಲಿ: ಟೊಮೆಟೊ, ಈರುಳ್ಳಿ, ಬೆಳ್ಳುಳ್ಳಿ.. ಹೀಗೆ ಕೆಲವು ಪದಾರ್ಥ ಇಲ್ಲದೆ ಅಡುಗೆ ಮಾಡಲು ಆಗೋದೆ ಇಲ್ಲ. ಪ್ರತಿದಿನ ಅಡುಗೆ ಮನೆಯನ್ನೇ ಆಳುವ ವಸ್ತುಗಳು ಇವೆಲ್ಲಾ. ಹೀಗಾಗಿ ಈ ತರಕಾರಿಗಳ ಬೆಲೆಯಲ್ಲಿ ಒಂದಿಷ್ಟು ವ್ಯತ್ಯಾಸ ಉಂಟಾದರೂ ಅಡುಗೆ ಮನೆಯ ಕೋಣೆ ಮಾತ್ರವಲ್ಲ, ದೇಶವೇ ಅಲ್ಲಾಡಿ ಹೋಗುತ್ತೆ. ಇತ್ತೀಚೆಗೆ ಟೊಮೆಟೊ ಬೆಲೆ ಕೂಡ ಇದೇ ರೀತಿ ಶಾಕ್ ಕೊಟ್ಟಿತ್ತು, ಈಗ ಈರುಳ್ಳಿ ಕೂಡ ಜನರಿಗೆ ಬಿಸಿ ಮುಟ್ಟಿಸುತ್ತಿದೆ.
ಹೌದು, ಈರುಳ್ಳಿ ಬೆಲೆ ಏರಿಕೆ ತಡೆಯಲು ಕೇಂದ್ರ ಸರ್ಕಾರ ಎಷ್ಟೆಲ್ಲಾ ಪ್ರಯತ್ನ ಮಾಡಿದೆ ಅಂದರೆ ಇದರಿಂದ ರೈತರ ಆಕ್ರೋಶ ಕೂಡ ಮೊಳಗಿದೆ. ಹೀಗೆ ಅದೆಷ್ಟೇ ಕ್ರಮ ಕೈಗೊಂಡು ಬೆಲೆ ನಿಯಂತ್ರಣ ಮಾಡುತ್ತಿದ್ದರೂ ಈರುಳ್ಳಿ ಆಕಾಶ ಮುಟ್ಟುತ್ತಿದೆ. ಸಗಟು ಮಾರುಕಟ್ಟೆಯ ಪ್ರಕಾರ ನೋಡುವುದಾದರೆ, ಉತ್ತಮ ಗುಣಮಟ್ಟದ ಈರುಳ್ಳಿ ಕೆಲ ವಾರಗಳ ಹಿಂದೆ ಕೇವಲ 1,800 ರೂಪಾಯಿಗೆ ಒಂದು ಕ್ವಿಂಟಲ್ ರೀತಿ ಮಾರಾಟವಾಗಿತ್ತು. ಆದರೆ ದಿಢೀರ್ 2,800 ರೂಪಾಯಿ ಗಡಿ ದಾಟಿದೆ ಉತ್ತಮ ಗುಣಮಟ್ಟದ ಈರುಳ್ಳಿ. ಇನ್ನು 2ನೇ ದರ್ಜೆಯ ಈರುಳ್ಳಿ ಕ್ವಿಂಟಲ್‌ಗೆ 1300 ರೂಪಾಯಿಯಿಂದ 2000 ರೂಪಾಯಿಗೆ ಭಾರಿ ದೊಡ್ಡ ಏರಿಕೆ ಕಂಡಿದೆ.
ಮಾರುಕಟ್ಟೆಗೆ ಬರುತ್ತಿದ್ದ ಈರುಳ್ಳಿ ಕುಸಿತ
ಈರುಳ್ಳಿ ಬೆಲೆ ಏರಿಕೆ ಸಾಕ್ಷಿಯಾಗಿ ದೇಶದ ವಿವಿಧೆಡೆ ಏರುಪೇರು ನಿಧಾನವಾಗಿ ಕಾಣುತ್ತಿದೆ. ಈ ಪೈಕಿ ಹೈದರಾಬಾದ್‌ನಲ್ಲಿ ಹಿಂದೆ ಮಹಾರಾಷ್ಟ್ರ & ಕರ್ನೂಲ್‌ನಿಂದ ಪ್ರತಿದಿನವು 100ಕ್ಕೂ ಹೆಚ್ಚು ಟ್ರಕ್ ಈರುಳ್ಳಿ ಲೋಡ್ ಬರುತ್ತಿತ್ತು. ಆದ್ರೆ ಈಗ 50ರಿಂದ 70 ಟ್ರಕ್ ಬರುತ್ತಿವೆ. ಹೀಗೆ ಬರುತ್ತಿರುವ ಈರುಳ್ಳಿ ಏನಕ್ಕೂ ಸಾಲುತ್ತಿಲ್ಲ. ಸ್ಥಳೀಯ ರೈತರು ಕೂಡ ಈರುಳ್ಳಿ ಬೆಳೆಯನ್ನ ಬಿಟ್ಟು ಮೆಣಸಿನಕಾಯಿ ಮತ್ತು ಹತ್ತಿ ಬೆಳೆ ಕಡೆ ಗಮನ ಹರಿಸಿದ್ದಾರೆ ಎನ್ನಲಾಗಿದೆ. ಎಲ್ಲದರ ಪರಿಣಾಮ ಈರುಳ್ಳಿ ಬೆಲೆ ಮೇಲೆ ಆಗುತ್ತಿದೆ.

ಹೋಟೆಲ್‌ಗಳಲ್ಲಿ ಈರುಳ್ಳಿ ಕೊಡಲ್ಲ ಹುಷಾರ್
ತರಕಾರಿ ಬೆಲೆ ಏರಿಕೆ ಕಂಡ ತಕ್ಷಣವೇ ಹೋಟೆಲ್ ಮಾಲೀಕರು ಆಯಾ ತಿನಿಸುಗಳಿಗೆ ಗುಡ್ ಬೈ ಹೇಳುತ್ತಾರೆ. ಆದರೆ ಈರುಳ್ಳಿ ಬೆಲೆಯಲ್ಲೇ ಏರಿಕೆ ಕಂಡರೆ ಏನು ಮಾಡೋದು? ಎಲ್ಲಾ ತಿನಿಸುಗಳಲ್ಲೂ ಈರುಳ್ಳಿ ಬೇಕೆ ಬೇಕು. ಹೀಗಾಗಿ ಹೋಟೆಲ್ ಮಾಲೀಕರ ಪರಿಸ್ಥಿತಿ ಇಕ್ಕಟ್ಟಿಗೆ ಸಿಲುಕುತ್ತಿದೆ. ಇದೇ ಕಾರಣಕ್ಕೆ ಗ್ರಾಹಕರಿಗೆ ಸಲಾಡ್ ರೂಪದಲ್ಲಿ ಇಷ್ಟು ದಿನ ನೀಡುತ್ತಿದ್ದ ಈರುಳ್ಳಿಯನ್ನ ಕೂಡ ನಿಲ್ಲಿಸಲಾಗಿದೆ. ಇದು ಗ್ರಾಹಕರಿಗೆ ಬೇಸರ ತರಿಸಿದ್ದು, ಮುಂಬರುವ ದಿನಗಳಲ್ಲಿ ಹೋಟೆಲ್ ತಿಂಡಿಗಳ ಒಳಗೆ ಈರುಳ್ಳಿ ಮಾಯವಾದರೂ ಅಚ್ಚರಿ ಇಲ್ಲ.
ಮದುವೆ ಅಬ್ಬರದ ಹೊತ್ತಲ್ಲಿ ಟೆನ್ಷನ್!
