BSF ಯೋಧರ ಸ್ಫೂರ್ತಿದಾಯಕ ಕಥೆಗಳಿಗೆ ವೇದಿಕೆಯಾಗಲಿದೆ ಒನ್ ಇಂಡಿಯಾ
ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಭಾರತದ ಗಡಿ ಕಾಯುವ ಹೆಮ್ಮೆಯ ಪಡೆ. ಭಾರತದೊಳಗೆ ಶತ್ರುಗಳು ಕಾಲಿಡದಂತೆ ಪ್ರತಿಕ್ಞಣವೂ ಕಾಯುತ್ತಿರುವ ಗಡಿಭದ್ರತಾ ಪಡೆಯೂ ಸಾವಿನವರೆಗೆ ಕರ್ತವ್ಯ ಎನ್ನುವ ಧ್ಯೇಯವಾಕ್ಯ ಹೊಂದಿದ್ದು, ಜೀವದ ಹಂಗು ತೊರೆದು ದೇಶದ ರಕ್ಷಣೆಗಾಗಿ ಸದ್ದಾ ಸಿದ್ದವಾಗಿರುತ್ತದೆ. ಯಾವುದೇ ಸಮಯದಲ್ಲಿ, ಯಾವುದೇ ಸ್ಥಳವಾಗಿರಲಿ ಸದಾ ಸಿದ್ದವಾಗಿರುತ್ತೇವೆ ಎನ್ನುವ ಗಡಿಭದ್ರತಾ ಪಡೆಯೂ ಎಂತಹದೇ ಸಂದರ್ಭವನ್ನು ಎದುರಿಸಲು ಕ್ಷಣಮಾತ್ರದಲ್ಲಿ ಕಾರ್ಯಪ್ರವೃತ್ತವಾಗುವ ಸಾಮರ್ಥ್ಯ ಹೊಂದಿದೆ. ಇನ್ನೂ ಬಿ ಎಸ್‌ಎಫ್(BSF) ಯೋಧರ ಸ್ಪೂರ್ತಿದಾಯಕ ಕಥೆಗಳಿಗೆ ನಿಮ್ಮ ಒನ್ ಇಂಡಿಯಾ ವೇದಿಕೆಯಾಗಲಿದೆ.
ಬಿಎಸ್‌ಎಫ್ ಎನ್ನುವುದು ಭಾರತದ ಪ್ರಮುಖ ಗಡಿ ಭದ್ರತಾ ಪಡೆಯಾಗಿದ್ದು, ಭಾರತದ ಐದು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಬಿಎಸ್‌ಎಫ್ ಕೂಡ ಒಂದು. ಬಿಎಸ್‌ಎಫ್ 2.65 ಲಕ್ಷಕ್ಕೂ ಅಧಿಕ ಸಿಬ್ಬಂದಿಯನ್ನು ಹೊಂದಿದ್ದು, ವಿಶ್ವದ ಅತಿ ದೊಡ್ಡ ಭದ್ರತಾ ಪಡೆ ಎನ್ನುವ ದಾಖಲೆಯನ್ನು ಕೂಡ ಹೊಂದಿದೆ. ಬಿಎಸ್ಎಫ್ ಭಾರತ-ಪಾಕಿಸ್ತಾನ ಮತ್ತು ಭಾರತ-ಬಾಂಗ್ಲಾದೇಶದ ಗಡಿಗಳಲ್ಲಿ ಕೆಲಸ ಮಾಡುತ್ತದೆ. ದೇಶದ ಗಡಿಗಳನ್ನು ರಕ್ಷಿಸಲು ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ಬಿಎಸ್‌ಎಫ್ ಸಿಬ್ಬಂದಿಯ ಅಸಾಧಾರಣ ಕಥೆಗಳು, ಧೈರ್ಯಶಾಲಿ ಕಾರ್ಯಗಳು ಮತ್ತು ಸ್ಪೂರ್ತಿದಾಯಕ ತ್ಯಾಗಗಳನ್ನು ಬೆಳಕಿಗೆ ತರುವ ಗುರಿಯನ್ನು ಒನ್ ಇಂಡಿಯಾ ಹೊಂದಿದೆ. ದಶಕಗಳಿಂದ, ಈ ಶೌರ್ಯದ ಕಥೆಗಳಲ್ಲಿ ಹಲವು ಹೇಳಲಾಗದೇ ಉಳಿದಿವೆ ಮತ್ತು ಅವರ ಸಾಧನೆಗಳನ್ನ ದೇಶದಾದ್ಯಂತ ಜನರಿಗೆ ತಲುಪಿಸಲು ಒನ್‌ಇಂಡಿಯಾ ಬದ್ಧವಾಗಿದೆ.

