'ಮೋದಿ ಒಬ್ಬ ಸೋದರ ಆಟೋ, ಮತ್ತೊಬ್ಬರು ದಿನಸಿ ಅಂಗಡಿ ನಡೆಸ್ತಾರೆ'

ಅಗರ್ತಲ, ಅಕ್ಟೋಬರ್ 1: ಪ್ರಧಾನಿ ಮೋದಿ ಅವರ ಒಬ್ಬ ಸೋದರ ಆಟೋರಿಕ್ಷಾ ಓಡಿಸ್ತಾರೆ, ಮತ್ತೊಬ್ಬರು ದಿನಸಿ ಅಂಗಡಿ ನಡೆಸ್ತಾರೆ. ಅವರ ತಾಯಿ ಹತ್ತಕ್ಕೆ ಹನ್ನೆರಡು ಅಡಿ ಅಳತೆಯ ಕೋಣೆಯಲ್ಲಿದ್ದಾರೆ- ಈಗ ನನಗೆ ಹೇಳಿ, ಜಗತ್ತಿನ ಬೇರೆ ಯಾರಾದರೂ ಪ್ರಧಾನಿ ಹೀಗಿದ್ದಾರಾ ಎಂದು ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಹೇಳಿರುವುದು ಭಾರೀ ಸುದ್ದಿಯಾಗಿದೆ.

ಸರ್ಜಿಕಲ್ ಸ್ಟ್ರೈಕ್ಸ್ ನ ವರ್ಷಾಚರಣೆ ಸಂಭ್ರಮದಲ್ಲಿ ಬಂಗಾಲಿಯಲ್ಲಿ ಅವರು ಹೇಳಿದ್ದಾರೆ. ಬಿಜೆಪಿ ಎಲ್ಲೆಲ್ಲಿ ಅಧಿಕಾರದಲ್ಲಿದೆಯೋ ಅಲ್ಲೆಲ್ಲ ಸರ್ಜಿಕಲ್ ಸ್ಟ್ರೈಕ್ ನ ಸ್ಮರಣೆಗಾಗಿ 'ಪರಾಕ್ರಮ್ ಪರ್ವ್' ಆಚರಿಸುತ್ತಿದೆ. ಮೋದಿ ಅವರಿಗೆ ವಯಸ್ಸಾದ ತಾಯಿ ಇದ್ದಾರೆ. ಆದರೆ ಅವರು ಪ್ರಧಾನಿ ನಿವಾಸದಲ್ಲಿ ವಾಸವಿಲ್ಲ ಎಂದಿದ್ದಾರೆ.

ಗುಜರಾತ್ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿ ಹದಿಮೂರು ವರ್ಷ ಅಧಿಕಾರದಲ್ಲಿದ್ದರು. ಅವರಿಗೆ ಸೋದರ, ಸೋದರಿಯರಿದ್ದಾರೆ. ಅವರ ಸೋದರ ಈಗಲೂ ಆಟೋ ಓಡಿಸ್ತಾರೆ ಎಂದು ನಲವತ್ತೆಂಟು ವರ್ಷದ ತ್ರಿಪುರಾ ಮುಖ್ಯಮಂತ್ರಿ ಮತ್ತೆ ಸುದ್ದಿಯಲ್ಲಿದ್ದಾರೆ.

One of PM Modis brothers is grocer, another drives auto, said Tripura CM Biplab Deb

ಕಳೆದ ಆಗಸ್ಟ್ ನಲ್ಲಿ ಹಳ್ಳಿಗರಿಗೆ ಬಾತುಕೋಳಿ ವಿತರಿಸಬೇಕು ಎಂದು ಬಿಪ್ಲಬ್ ದೇಬ್ ಹೇಳಿದ್ದರು. ಇದರಿಂದ ನೀರಿನ ಮರು ಉಪಯೋಗ ಹಾಗೂ ಆಮ್ಲಜನಕ ಮಟ್ಟ ಹೆಚ್ಚಲು ಅನುಕೂಲ ಆಗುತ್ತದೆ ಎಂದಿದ್ದರು. ನೀರಿನಲ್ಲಿ ಬಾತುಕೋಳಿ ಈಜುವಾಗ ಆಮ್ಲಜನಕ ಮಟ್ಟ ತಾನಾಗಿಯೇ ಹೆಚುತ್ತದೆ. ನೀರಿನೊಳಗಿನ ಮೀನುಗಳಿಗೆ ಹೆಚ್ಚಿನ ಆಮ್ಲಜನಕ ಸಿಗುತ್ತದೆ ಎಂದಿದ್ದರು.

ಅದಕ್ಕೂ ಮುನ್ನ, ಪ್ರಾಚೀನ ಭಾರತೀಯರಿಗೆ ಇಂಟರ್ ನೆಟ್ ಬಳಕೆ ಗೊತ್ತಿತ್ತು. ಕೃತಕ ಉಪಗ್ರಹದ ಬಗ್ಗೆ ಮಹಾಭಾರತದಲ್ಲಿಯೇ ತಿಳಿದಿತ್ತು ಎನ್ನುವ ಮೂಲಕ ಹಲವಾರು ಪ್ರಶ್ನೆ ಏಳಲು ಕಾರಣರಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+