ಒಡಿಶಾ ರೈಲು ಅಪಘಾತ: ಪತಿಯ ಸಾವು ಸುಳ್ಳಾಯಿತು, ಪರಿಹಾರ ಬೇಕೆಂದ ಪತ್ನಿಗೆ ಸಂಕಷ್ಟ ಎದುರಾಯಿತು
ಭುವನೇಶ್ವರ್, ಜೂನ್ 07: ಒಡಿಶಾ ತ್ರಿವಳಿ ರೈಲು ದುರಂತಕ್ಕೆ ದೇಶವೇ ಮರುಗಿದೆ. ಇದೇ ಅವಕಾಶ ಲಾಭ ಪಡೆಯಲು ಮುಂದಾದ ಮಹಿಳೆಯೊಬ್ಬಳು ಬದುಕಿರುವ ತನ್ನ ಪತಿಯನ್ನು ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ಸುಳ್ಳು ಹೇಳಿ ಸದ್ಯ ಪೇಚಿಗೆ ಸಿಲುಕಿದ ವಿಕ್ಷಣ ಘಟನೆಯೊಂದು ನಡೆದಿದೆ.
ಒಡಿಶಾದ ಬಾಲಸೋರ್ ರೈಲು ಅಪಘಾತದಲ್ಲಿ ಪತಿಯ ಸಾವಾಗಿದೆ ಎಂದು ಹೇಳಿದ್ದಳು. ರೈಲ್ವೆ ಸಚಿವಾಲಯ ಘೋಷಿಸಿದ್ದ ಪರಿಹಾರ ಹಣವನ್ನು ಪಡೆಯಲು ಆಕೆ ಯತ್ನಿಸಿದ್ದರು. ಆದರೆ ಪತಿಯೇ ನೀಡಿದ ದೂರಿನ ಮೇರೆಗೆ ಆಕೆ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಪೊಲೀಸ್ ಕೈಗೆ ಸಿಗದಂತೆ ತಲೆಮರೆಸಿಕೊಂಡಿದ್ದಾಳೆ.

ಬಾಲಸೂರ್ ನಲ್ಲಿ ಶುಕ್ರವಾರ ಜೂನ್ 2 ರಂದು ಕಟಕ್ ಜಿಲ್ಲೆಯ ಮಣಿಬಂಡಾದ ಗೀತಾಂಜಲಿ ದತ್ತಾ ಎಂಬುವವರು ರೈಲ್ವೆ ಅಪಘಾತದಲ್ಲಿ ತನ್ನ ಪತಿ ಬಿಜಯ್ ದತ್ತಾ ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡಿದ್ದರು. ನೂರಾರು ಶವಗಳ ರಾಶಿ ಮಧ್ಯೆ ಮತದೇಹವೊಂದನ್ನು ಗುರುತಿಸಿ ಇದು ತನ್ನ ಪತಿಯದ್ದೇ ಎಂದು ಹೇಳಿಕೊಂಡಿದ್ದರು.
ಆರಂಭದಲ್ಲಿ ಮಹಿಳೆಯ ಹೇಳಿಕೆ ಪಡೆದ ಅಧಿಕಾರಿಗಳು ಮೃತ ವ್ಯಕ್ತಿ ಮತ್ತು ಮಹಿಳೆ ನೀಡಿದ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಆಕೆಯ ಸುಳ್ಳು ಮಾಹಿತಿ ನೀಡಿ ಪರಿಹಾರ ಪಡೆಯಲು ಮುಂದಾಗಿರುವುದು ಅಧಿಕಾರಿಗಳಗೆ ಗೊತ್ತಾಗಿದೆ.

ಪೊಲೀಸರು ಎಚ್ಚರಿಕೆ ನೀಡಿ ಆಕೆಯನ್ನು ಬಿಡಿಸಿದರೂ, ಪತಿ ಮಣಿಯಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ತೊಂದರೆ ಪ್ರಾರಂಭವಾಯಿತು. ಬಂಧನದ ಭೀತಿಯಿಂದ ಮಹಿಳೆ ಈಗ ತಲೆಮರೆಸಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಪರ್ಯಾಸವೆಂದರೆ ಸಾರ್ವಜನಿಕ ಪರಿಹಾರ ಹಣ ಪಡೆಯಲು ಮುಂದಾದ ಮಹಿಳೆಯು 13 ವರ್ಷಗಳಿಂದ ದಂಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕರ ಹಣವನ್ನು ದೋಚಲು ಯತ್ನಿಸಿದ ಗೀತಾಂಜಲಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪತಿ ಬಿಜಯ್ ಒತ್ತಾಯಿಸಿದ್ದಾರೆ. ಜೊತೆಗೆ ಮಹಿಳೆ ತಾನು ಮೃತಪಟ್ಟಿರುವ ಬಗ್ಗೆ ಹೇಳಿರುವ ಮಾತು ನಿಜವಲ್ಲ ಎಂದು ಹೇಳಿದ್ದಾರೆ.
ಇದನ್ನು ಕೇಳಿ ಅಧಿಕಾರಿಗಳು ಬಾಲಸೋರ್ ಜಿಲ್ಲೆಯ ಬಹನಾಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಪೊಲೀಸರು ಗೀತಾಂಜಲಿಯ ಪತಿಗೆ ತಿಳಿಸಿದ್ದಾರೆ ಎಂದು ಮಣಿಬಂಡಾ ಪೊಲೀಸ್ ಠಾಣೆ ಪ್ರಭಾರಿ ಬಸಂತ್ ಕುಮಾರ್ ಹೇಳಿದರು.
ಬೇರೆ ಮೃತದೇಹವನ್ನು ಪತಿ ಎಂದಿದ್ದವಳ ವಿರುದ್ಧ ಕ್ರಮಕ್ಕೆ ಆಗ್ರಹ
ಈ ಮಧ್ಯೆ ಮುಖ್ಯ ಕಾರ್ಯದರ್ಶಿ ಪಿಕೆ ಜೆನಾ ಅವರು ಮೃತದೇಹಗಳ ಮೇಲೆ ನಕಲಿ ಹಕ್ಕುದಾರರನ್ನು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರೈಲ್ವೆ ಮತ್ತು ಒಡಿಶಾ ಪೊಲೀಸರಿಗೆ ಸೂಚಿಸಿದರು. ಘಟನೆ ಸಂಬಂಧ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಮೃತರ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು. ಅಪಘಾತದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ರೈಲ್ವೆ ಸಚಿವಾಲಯ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.
ಜೂನ್ 2ರಂದು ಕೋರಮಂಡಲ್ ಎಕ್ಸ್‌ಪ್ರೆಸ್ ಸಂಜೆ 7 ಗಂಟೆಗೆ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಉರುಳಿ ಬಿದ್ದವು. ಇದೇ ವೇಳೆ ಯಶವಂತಪುರ ಹೌರಾ ಎಕ್ಸಪ್ರೆಸ್ ರೈಲು ಸಹ ಉರಳಿ ಬಿದ್ದ ರೈಲು ಬೋಗಿಗೆ ಡಿಕ್ಕಿ ಹೊಡೆದು ತ್ರಿವಳಿ ರೈಲಿನ ದರುಂತ ಸಭವಿಸಿತ್ತು. ಈ ವೇಳೆ 280 ಜನರು ಸಾವನ್ನಪ್ಪಿದರು. 1,200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.












Click it and Unblock the Notifications