ಮಧ್ಯಪ್ರದೇಶ: ಒಂದೇ ಸ್ಥಾನ, ಒಂದೇ ರೋಲ್ ನಂಬರ್, ಇಬ್ಬರು ಯುಪಿಎಸ್‌ಸಿ ಅಭ್ಯರ್ಥಿಗಳು!
ಭೋಪಾಲ್, ಮೇ. 25: ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್‌ಸಿ ಪರೀಕ್ಷೆ ಪಾಲು ಮಾಡಲು ಲಕ್ಷಾಂತರ ಜನ ಹಗಲಿರುಳು ಶ್ರಮಿಸುತ್ತಾರೆ. ಅಂತಹದರಲ್ಲಿ ತಮ್ಮ ಫಲಿತಾಂಶ ಇನ್ನೊಬ್ಬರ ಹೆಸರಿಗೆ ಬಂದರೆ ಹೇಗಿರುತ್ತದೆ ನೀವೇ ಊಹಿಸಿ. ಎಂತಹವರಿಗೂ ಒಂದು ಕ್ಷಣ ಆಘಾತ ಆಗುವುದಂತೂ ಗ್ಯಾರಂಟಿ. ಮಧ್ಯಪ್ರದೇಶದಲ್ಲಿ ಇಬ್ಬರು ಅಭ್ಯರ್ಥಿಗಳಿಗೆ ಈಗ ಇದೇ ದೊಡ್ಡ ಸಮಸ್ಯೆಯಾಗಿದೆ.
ಯುಪಿಎಸ್‌ಸಿ ಪರೀಕ್ಷೆಗಳ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ತಮ್ಮ ಮೊದಲ ಹೆಸರು ಒಂದೇ ಇರುವ ಮಧ್ಯಪ್ರದೇಶದ ಇಬ್ಬರು ಹುಡುಗಿಯರು ಒಂದೇ ರೋಲ್ ಸಂಖ್ಯೆಯಿದ್ದು, ಇಬ್ಬರೂ 184 ನೇ ಸ್ಥಾನ ಪಡೆದಿದ್ದಾರೆ. ಇಬ್ಬರ ಮೊದಲ ಹೆಸರು, ಅದೇ ರೋಲ್ ಸಂಖ್ಯೆ ಮತ್ತು ಅದೇ ಶ್ರೇಣಿ ಸಿಕ್ಕಿದೆ. ಈಗ ಇಬ್ಬರೂ ಇದು ನಾನು ಕಷ್ಟಪಟ್ಟು ಪಡೆದ ಸ್ಥಾನ ಎಂದು ಪಟ್ಟು ಹಿಡಿದಿದ್ದಾರೆ.

ದೇವಾಸ್ ಜಿಲ್ಲೆಯ 23 ವರ್ಷದ ಆಯಶಾ ಫಾತಿಮಾ ಮತ್ತು ಅಲಿರಾಜ್‌ಪುರ ಜಿಲ್ಲೆಯ 26 ವರ್ಷದ ಆಯಶಾ ಮಕ್ರಾನಿ ಇಬ್ಬರೂ ವಿವಿಧ ಸರ್ಕಾರಿ ಇಲಾಖೆಗಳಿಗೆ ಅಧಿಕಾರಿಗಳನ್ನು ನೇಮಿಸಿಕೊಳ್ಳಲು ನಡೆಸುವ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ 184 ನೇ ರ್ಯಾಂಕ್ ಗಳಿಸಿದ್ದಾರೆ ಎಂದು ಹೇಳುತ್ತಿದ್ದಾರೆ.
ಸುಮಾರು 200 ಕಿಲೋಮೀಟರ್ ಅಂತರದಲ್ಲಿ ವಾಸಿಸುವ ಇಬ್ಬರು ಯುವತಿಯರು ತಮ್ಮ ಮಾತು ನಿಜವೆಂದು ತಿಳಿಸಲು ಒಂದೇ ರೋಲ್ ಸಂಖ್ಯೆಯೊಂದಿಗೆ ಪ್ರವೇಶ ಪತ್ರಗಳನ್ನು ತೊರಿಸಿದ್ದಾರೆ. ಜೊತೆಗೆ ಇಬ್ಬರೂ ವಂಚನೆ ಪ್ರಕರಣ ಮತ್ತು ಸ್ಪಷ್ಟೀಕರಣಕ್ಕಾಗಿ ಸ್ಥಳೀಯ ಪೊಲೀಸರು ಮತ್ತು ಯುಪಿಎಸ್‌ಸಿಗೆ ದೂರುಗಳನ್ನು ಸಲ್ಲಿಸಿದ್ದಾರೆ.

"ನಾನು ಎರಡು ವರ್ಷಗಳ ಕಾಲ ಕಷ್ಟಪಟ್ಟು ಓದಿದ್ದೇನೆ ಮತ್ತು ನನ್ನ ಹಕ್ಕನ್ನು ಬೇರೆಯವರಿಗೆ ತೆಗೆದುಕೊಳ್ಳಲು ನಾನು ಬಿಡುವುದಿಲ್ಲ" ಎಂದು 26 ವರ್ಷದ ಆಯಾಶಾ ಮಕ್ರಾಣಿ ಹೇಳಿದ್ದು, ನನಗೆ ಯುಪಿಎಸ್‌ಸಿ ಮತ್ತು ಸರ್ಕಾರದಿಂದ ನ್ಯಾಯ ಬೇಕು" ಎಂದು ಹೇಳಿದ್ದಾರೆ.
ಆಯಶಾ ಫಾತಿಮಾ ಕೂಡ ಈ ಬಗ್ಎಗ ಮಾತನಾಡಿದ್ದು, ಬೇರೆಯವರು ತಮ್ಮ ರೋಲ್ ಸಂಖ್ಯೆಯನ್ನು ಪಡೆದಿದ್ದಾರೆ ಎಂದು ತಿಳಿದು ಆಘಾತವಾಯಿತು ಎಂದು ಹೇಳಿದ್ದಾರೆ. "ಇಂತಹ ವಂಚನೆಯಾಗದಂತೆ ನಾನು ನೋಡುತ್ತೇನೆ, ಯಾವುದೇ ಜ್ಞಾಪಕ ಪತ್ರ ಅಥವಾ ಯಾವುದನ್ನಾದರೂ ಸಾಕ್ಷಿಯಾಗಿ ನೀಡಬೇಕಿದ್ದರೇ, ನಾನು ಮುಂದೆ ನೋಡುತ್ತೇನೆ" ಎಂದು ಹೇಳಿದ್ದಾರೆ.
ಇಬ್ಬರ ಪ್ರವೇಶ ಪತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಹೆಚ್ಚಿನ ವ್ಯತ್ಯಾಸಗಳು ಕಂಡುಬರುತ್ತವೆ. ಆಯಶಾ ಮಕ್ರಾನಿ ಅವರ ಪ್ರವೇಶ ಪತ್ರದಲ್ಲಿ ವ್ಯಕ್ತಿತ್ವ ಪರೀಕ್ಷೆಯ ದಿನಾಂಕ ಏಪ್ರಿಲ್ 25, 2023ರ ಗುರುವಾರ ಎಂದಿದೆ. ಇತ್ತ, ಅಯಶಾ ಫಾತಿಮಾ ಅವರ ಕಾರ್ಡ್ ಅದೇ ದಿನಾಂಕವನ್ನು ತೋರಿಸುತ್ತದೆ ಆದರೆ ಮಂಗಳವಾರದ ದಿನವನ್ನು ತೋರಿಸುತ್ತದೆ. ಕ್ಯಾಲೆಂಡರ್ ಪ್ರಕಾರ, ಏಪ್ರಿಲ್ 25, 2023, ಮಂಗಳವಾರ.
ಇದಲ್ಲದೆ, ಆಯಶಾ ಫಾತಿಮಾ ಅವರ ಕಾರ್ಡ್ ಕ್ಯೂಆರ್ ಕೋಡ್‌ನೊಂದಿಗೆ ಯುಪಿಎಸ್‌ಸಿಯ ವಾಟರ್‌ಮಾರ್ಕ್ ಅನ್ನು ಹೊಂದಿದೆ. ಆದರೆ ಆಯಶಾ ಮಕ್ರಾನಿಯ ಕಾರ್ಡ್ ಯಾವುದೇ ಕ್ಯೂಆರ್ ಕೋಡ್ ಇಲ್ಲದೆ ಸರಳ ಕಾಗದದ ಮುದ್ರಣವನ್ನು ಹೋಲುತ್ತದೆ. ಇನ್ನು, ಯುಪಿಎಸ್‌ಸಿಯ ಮೂಲಗಳು ಅಯಶಾ ಮಕ್ರಾನಿ ತಿದ್ದುಪಡಿಗಳನ್ನು ಮಾಡಿದ್ದಾರೆ. ಆಯಶಾ ಫಾತಿಮಾ ಸರಿಯಾದ ಅಭ್ಯರ್ಥಿ ಎಂದು ಹೇಳಿದ್ದು, ಅಂತಹ ದೋಷ ಹೇಗೆ ಸಂಭವಿಸಿತು ಎಂದು ತನಿಖೆ ನಡೆಸುವುದಾಗಿಯೂ ಹೇಳಿದೆ ಎಂದು NDTV ವರದಿ ಮಾಡಿದೆ.












Click it and Unblock the Notifications