Odisha Train Tragedy: ನಾ ಜೀವ ಕೊಟ್ಟ ಮಗ ಸತ್ತಿರಲಾರ: ತಂದೆಯ 'ನಂಬಿಕೆಯೇ' ಶವಾಗಾರದಲ್ಲಿದ್ದ ಮಗನನ್ನು ಉಳಿಸಿತು..
ಕಣ್ಣು ಅರಿಯದಿದ್ದರು ಕರಳು ಅರಿಯದೆ ಎನ್ನುವ ಮಾತು ಇದೆ. ಮಕ್ಕಳು ಹಾಗೂ ಪೋಷಕರ ವಿಚಾರದಲ್ಲಿ ಈ ಮಾತು ಸುಳ್ಳಾಗದೇ ಇರದು. ಯಾಕಂದರೆ ಮಕ್ಕಳ ವಿಚಾರದಲ್ಲಿ ಯಾರು ಏನೇ ಹೇಳಲಿ ಪೋಷಕರು ತುಂಬಾ ಬೇಗ ನಂಬುವುದಿಲ್ಲ. ಆದಷ್ಟು ಸಕರಾತ್ಮಕವಾಗಿಯೇ ಇರುತ್ತಾರೆ.
ಮಕ್ಕಳು ಕಣ್ಣ ಮುಂದೆ ಇಲ್ಲದೇ ಇದ್ದರೂ ಅವರು ಆರೋಗ್ಯವಾಗಿದ್ದಾರೋ ಇಲ್ಲವೋ, ಸಂತೋಷವಾಗಿದ್ದಾರೋ ಇಲ್ಲವೋ ಎನ್ನುವುದನ್ನು ಅರಿತುಕೊಳ್ಳು ಶಕ್ತಿ ಪೋಷಕರಿಗಲ್ಲದೆ ಬೇರೆ ಯಾರಿಗೂ ಇರಲು ಸಾಧ್ಯವಿಲ್ಲ. ಇದು ದೇವರು ನೀಡಿದ ವರ. ಹಾಗೊಂದು ವೇಳೆ ಮಕ್ಕಳಿಗೆ ಯಾವುದೇ ಸಮಸ್ಯೆಗಳಾದರೂ ಪೋಷಕರು ಅದನ್ನು ನೋಡಲೇಬೇಕು ಅಥವಾ ಆ ಘಟನೆಗಳು ಅವರ ಕಣ್ಣ ಮುಂದೆನೇ ನಡೆಯಬೇಕು ಎಂದಿಲ್ಲ. ಅವರಿಗೆ ಇಂತೆಲ್ಲಾ ವಿಚಾರಗಳು ನೋಡದೆ ಕೇಳದೆ ಅರಿವಿಗೆ ಬಂದು ಬಿಡುತ್ತವೆ.

ಹೀಗೆ ಮಕ್ಕಳ ವಿಚಾರದಲ್ಲಿ ಸದಾ ಒಳ್ಳೆಯದನ್ನೇ ಯೋಚಿಸುವ, ಅವರ ಸಂತೋಷವನ್ನೇ ಬಯಸುವ ಪೋಷಕರು ಇರುವವರೆಗೂ ಮಕ್ಕಳು ಸದಾ ಸಂತೋಷವಾಗಿರುತ್ತಾರೆ. ಇದೇ ಆತ್ಮವಿಶ್ವಾಸ, ಇದೇ ಧೈರ್ಯ, ಇದೇ ನಂಬಿಕೆಯಲ್ಲಿ ವ್ಯಕ್ತಿಯೊಬ್ಬ ಒಡಿಶಾದ ರೈಲು ದುರಂತದ ಸ್ಥಳದಲ್ಲಿ ತನ್ನವರನ್ನು ಹುಡುಕುವ ದೃಶ್ಯ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡಿತ್ತು.
ಆತನ ಮನಸ್ಸಿನಲ್ಲಿ ಗೊಂದಲ, ತಳಮಳ, ಆತನ ಕಣ್ಣುಗಳು ಏನೋ ಹುಡುಕುತ್ತಿವೆ ಎನ್ನುವುದು ನೋಡುಗರಿಗೆ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಸರಿಸುಮಾರು 230 ಕಿಮೀ ಪ್ರಯಾಣಿಸಿದ ಬಂದ ಆ ವ್ಯಕ್ತಿ ಗುಂಪುಗಳನ್ನು ಚದುರಿಸುತ್ತಾ, ಜನರ ನಡುವೆ ನುಗ್ಗುತ್ತಾ ಯಾರನ್ನೋ ಹುಡುಕುತ್ತಿದ್ದನು.
ಹೀಗೆ ಆತ ಹುಡುಕಿದ್ದು ಸ್ನೇಹಿತರನ್ನಲ್ಲ, ಸಂಬಂಧಿಕರನ್ನಲ್ಲ ಬದಲಿಗೆ ತನ್ನ ಕರುಳು ಬಳ್ಳಿಯನ್ನ. ತನ್ನ ಮಗ ಸಾವನ್ನಪ್ಪಿದ್ದಾನೆಂದು ಸ್ಪಷ್ಟವಾಗಿ ಪೊಲೀಸರು ಹೇಳಿದರೂ ದೃತಿಗೆಡದೆ, ದೃಢವಾದ ನಂಬಿಕೆಯಿಂದ ತಂದೆಯೊಬ್ಬ ತನ್ನ ಮಗನನ್ನು ಜೀವಂತವಾಗಿ ಹುಡುಕಿದ್ದಾರೆ. ಇದೊಂದು ನಿಜಕ್ಕೂ ಹೃದಯ ಸ್ಪರ್ಶಿ ಕಥೆ.
ಶುಕ್ರವಾರ (ಜೂನ್ 2) ಸಂಜೆ 7.30ರ ಸುಮಾರಿಗೆ ಒಡಿಶಾದ ಬಾಲಸೋರ್ ಬಳಿ ಮೂರು ರೈಲುಗಳ ನಡುವೆ ಭೀಕರ ಅಪಘಾತ ಸಂಭವಿಸಿತು. ಈ ಘಟನೆಯಲ್ಲಿ 275 ಜನ ಪ್ರಯಾಣಿಕರು ಮೃತಪಟ್ಟಿದ್ದಾರೆ. 150 ಶವಗಳ ಗುರುತು ಇನ್ನೂ ಪತ್ತೆಯಾಗಿಲ್ಲ. 1100 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಕೆಲವರು ಇನ್ನೂ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಡಿಶಾದಲ್ಲಿ ಸಂಭವಿಸಿದ ಈ ದುರಂತ ರೈಲು ಅಪಘಾತ ಕುಟುಂಬಗಳನ್ನು ತಲ್ಲಣಗೊಳಿಸಿದೆ.
ಸಂಬಂಧಿಕರು ತಮ್ಮ ಕುಟುಂಬ ಸದಸ್ಯರನ್ನು ಪತ್ತೆಹಚ್ಚಲು ಅಗಾಧವಾದ ಸವಾಲನ್ನು ಎದುರಿಸುತ್ತಿದ್ದಾರೆ. ಘಟನೆ ನಡೆದು ಇಂದಿಗೆ ಐದು ದಿನಗಳು ಕಳೆದರೂ ಕೆಲ ಕುಟುಂಬಗಳಿಗೆ ತಮ್ಮವರು ಸಿಕ್ಕೇ ಇಲ್ಲ. ಬದುಕಿದ್ದಾರೋ, ಗಾಯಗೊಂಡಿದ್ದಾರೋ, ಆಸ್ಪತ್ರೆಯಲ್ಲಿದ್ದಾರೋ, ಹೆದರಿ ಕಾಣೆಯಾಗಿದ್ದಾರೋ ಯಾವುದು ಕೂಡ ಸ್ಪಷ್ಟತೆ ಇಲ್ಲ. ಆದರೂ ನಂಬಿಕೆ ಕಳೆದುಕೊಳ್ಳದೇ ಜನ ತಮ್ಮವರ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.

ಹೀಗೆ 24 ವರ್ಷದ ಬಿಸ್ವಜಿತ್ ಮಲಿಕ್ ಎಂಬಾತ ಬಾಲಸೋರ್ ರೈಲು ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ ಎಂದು ಭಾವಿಸಲಾಗಿತ್ತು. ಆದರೆ ಈ ಮಾತನ್ನು ತಂದೆ ಹೆಲರಾಮ್ ಮಲಿಕ್ ನಂಬಲೇ ಇಲ್ಲ. ಪಟ್ಟು ಬಿಡದೇ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಘಟನೆ ನಡೆದ ಸ್ಥಳದಲ್ಲಿ ಅನ್ವೇಷಣೆ ನಡೆಸಿದರು. ಮಗ ಸಿಗಲಿಲ್ಲ.
ಬಳಿಕ ಗಾಯಗೊಂಡವರು ದಾಖಲಾದ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲೂ ತನ್ನ ಮಗನಿಗಾಗಿ ಹೆಲರಾಮ್ ಮಲಿಕ್ ಹುಡುಕಾಟ ನಡೆಸಿದರು. ಆದರೆ ಮಗ ಸಿಗಲೇ ಇಲ್ಲ. ಬಳಿಕ ಒಡಿಶಾದ ತಾತ್ಕಾಲಿಕ ಶವಾಗಾರಕ್ಕೆ ಹೋದರು. ಇನ್ನೇನು ಎಲ್ಲೂ ಸಿಗದೇ ಇದ್ದಾಗ ಶವಗಾರದಲ್ಲಿ ಮಗ ಸಿಗಲು ಸಾಧ್ಯ ಎಂದು ಕೋಲ್ಕತ್ತಾದಿಂದ ಆಂಬ್ಯುಲೆನ್ಸ್‌ನಲ್ಲಿ ಬಂದರು.
ಆದರೆ ಮಗ ಸಾವನ್ನಪ್ಪಿರಲಿಲ್ಲ. ಆತನನ್ನು ಹೆಲರಾಮ್ ಮಲಿಕ್ ಜೀವಂತವಾಗಿದ್ದಾರೆ ಎಂದು ಕಂಡುಹಿಡಿದರು. ಅತೀವ ಸಂತೋಷದಿಂದ ಅವರು ಬಿಸ್ವಜಿತ್ ಅವರನ್ನು ಸುರಕ್ಷಿತವಾಗಿ ಕೋಲ್ಕತ್ತಾಕ್ಕೆ ಕರೆತಂದರು. ಅವರ ಪುನರ್ಮಿಲನದ ಅಸಾಮಾನ್ಯ ಕಥೆ ಕೇಳುಗರ ಕಣ್ಣಲ್ಲಿ ನೀರು ತರಿಸುತ್ತದೆ. ವರದಿಗಳ ಪ್ರಕಾರ ಬಿಸ್ವಜಿತ್ ಅವರ ಬಲಗೈ ಮೂಳೆ ಮುರಿದು ಹೋಗಿದೆ. ಇದಕ್ಕಾಗಿ ಹೆಚ್ಚುವರಿ ಶಸ್ತ್ರಚಿಕಿತ್ಸೆಗಳ ಅಗತ್ಯವಿರುತ್ತದೆ ಎಂದು ತಿಳಿದು ಬಂದಿದೆ. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆಯಿಂದ ಘಟನಾ ಸ್ಥಳದಲ್ಲಿ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಯ ಸಂದರ್ಭಗಳಲ್ಲಿ ಗಾಯಗೊಂಡ ಪ್ರಯಾಣಿಕರನ್ನು ಸರಿಯಾಗಿ ಪರಿಶೀಲಿಸಲಾಗಿಲ್ಲ. ಬಿಸ್ವಜಿತ್ ಪ್ರಕರಣವು ಈ ಘಟನೆಗೆ ಉದಾಹರಣೆಯಾಗಿದೆ. ಆದರೆ ಯಾರೇ ಏನೇ ಹೇಳಿದರೂ ಮಕ್ಕಳ ಬಗ್ಗೆ ಪೋಷಕರಿಗೆ ತುಂಬಾ ಚೆನ್ನಾಗಿ ಅರಿವಾಗುತ್ತದೆ ಎನ್ನುವುದಕ್ಕೆ ಇದೊಂದು ಘಟನೆ ಸಾಕ್ಷಿ.












Click it and Unblock the Notifications