ಭಾರತದಾದ್ಯಂತ 360 ಮಿಲಿಯನ್ ಬಳಕೆದಾರರನ್ನು ತಲುಪಲು ಒನ್ಇಂಡಿಯಾ ತನ್ನ ವಿಸ್ತಾರವಾದ ಡಿಜಿಟಲ್ ಪ್ಲಾಟ್ ಫಾರ್ಮ್ ಬಳಸಿಕೊಳ್ಳಲಿದೆ. ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರ ಸಾಧನೆಯ ಕಥೆಗಳನ್ನು
ಬಹು ಭಾಷೆಗಳಲ್ಲಿ ಪ್ರಸ್ತುತಪಡಿಸಲಾಗುವುದು. ಎರಡನೇ ಹಂತದ ನಗರಗಳು ಮತ್ತು ಮೂರನೇ ಹಂತದ ಆಚೆಗಿನ ಉದಯೋನ್ಮುಖ ಪ್ರದೇಶಗಳ ನಾಗರಿಕರು ಸಮವಸ್ತ್ರದಲ್ಲಿರುವ ಪುರುಷರು ಮತ್ತು ಮಹಿಳೆಯ ಜೊತೆಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ ಎಂದು ಖಚಿತಪಡಿಸಿಕೊಳ್ಳುವುದು.
ಬಿಎಸ್‌ಎಫ್ ಯೋಧಯ ಶಕ್ತಿಯುತ ವೀಡಿಯೊಗಳ, ರೀಲ್ಸ್‌ಗಳಿಂದ ಹಿಡಿದು ಆಳವಾದ ಲೇಖನಗಳು, ಸಂದರ್ಶನಗಳು ಮತ್ತು ನೇರ ಕಾರ್ಯಕ್ರಮದ ವರದಿಯವರೆಗೆ - ಒನ್‌ಇಂಡಿಯಾ ಬಿಎಸ್‌ಎಫ್‌ನ ಧೈರ್ಯದ ಪರಂಪರೆಯನ್ನು ಪ್ರತಿನಿತ್ಯ ಭಾರತೀಯರಿಗೆ ತಲುಪಿಸುವ ಕೆಲಸವನ್ನ ಮಾಡುತ್ತದೆ. ಅಲ್ಲದೇ ಈ ನಿರೂಪಣೆಗಳು ಕೇವಲ ಮಾಹಿತಿ ನೀಡುವುದಲ್ಲದೆ ಸ್ಫೂರ್ತಿ ನೀಡುತ್ತವೆ, 24x7 ವೀಕ್ಷಿಸುತ್ತಾ, ಸಾಮಾನ್ಯವಾಗಿ ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿಯೂ ನಿಲ್ಲುವ ಯೋಧರನ್ನ ಬಗ್ಗೆ ತಿಳಿಸಲಾಗುವುದು.
2006 ರಲ್ಲಿ ಸ್ಥಾಪನೆಯಾದ ಒನ್ಇಂಡಿಯಾ ಭಾರತದ ಅತ್ಯಂತ ವಿಶ್ವಾಸಾರ್ಹ ಬಹುಭಾಷಾ ಡಿಜಿಟಲ್ ಸುದ್ದಿ ವೇದಿಕೆಗಳಲ್ಲಿ ಒಂದಾಗಿದೆ. ಇದು ಇಂಗ್ಲಿಷ್ ಜೊತೆಗೆ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಬಂಗಾಳಿ, ಗುಜರಾತಿ 8 ಭಾರತೀಯ ಭಾಷೆಗಳಲ್ಲಿ ಮಹತ್ವ ಸುದ್ದಿಗಳನ್ನ ನೀಡುತ್ತಾ ಬಂದಿದೆ. 150 ಮಿಲಿಯನ್‌ಗಿಂತಲೂ ಹೆಚ್ಚು ಮಾಸಿಕ ಬಳಕೆದಾರರು ಮತ್ತು 3 ಬಿಲಿಯನ್‌ಗಿಂತಲೂ ಹೆಚ್ಚು ಪುಟ ವೀಕ್ಷಣೆಗಳೊಂದಿಗೆ, ಒನ್‌ಇಂಡಿಯಾ ಕಾಮ್‌ಸ್ಕೋರ್‌ನಿಂದ ಭಾರತದ ಟಾಪ್ 10 ಸುದ್ದಿ ಪೋರ್ಟಲ್‌ಗಳಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿದೆ.
ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಗುಣಮಟ್ಟದ ವಿಷಯ ಮತ್ತು ಆಕರ್ಷಕ ಡಿಜಿಟಲ್ ಶೋಗಳಿಗೆ ಹೆಸರುವಾಸಿಯಾದ ಒನ್‌ಇಂಡಿಯಾ, ಪ್ರತಿದಿನ ಲಕ್ಷಾಂತರ ಜನರಿಗೆ ತಜ್ಞರ ಸಂದರ್ಶನಗಳು, ರಾಜಕೀಯ ಚರ್ಚೆಗಳು, ರಾಜಕೀಯ ವಿಶ್ಲೇಷಣೆ, ರಾಜಕೀಯ ಸಂದರ್ಶನಗಳು, ಸುದ್ದಿ, ವಿವರಣೆಗಳು ಮತ್ತು ಆಳವಾದ ವಿಶ್ಲೇಷಣೆಯನ್ನು ನೀಡುತ್ತಿದೆ.
ಬಿಎಸ್‌ಎಫ್‌ನೊಂದಿಗಿನ ಈ ಸಹಯೋಗವು ಮೌಲ್ಯಾಧಾರಿತ ಪತ್ರಿಕೋದ್ಯಮಕ್ಕೆ ಒನ್‌ಇಂಡಿಯಾದ ನಿರಂತರ ಬದ್ಧತೆ ಮತ್ತು ನಾಗರಿಕರೊಂದಿಗೆ ಅವರದೇ ಭಾಷೆಯಲ್ಲಿ ಸಂಪರ್ಕ ಸಾಧಿಸುವ ಅದರ ಧ್ಯೇಯವನ್ನು ಪ್ರತಿಬಿಂಬಿಸುತ್ತದೆ. ಯೋಧರ ಬಗೆಗಿನ ಮುಖ್ಯವಾದ ಕಥೆಗಳು ಮತ್ತು ಸ್ಫೂರ್ತಿ ಸುದ್ದಿಗಳು ಪ್ರಕಟಗೊಳ್ಳಲಿದೆ. ನಮ್ಮ ಗಡಿಗಳನ್ನು ಸುರಕ್ಷಿತವಾಗಿ ಮತ್ತು ನಮ್ಮ ರಾಷ್ಟ್ರವನ್ನು ಬಲಿಷ್ಠವಾಗಿಡುವ ಧೈರ್ಯವನ್ನು ವೀಕ್ಷಿಸಲು ಒನ್ಇಂಡಿಯಾ ಮತ್ತು ಬಿಎಸ್ಎಫ್ ಒಟ್ಟಾಗಿ ಪ್ರತಿಯೊಬ್ಬ ಭಾರತೀಯನನ್ನು ಆಹ್ವಾನಿಸುತ್ತವೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications