ರೈಲ್ವೆ ಸಚಿವರ ಕಚೇರಿ ಅಧಿಕಾರಿಗಳಿಗೆ ತಲಾ 9 ಗಂಟೆಗಳ 2 ಪಾಳಿಯಲ್ಲಿ ಕೆಲಸ
ನವದೆಹಲಿ, ಜು.09: ಉದ್ಯಮಿಯಿಂದ ರಾಜಕಾರಣಿಯಾದ ಅಶ್ವಿನಿ ವೈಷ್ಣವ್ ದೇಶದ ಹೊಸ ರೈಲ್ವೆ ಸಚಿವರಾಗಿ ಗುರುವಾರ ಅಧಿಕಾರ ವಹಿಸಿಕೊಂಡಿದ್ದಾರೆ. ತಾನು ಕರ್ತವ್ಯ ಆರಂಭಿಸಿದ ಕೂಡಲೇ ವೈಷ್ಣವ್ ತಲಾ ಒಂಬತ್ತು ಗಂಟೆಗಳ ಎರಡು ಪಾಳಿಯಲ್ಲಿ ಕೆಲಸಕ್ಕೆ ಬರುವಂತೆ ತಮ್ಮ ಕಚೇರಿಯಲ್ಲಿ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ರೈಲ್ವೆ, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರ ಕಚೇರಿಯಿಂದ ಆ ಆದೇಶ ಹೊರಡಿಸಲಾಗಿದೆ.
ಈ ಆದೇಶದಲ್ಲಿ, ಗೌರವಾನ್ವಿತ ಸಚಿವರು ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಎರಡು ಪಾಳಿಯಲ್ಲಿ ಕೆಲಸ ಮಾಡಲು ನಿರ್ದೇಶಿಸಿದ್ದಾರೆ. ಅಂದರೆ ಬೆಳಿಗ್ಗೆ 7:00 ಗಂಟೆ - 16: 00 ಗಂಟೆ ಮತ್ತು 15:00 ಗಂಟೆ -12: 00 ಗಂಟೆ ಮಧ್ಯರಾತ್ರಿವರೆಗೆ ಈ ಪಾಳಿ ಇರುತ್ತದೆ. ಈ ಕೂಡಲೇ ಈ ಆದೇಶ ಜಾರಿಗೆ ಬರಲಿದೆ," ಎಂದು ಹೇಳಿದೆ.

1994 ರ ಬ್ಯಾಚ್‌ನ ಮಾಜಿ ಐಎಎಸ್ ಅಧಿಕಾರಿ ವೈಷ್ಣವ್, 15 ವರ್ಷಗಳಿಂದ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ವಿಶೇಷವಾಗಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಚೌಕಟ್ಟಿನಲ್ಲಿ ಮೂಲಸೌಕರ್ಯಕ್ಕೆ ನೀಡಿದ ಕೊಡುಗೆ ಮೂಲಕ ವೈಷ್ಣವ್ ಹೆಸರುವಾಸಿಯಾಗಿದ್ದಾರೆ. ಇದು ರೈಲ್ವೆ ಕ್ಷೇತ್ರದಲ್ಲಿ ವೈಷ್ಣವ್‌ಗೆ ಸಹಾಯ ಮಾಡಬಹುದು.
ಪ್ರಮುಖ ಎಲೆಕ್ಟ್ರಿಕ್ ಕಂಪನಿಗಳಾದ ಜನರಲ್ ಎಲೆಕ್ಟ್ರಿಕ್ ಮತ್ತು ಸೀಮೆನ್ಸ್‌ನಲ್ಲಿ ನಾಯಕತ್ವದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ವೈಷ್ಣವ್ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಾರ್ಟನ್ ಶಾಲೆಯಲ್ಲಿ ಎಂಬಿಎ ಮತ್ತು ಕಾನ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯಿಂದ ಎಂಟೆಕ್ ಪೂರೈಸಿದ್ದಾರೆ.
ಸಂವಹನ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ಎರಡು ಪ್ರಮುಖ ಖಾತೆಗಳನ್ನು ಈಗ ವೈಷ್ಣವ್ ಹೊಂದಿದ್ದಾರೆ.
"ಕಳೆದ 67 ವರ್ಷಗಳಲ್ಲಿ ರೈಲ್ವೆಯಲ್ಲಿ ಅತ್ಯುತ್ತಮ ಕಾರ್ಯಗಳು ನಡೆದಿವೆ. ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಯನ್ನು ಮುಂದೆ ತೆಗೆದುಕೊಳ್ಳಲು ನಾನು ಇಲ್ಲಿದ್ದೇನೆ," ಎಂದು ವೈಷ್ಣವ್ ಹೇಳಿದ್ದಾರೆ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications