Get Updates
Get notified of breaking news, exclusive insights, and must-see stories!

ಒಡಿಶಾ ರೈಲು ದುರಂತ: ಶವಾಗಾರಗಳಲ್ಲಿ ಇಲ್ಲ ಜಾಗ, ಟ್ರಕ್‌ಗಳಲ್ಲಿಯೇ ಮೃತದೇಹಗಳ ಸಂಗ್ರಹ

ಭುವನೇಶ್ವರ, ಜೂನ್. 06: ಒಡಿಶಾದ ಬಾಲಸೋರ್‌ನಲ್ಲಿ ನಡೆದ ಭೀಕರ ಮೂರು ರೈಲು ಅಪಘಾತದ ಸ್ಥಳದಲ್ಲಿ ಮತ್ತೆ ರೈಲು ಸಂಚಾರ ಆರಂಭವಾಗಿದೆ. ಎಲ್ಲವೂ ಸಹಜವಾಗಿದೆ ಎಂಬಂತೆ ತೋರಿಸಿಕೊಳ್ಳಲಾಗುತ್ತಿದೆ. ಆದರೆ, ಪ್ರೀತಿಪಾತ್ರರನ್ನು ಕಳೆದುಕೊಂಡ ಸಂತ್ರಸ್ತರ ಕುಟುಂಬಗಳ ನೋವು ಇನ್ನು ಹಾಗೆಯೇ ಇದೆ. ಜೊತೆಗೆ ತಮ್ಮವರ ಮೃತದೇಹಗಳಿಗಾಗಿ ಇನ್ನು ಪರದಾಡುತ್ತಿದ್ದಾರೆ.

ಶವಾಗಾರಗಳಲ್ಲಿ ಮೃತದೇಹಗಳನ್ನು ಇರಿಸಲು ಸ್ಥಳವಿಲ್ಲದ ಕಾರಣ ಆಸ್ಪತ್ರೆಗಳ ಹೊರಗಡೆ ಶೈತ್ಯೀಕರಿಸಿದ ಟ್ರಕ್‌ಗಳಲ್ಲಿ (Refrigerated Trucks ) ಮೃತದೇಹಗಳನ್ನು ಸಂಗ್ರಹಿಸಲಾಗಿದೆ. ಶುಕ್ರವಾರದ ರೈಲು ಅಪಘಾತದಲ್ಲಿ 288 ಜನರು ಸಾವನಪ್ಪಿದ್ದು, 1200 ಮಂದಿ ಗಾಯಗೊಂಡಿದ್ದಾರೆ. ಮೃತರ ಶವಗಳನ್ನು ಭುವನೇಶ್ವರಕ್ಕೆ ಕೊಂಡೊಯ್ಯಲಾಗಿದೆ.

Odisha Train Accident: Bodies Stored in Refrigerated Trucks

ಈಗಾಗಲೇ ತರ ಸಂಬಂಧಿಕರು ತಮ್ಮವರ ದೇಹವನ್ನು ತೆಗೆದುಕೊಂಡಿದ್ದಾರೆ. ಆದರೆ, ಇನ್ನು, 83 ಮೃತದೇಹಗಳ ಗುರುತು ಪತ್ತೆಯಾಗಿಲ್ಲ. ಶವಾಗಾರಗಳಲ್ಲಿ ಯಾವುದೇ ಸ್ಥಳಾವಕಾಶವಿಲ್ಲದೇ, ಭುವನೇಶ್ವರದಲ್ಲಿರುವ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ನಲ್ಲಿ ಇರಿಸಲಾಗಿರುವ ರೆಫ್ರಿಜರೇಟೆಡ್ ಟ್ರಕ್‌ಗಳಲ್ಲಿ ಕೆಲವು ಶವಗಳನ್ನು ಇರಿಸಲಾಗಿದೆ.

ಕೊಳೆಯುತ್ತಿರುವ ದೇಹಗಳನ್ನು ಶೈತ್ಯೀಕರಣಗೊಳಿಸುವುದು ಅತ್ಯಗತ್ಯ. ಏಕೆಂದರೆ ಅವುಗಳನ್ನು ಗುರುತಿಸಲು ಡಿಎನ್‌ಎ ಪರೀಕ್ಷೆ ಮಾಡುವವರೆಗೆ ಕುಟುಂಬಗಳಿಗೆ ಹಸ್ತಾಂತರಿಸಲಾಗುವುದಿಲ್ಲ. ಡಿಎನ್‌ಎ ಪರೀಕ್ಷೆ ಬಳಿಕ ಮೃತದೇಹಗಳನ್ನು ಕುಟುಂಬಕ್ಕೆ ನೀಡಲಾಗುತ್ತದೆ. ಅಲ್ಲಿಯವರೆಗೂ ಅವುಗಳನ್ನು ಸಂರಕ್ಷಿಸುವುದು ರೈಲ್ವೆ ಅಧಿಕಾರಿಗಳ ಜವಾಬ್ದಾರಿಯಾಗಿದೆ.

Odisha Train Accident: Bodies Stored in Refrigerated Trucks

ಇನ್ನು, ಅಪಘಾತವಾದ ಮೂರು ರೈಲುಗಳ ಪೈಕಿ ಕೋರಮಂಡಲ್ ಎಕ್ಸ್‌ಪ್ರೆಸ್‌ನಿಂದ ವಶಪಡಿಸಿಕೊಂಡ ಸುಮಾರು 40 ಮೃತದೇಹಗಳಿಗೆ ಯಾವುದೇ ಗೋಚರ ಗಾಯದ ಗುರುತುಗಳಿಲ್ಲ. ಹೀಗಾಗಿ ಈ ನಲವತ್ತು ಮಂದಿ ಪ್ರಯಾಣಿಕರು ವಿದ್ಯುದಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ನಂಬಲಾಗಿದೆ ಎಂದು ಜಿಆರ್‌ಪಿ ತಿಳಿಸಿದೆ. ಒಡಿಶಾದ ಬಾಲಸೋರ್‌ನ ಸರ್ಕಾರಿ ರೈಲ್ವೇ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಪ್ರಕಾರ, ಅಪಘಾತ ಸಂಭವಿಸಿದಾಗ ಲೈವ್ ಓವರ್‌ಹೆಡ್ ವೈರ್‌ಗಳು ತುಂಡಾಗಿ, ಕೆಲವು ಬೋಗಿಗಳಿಗೆ ಸಿಕ್ಕಿಹಾಕಿಕೊಂಡಿತ್ತು. ಇದು ಪ್ರಯಾಣಿಕರಿಗೆ ವಿದ್ಯುದಾಘಾತ ಉಂಟುಮಾಡಿದೆ ಎಂದು ಸೂಚಿಸಿದೆ.

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮತ್ತು ಮುಖ್ಯ ಕಾರ್ಯದರ್ಶಿ ಪ್ರದೀಪ್ ಜೆನಾ ಜನರು ಮುಂದೆ ಬಂದು ತಮ್ಮ ಪ್ರೀತಿಪಾತ್ರರ ಮೃತದೇಹಗಳನ್ನು ಗುರುತಿಸುವಂತೆ ಮನವಿ ಮಾಡಿದ್ದಾರೆ. ಇದರ ಜೊತೆಗೆ ಸರಿಯಾದ ಮೃತದೇಹಗಳನ್ನು ಸರಿಯಾದ ವ್ಯಕ್ತಿಗೆ ಹಸ್ತಾಂತರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಡಿಎನ್‌ಎ ಪರೀಕ್ಷೆಗಳನ್ನು ಸಹ ಮಾಡಲಾಗುತ್ತಿದೆ.

ರೈಲ್ವೆ ಅಧಿಕಾರಿಗಳು ಪಶ್ಚಿಮ ಬಂಗಾಳ, ಜಾರ್ಖಂಡ್, ಛತ್ತೀಸ್‌ಗಢ ಮತ್ತು ಬಿಹಾರದ ಅಧಿಕಾರಿಗಳಿಗೆ ಮೃತದೇಹಗಳನ್ನು ಗುರುತಿಸಲು ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಿ ತಿಳಿಸುವಂತೆ ಸೂಚಿಸಿದ್ದಾರೆ. ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಮೃತದೇಹಗಳನ್ನು ಸಂರಕ್ಷಿಸುವುದು ಸವಾಲಿನ ಸಂಗತಿ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

"ಹಾನಿಗೊಳಗಾದ ದೇಹಗಳನ್ನು ಹೆಚ್ಚು ಕಾಲ ಇಟ್ಟುಕೊಳ್ಳುವುದು ಸೂಕ್ತವಲ್ಲ, ಎಂಬಾಲ್ (ದೇಹವನ್ನು ಕೆಡದಂತೆ ಸಂರಕ್ಷಿಸುವುದು) ಮಾಡುವುದು ಸಹ ಸಹಾಯ ಮಾಡುವುದಿಲ್ಲ. 12 ಗಂಟೆಗಳ ಒಳಗೆ ಸರಿಯಾಗಿ ಎಂಬಾಮಿಂಗ್ ಮಾಡಿದರೆ ಮಾತ್ರ ದೇಹವನ್ನು ವರ್ಷಗಳವರೆಗೆ ಸಂರಕ್ಷಿಸಬಹುದು ಎಂದು ಏಮ್ಸ್ ಅನ್ಯಾಟಮಿ ವಿಭಾಗದ ಮುಖ್ಯಸ್ಥ ಶರೀಫ್ ಹೇಳಿದ್ದಾರೆ.

ಮಂಗಳವಾರ ಬೆಳಗ್ಗೆ ಸಿಬಿಐ ತನಿಖಾ ತಂಡವು ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್, ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲನ್ನು ಒಳಗೊಂಡ ರೈಲು ಅಪಘಾತದ ಸ್ಥಳಕ್ಕೆ ಆಗಮಿಸಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+