ಶ್ರಾವಣ ಸಂಭ್ರಮದಲ್ಲಿ ಹಬ್ಬಗಳ ಜೊತೆ ಮದುವೆ ಸೀಸನ್ ಕೂಡ ಬಂದಿದೆ. ಹೀಗಿದ್ದಾಗ ಜನಕ್ಕೆ ಈರುಳ್ಳಿ ಕೂಡ ಸಾಕಷ್ಟು ಪ್ರಮಾಣದಲ್ಲಿ ಬೇಕು. ಪರಿಸ್ಥಿತಿ ಹೀಗಿದ್ದಾಗಲೇ ಈರುಳ್ಳಿ ನಿಧಾನವಾಗಿ ಮುಗಿಲು ಮುಟ್ಟುತ್ತಿದೆ. ಸೆಪ್ಟೆಂಬರ್ 1 ರಂದು ಗುಣಮಟ್ಟದ ಈರುಳ್ಳಿ ಬೆಲೆ ಪ್ರತಿ ಕ್ವಿಂಟಲ್‌ಗೆ 2,700 ರೂಪಾಯಿ ಇತ್ತು. 2ನೇ ಗುಣಮಟ್ಟದ ಈರುಳ್ಳಿಯ ಬೆಲೆ ಕ್ವಿಂಟಲ್‌ಗೆ 1,600 ರೂಪಾಯಿಗೆ ತಲುಪಿತ್ತು. ಸೆಪ್ಟೆಂಬರ್ 4 ರಂದು ಕ್ರಮವಾಗಿ ಕ್ವಿಂಟಲ್‌ಗೆ 2800 ಮತ್ತು 2000 ರೂಪಾಯಿಗೆ ಏರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆ ಕಾಣುವುದು ಪಕ್ಕಾ ಎನ್ನಲಾಗಿದೆ.
ಮಹಾರಾಷ್ಟ್ರದ ಪರಿಸ್ಥಿತಿ ಕೂಡ ಭೀಕರ
ರೈತರು ಬಿತ್ತನೆಯಲ್ಲಿ ನಿರತರಾಗಿದ್ದು, ಮಾರುಕಟ್ಟೆಗೆ ಈರುಳ್ಳಿ ಬರುತ್ತಿರುವುದು ತಡವಾಗಿ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ. ಅದರಲ್ಲೂ ಲಾಸಲ್‌ಗಾಂವ್ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದ್ದ ಈರುಳ್ಳಿ ಭಾರಿ ಕುಸಿತ ಕಂಡಿದೆ. ಸಾಮಾನ್ಯವಾಗಿ ಪ್ರತಿನಿತ್ಯ 20,000 ದಿಂದ 25000 ಕ್ವಿಂಟಲ್ ಈರುಳ್ಳಿ ಮಹಾರಾಷ್ಟ್ರದ ಲಾಸಲ್‌ಗಾಂವ್‌ಗೆ ಬರುತ್ತಿತ್ತು. ಆದರೆ ಈಗ ಭಾರಿ ಕುಸಿತ ಕಂಡಿದೆ. ಇದೇ ವೇಳೆ ಬೆಲೆ ಏರಿಕೆ ಬಿಸಿ ತಡೆಯಲು ಕೇಂದ್ರ ಸರ್ಕಾರ ಈರುಳ್ಳಿ ರಫ್ತಿನ ಮೇಲಿನ ತೆರಿಗೆಯನ್ನ ಶೇಕಡಾ 40ಕ್ಕೆ ಏರಿಕೆ ಮಾಡಿತ್ತು. ಇದು ರೈತರಿಗೆ ಮತ್ತೊಂದು ರೀತಿ ಸಿಟ್ಟು ತರಿಸಿತ್ತು. ಇಷ್ಟು ಕ್ರಮ ಕೈಗೊಂಡರೂ ಈರುಳ್ಳಿ ಬೆಲೆ ಆಟ ಆಡುತ್ತಿದೆ.

ಹೋರಾಟ ನಡೆಸಿದ್ದ ಈರುಳ್ಳಿ ರೈತರು
ದೇಶದಲ್ಲಿ ಈರುಳ್ಳಿ ಸರಬರಾಜು ಮಾಡುವ ರಾಜ್ಯಗಳ ಪೈಕಿ ಮಹಾರಾಷ್ಟ್ರ ಕೂಡ ಒಂದು. ಈ ರಾಜ್ಯದಲ್ಲಿ ಅತಿದೊಡ್ಡ ಈರುಳ್ಳಿ ಮಾರುಕಟ್ಟೆ ಕೂಡ ಇದೆ. ಹಾಗೇ ವಿದೇಶಕ್ಕೆ ಇಲ್ಲಿನ ಈರುಳ್ಳಿ ಭಾರಿ ಪ್ರಮಾಣದಲ್ಲಿ ರಫ್ತು ಆಗುತ್ತಿದೆ. ಆದರೆ ದಿಢೀರ್ ಈರುಳ್ಳಿ ರಫ್ತಿನ ಮೇಲೆ ತೆರಿಗೆಯ ಭಾರ ಏರಿದ್ದ ಕಾರಣ ರೈತರ ಆಕ್ರೋಶ ಭುಗಿಲೆದ್ದಿತ್ತು. ಹೀಗಾಗಿ ಕೃಷಿಕರು ಪ್ರತಿಭಟನೆ ನಡೆಸಿದ್ದರು. ಹೀಗೆ ವಿದೇಶಕ್ಕೆ ರಫ್ತು ಮಾಡುವ ಈರುಳ್ಳಿಗೂ ಬ್ರೇಕ್ ಹಾಕಲಾಗಿದೆ. ಇಷ್ಟೆಲ್ಲಾ ಮಾಡಿದ್ದು ವರ್ಕೌಟ್ ಆಗುತ್ತಿಲ್ಲ. ಈರುಳ್ಳಿ ಬೆಲೆ ಮಾತ್ರ ಬಿಸಿ ಮುಟ್ಟಿಸುತ್ತಲೇ ಇದೆ.
ಪಾತಾಳ ಸೇರುತ್ತಿದೆ ಟೊಮೆಟೊ ಬೆಲೆ
ಟೊಮೆಟೊ ಬೆಲೆ ಅದು ಯಾವ ರೇಂಜ್‌ಗೆ ಕುಸಿತ ಕಂಡಿದೆ ಅಂದ್ರೆ ನೆಲ ಅಲ್ಲ ಪಾತಾಳ ಸೇರಿದೆ. ಹೀಗಾಗಿ ಲಕ್ಷ ಲಕ್ಷ ಸಾಲ ಮಾಡಿ ತಂದು ಸುರಿದು ಬೆಳೆ ಬೆಳದಿದ್ದ ರೈತರು ತಲೆ ಮೇಲೆ ಕೈಹೊತ್ತು ಕೂತಿದ್ದಾರೆ. ಒಂದೆರಡು ತಿಂಗಳ ಹಿಂದೆ ಟೊಮೆಟೊ ಬೆಲೆ ಪ್ರತಿ ಕೆಜಿಗೆ ₹200 ರೂಪಾಯಿ ಗಡಿ ದಾಟಿತ್ತು. ಇನ್ನೇನು 300 ರೂಪಾಯಿ ಮುಟ್ಟುತ್ತದೆ ಅಂತಾ ಅಂದುಕೊಳ್ಳಲಾಗಿತ್ತು. ಆದರೆ ದಿಢೀರ್ ಕುಸಿಯಲು ಶುರು ಮಾಡಿದ ಟೊಮೆಟೊ, ಈಗ ಕೇವಲ ₹15 ರೂಪಾಯಿಗೆ ಬಂದಿದೆ. ಟೊಮೆಟೊ ಪ್ರತಿ ಕೆಜಿಗೆ ಈಗ 200 ರೂಪಾಯಿಯಿಂದ 15 ರೂಪಾಯಿಗೆ ಸಿಗುವಂತಾಗಿದೆ.
ಟೊಮೆಟೊ ಬೆಲೆ ಏಕೆ ಹೀಗಾಯ್ತೋ..
ಕಳೆದ 3 ತಿಂಗಳು ನಿರಂತರ ಗಗನಕ್ಕೇರಿದ್ದ ಟೊಮೆಟೊಗೆ ಕೇಳುವವರೆ ದಿಕ್ಕಿಲ್ಲ ಎಂಬಂತಾಗಿದೆ. ಇತ್ತೀಚಿಗೆ ಟೊಮೆಟೊ ಬೆಲೆ ಇಡೀ ದೇಶದಲ್ಲೇ ಸದ್ದು ಮಾಡಿತ್ತು. ನಿರಂತರ ಬೆಲೆ ಏರಿಕೆಯಿಂದ ದಾಖಲೆ ಬರೆದಿದ್ದ ಟೊಮೆಟೊ ಈಗ ಅಷ್ಟೇ ವೇಗವಾಗಿ ಪಾತಾಳ ಸೇರಿದೆ. ಜುಲೈ ಕೊನೆಯಲ್ಲಿ 15 ಕೆಜಿ ಬಾಕ್ಸ್ ಟೊಮೆಟೋ 2,700 ರೂಪಾಯಿ ದಾಖಲೆ ಬೆಲೆಗೆ ಮಾರಾಟ ಮಾಡಲಾಗಿತ್ತು. ಈಗ ಕೇವಲ 100 ರಿಂದ 230 ರೂಪಾಯಿಗೆ 15 ಕೆಜಿಯ ಬಾಕ್ಸ್ ಹರಾಜಾಗಿದೆ. ಅಂದರೆ ಪ್ರತಿ ಕೆಜಿಗೆ ಕೇವಲ 12 ರಿಂದ 15 ರೂಪಾಯಿ ಬೆಲೆ. ಇದು ರೈತರಿಗೆ ಸಿಟ್ಟು ತರಿಸಿದ್ದು, ಕಷ್ಟಪಟ್ಟು ಬೆಳೆ ಬೆಳೆದರೂ ಬೆಲೆ ಸಿಗುತ್ತಿಲ್ಲ.
ಒಟ್ನಲ್ಲಿ ಈರುಳ್ಳಿ ಬೆಲೆ ಏರಿಕೆ ನೋಡುತ್ತಿದ್ರೆ ಟೊಮೆಟೊ ನೆನಪಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರವು ಇದೀಗ ಯಾವ ಕ್ರಮ ಕೈಗೊಳ್ಳುತ್ತೆ? ಅಂತಾ ಕಾದು ನೋಡಬೇಕು. ಹೀಗೆ ಬೆಲೆ ಏರಿಕೆ ಆಗುತ್ತಿದ್ದರೆ, ಮುಂದೆ ಈರುಳ್ಳಿ ಕೂಡ ಟೊಮೆಟೊ ದಾಖಲೆ ಮುರಿಯುತ್ತದೆ ಎಂಬ ಆತಂಕ ಜನರಲ್ಲಿ ಆವರಿಸಿದೆ. ಹೀಗಾಗಿ ಮದುವೆ ಮತ್ತು ಹಬ್ಬದ ಸೀಸನ್‌ನಲ್ಲಿ ಹೊಸದಾಗಿ ಟೆನ್ಷನ್ ಶುರುವಾಗಿದೆ. ಕೂಡಲೇ ಈರುಳ್ಳಿ ಬೆಲೆ ಏರಿಕೆಗೆ ಬ್ರೇಕ್ ಬಿದ್ದರೆ ಜನರು ನಿಟ್ಟುಸಿರು ಬಿಡಬಹುದೇನೊ ಗೊತ್ತಿಲ್ಲ.
-
ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ: ಜಾಗತಿಕ ಪೂರೈಕೆ ವ್ಯತ್ಯಯದ ಬಗ್ಗೆ ಆತಂಕ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ












Click it and Unblock the Notifications