Get Updates
Get notified of breaking news, exclusive insights, and must-see stories!

One Nation One Election: ಏಕಕಾಲಿಕ ಚುನಾವಣೆ ಬಗ್ಗೆ ರಾಮನಾಥ್ ಕೋವಿಂದ್ ಸಮಿತಿ ಶಿಫಾರಸುಗಳೇನು?

ನವದೆಹಲಿ, ಮಾರ್ಚ್ 14: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸಲು ಒಲವು ತೋರಿ ರಾಮನಾಥ್ ಕೋವಿಂದ್ ಸಮಿತಿಯು ಮಾರ್ಚ್ 14ರ ಗುರುವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಒಂದು ರಾಷ್ಟ್ರ, ಒಂದು ಚುನಾವಣಾ ವರದಿಯನ್ನು ಸಲ್ಲಿಸಿದೆ.

ರಾಷ್ಟ್ರಪತಿ ಭವನದಲ್ಲಿ "ಒಂದು ರಾಷ್ಟ್ರ, ಒಂದು ಚುನಾವಣೆ" ಕುರಿತ 18,626 ಪುಟಗಳಿರುವ ವರದಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಮಿತಿಯು ಸಲ್ಲಿಸಿದೆ. ರಾಮನಾಥ್ ಕೋವಿಂದ್ ಸಮಿತಿಯು ದೇಶದಲ್ಲಿ ಏಕಕಾಲದಲ್ಲಿ ಚುನಾವಣೆಗಳನ್ನು ಹೇಗೆ ನಡೆಸಬಹುದು ಎಂಬುದರ ಕುರಿತು ವಿವಿಧ ಕ್ರಮಗಳನ್ನು ಸೂಚಿಸಿದೆ. ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸಬೇಕು ಎಂದು ಸಮಿತಿ ಸರ್ವಾನುಮತದಿಂದ ಹೇಳಿದೆ ಎಂದು ವರದಿ ಹೇಳಿದೆ.

One Nation One Election What are the key recommendations of Ram Nath Kovind Panel

ಪ್ರಧಾನಿ ನರೇಂದ್ರ ಮೋದಿ ಅವರು 'ಒಂದು ರಾಷ್ಟ್ರ, ಒಂದು ಚುನಾವಣೆ' ಅಗತ್ಯವನ್ನು ಪದೇ ಪದೇ ಪುನರುಚ್ಚರಿಸಿದ್ದಾರೆ. ಇದು 2024 ರ ಲೋಕಸಭಾ ಚುನಾವಣೆಯ ಬಿಜೆಪಿಯ ಪ್ರಣಾಳಿಕೆಯ ಭಾಗ ಕೂಡ ಆಗಿದೆ. ಪ್ರಸ್ತುತ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಅಥವಾ ಹಾಲಿ ಸರ್ಕಾರದ ಅವಧಿ ಮುಗಿದಾಗ ಪ್ರತ್ಯೇಕವಾಗಿ ಚುನಾವಣೆಗಳು ನಡೆಯುತ್ತವೆ. ಭಾರತದಲ್ಲಿ ಏಕಕಾಲಿಕ ಚುನಾವಣೆಗಳನ್ನು ಜಾರಿಗೊಳಿಸುವ ದೀರ್ಘಾವಧಿಯ ಪ್ರಸ್ತಾವನೆಯನ್ನು ಪರಿಶೀಲಿಸಲು ಕೇಂದ್ರವು ಸೆಪ್ಟೆಂಬರ್ 2, 2023 ರಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಿತ್ತು.

ರಾಮನಾಥ್ ಕೋವಿಂದ್ ಸಮಿತಿಯ ಕೆಲವು ಶಿಫಾರಸುಗಳು ಇಲ್ಲಿವೆ

* ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತ ರಾಮ್ ನಾಥ್ ಕೋವಿಂದ್ ಸಮಿತಿಯು ಲೋಕಸಭೆ, ರಾಜ್ಯ ವಿಧಾನಸಭೆಗಳು, ಪಂಚಾಯತ್‌ಗಳು ಮತ್ತು ಪುರಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ಸೂಕ್ತ ಸಾಂವಿಧಾನಿಕ ತಿದ್ದುಪಡಿಗಳ ಮೂಲಕ ಸಿಂಕ್ರೊನೈಸ್ ಮಾಡಬೇಕು ಎಂದು ಅಭಿಪ್ರಾಯಪಟ್ಟಿದೆ.

* ಏಕಕಾಲಕ್ಕೆ ಎರಡು ಹಂತಗಳಲ್ಲಿ ಚುನಾವಣೆ ನಡೆಸಬೇಕು ಎಂದು ರಾಮ್ ನಾಥ್ ಕೋವಿಂದ್ ಸಮಿತಿ ಸೂಚಿಸಿದೆ.

One Nation One Election What are the key recommendations of Ram Nath Kovind Panel

* ಮೊದಲ ಹಂತದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲಕ್ಕೆ ಒಂದೇ ಬಾರಿ ಚುನಾವಣೆ ನಡೆಸಬೇಕು ಎಂದು ಸಮಿತಿ ತಿಳಿಸಿದೆ.

* ಎರಡನೇ ಹಂತದಲ್ಲಿ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಚುನಾವಣೆ ನಡೆಸಿದ 100 ದಿನಗಳ ಒಳಗೆ ನಗರಸಭೆ ಮತ್ತು ಪಂಚಾಯತ್‌ಗಳಿಗೆ ಚುನಾವಣೆ ನಡೆಸಬೇಕು.

* ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಿದ್ಧತೆಗಳು ಹೆಚ್ಚಿನ ಸಂಪನ್ಮೂಲಗಳು ಮತ್ತು ಸಮಯವನ್ನು ತೆಗೆದುಕೊಳ್ಳುತ್ತದೆ. ಉಪಕರಣಗಳು, ಮಾನವಶಕ್ತಿ ಮತ್ತು ಇತರ ಸಂಪನ್ಮೂಲಗಳ ದೊಡ್ಡ ಅವಶ್ಯಕತೆ ಅದಕ್ಕಿದೆ ಎಂದು ಸಮಿತಿಯು ಹೇಳುತ್ತದೆ.

* ರಾಮ್ ನಾಥ್ ಕೋವಿಂದ್ ಸಮಿತಿಯ ಪ್ರಕಾರ, full term ಮತ್ತು unexpired period ಪರಿಕಲ್ಪನೆಗಳನ್ನು ಪರಿಚಯಿಸಲು ಸಂವಿಧಾನವನ್ನು ತಿದ್ದುಪಡಿ ಮಾಡಬೇಕಾಗಿದೆ. ಸದನ ಅಥವಾ ವಿಧಾನಸಭೆಯನ್ನು ಅದರ 'ಪೂರ್ಣ ಅವಧಿ'ಗಿಂತ ಮುಂಚೆಯೇ ವಿಸರ್ಜಿಸಿದ ಚುನಾವಣೆಗಳು ನಡೆಯುವಂತೆ ಮಾಡಲಾದ ನಿಬಂಧನೆಗಳನ್ನು 'ಮಧ್ಯಾವಧಿ' ಚುನಾವಣೆ ಎಂದು ಪರಿಗಣಿಸಲಾಗುತ್ತದೆ. ಐದು ವರ್ಷಗಳ ಅವಧಿ ಮುಗಿದ ನಂತರ ನಡೆಯುವ ಚುನಾವಣೆಯನ್ನು 'ಸಾಮಾನ್ಯ ಚುನಾವಣೆ' ಎಂದು ಪರಿಗಣಿಸಲಾಗುತ್ತದೆ.

* ಸಂವಿಧಾನವನ್ನು ತಿದ್ದುಪಡಿ ಮಾಡುವ ಮೂಲಕ 'ಏಕಕಾಲಿಕ ಚುನಾವಣೆ'ಯಂತಹ ಪರಿಭಾಷೆಗಳ ವ್ಯಾಖ್ಯಾನಗಳನ್ನು ಪರಿಣಾಮಕಾರಿಯಾಗಿ ಮಾಡಲಾಗುವುದು ಎಂದು ಸಮಿತಿ ಹೇಳುತ್ತದೆ.

ಒಂದು ರಾಷ್ಟ್ರ, ಒಂದು ಚುನಾವಣೆ: ಸಂವಿಧಾನವನ್ನು ತಿದ್ದುಪಡಿ ಮಾಡಿದರೆ ಹೊಸ ನಿಯಮಗಳು

* ಪೂರ್ಣ ಅವಧಿ: 'ಹೌಸ್ ಆಫ್ ದಿ ಪೀಪಲ್' ಅಥವಾ ರಾಜ್ಯ ಶಾಸಕಾಂಗ ಸಭೆಯ ಮೊದಲ ಸಭೆಗೆ ನಿಗದಿಪಡಿಸಿದ ದಿನಾಂಕದಿಂದ ಐದು ವರ್ಷಗಳು. ಅದರ ಕೊನೆಯಲ್ಲಿ ಐದು ವರ್ಷಗಳ ಅವಧಿಯ ನಂತರ ಸದನವನ್ನು ವಿಸರ್ಜನೆ ಮಾಡಲಾಗುತ್ತದೆ. ಇದನ್ನು ಪೂರ್ಣ ಅವಧಿ ಎಂದು ಉಲ್ಲೇಖಿಸಲಾಗುತ್ತದೆ.

* ಸಾರ್ವತ್ರಿಕ ಚುನಾವಣೆ: ಪೂರ್ಣಾವಧಿಯ ಅವಧಿ ಮುಗಿದ ನಂತರ ನಡೆಯುವ ಚುನಾವಣೆಯನ್ನು ಸಾರ್ವತ್ರಿಕ ಚುನಾವಣೆ ಎಂದು ಉಲ್ಲೇಖಿಸಲಾಗುತ್ತದೆ.

* ಮಧ್ಯಾವಧಿ ಚುನಾವಣೆ: ಅವಧಿ ಮೀರದ ಸದನವನ್ನು ರಚಿಸುವ ಚುನಾವಣೆಗಳನ್ನು ಮಧ್ಯಾವಧಿ ಚುನಾವಣೆ ಎಂದು ಕರೆಯಲಾಗುತ್ತದೆ.

* unexpired period: ಜನರ ಸದನ ಅಥವಾ ಶಾಸಕಾಂಗ ಸಭೆಯು ಅದರ ಪೂರ್ಣಾವಧಿಯ ಅವಧಿಗಿಂತ ಮುಂಚೆಯೇ ವಿಸರ್ಜಿಸಲ್ಪಟ್ಟರೆ, ಅದರ ವಿಸರ್ಜನೆಯ ದಿನಾಂಕ ಮತ್ತು ಅದರ ಮೊದಲ ಸಭೆಗೆ ನಿಗದಿಪಡಿಸಿದ ದಿನಾಂಕದಿಂದ ಐದು ವರ್ಷಗಳ ಅವಧಿಯ ನಡುವಿನ ಅವಧಿ ಹೀಗಿರುತ್ತದೆ.

ಸಮಿತಿಯಲ್ಲಿ ರಾಮ್‌ ನಾಥ್ ಕೋವಿಂದ್ ಅವರಲ್ಲದೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯಸಭೆಯ ಮಾಜಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್, ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎನ್‌ಕೆ ಸಿಂಗ್, ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಕಶ್ಯಪ್ ಮತ್ತು ಹಿರಿಯ ವಕೀಲ ಹರೀಶ್ ಸಾಳ್ವೆ ಇದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+