ಕರ್ನಾಟಕದ ಜನರಿಗೆ ಅನುಕೂಲವಾಗಲಿದೆ ಗೋವಾದ ಹೊಸ ಬೈಪಾಸ್ ರಸ್ತೆ

ಪಣಜಿ, ಜನವರಿ 02: ಗೋವಾದ ಪಣಜಿ ಮತ್ತು ಕಾನಕೋನ ನಡುವಿನ ಪ್ರಯಾಣದ ಅವಧಿಯನ್ನು ಕಡಿಮೆ ಮಾಡುವ ಉದ್ದೇಶದಿಂದ ಹೊಸ ಬೈಪಾಸ್ ನಿರ್ಮಾಣ ಮಾಡಲಾಗಿದೆ. ಸುಮಾರು 482 ಕೋಟಿ ರೂ.ಗಳ ನಾಲ್ಕು ಪಥದ 11. 9 ಕಿ. ಮೀ. ಉದ್ದದ ಈ ರಸ್ತೆ ಕರ್ನಾಟಕದಿಂದ ಗೋವಾ ಪ್ರವಾಸ ಕೈಗೊಳ್ಳುವ ಪ್ರವಾಸಿಗರಿಗೆ ಅನುಕೂಲವಾಗಲಿದೆ.

ಕ್ರಿಸ್‌ಮಸ್ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನುವೆಂ-ನಾವೆಲಿಮ್ ಪಶ್ಚಿಮ ಬೈಪಾಸ್ ಅನ್ನು ಉದ್ಘಾಟನೆ ಮಾಡಿದ್ದಾರೆ. ಈ ಬೈಪಾಸ್ ಗೋವಾದ ವಾಣಿಜ್ಯ ರಾಜಧಾನಿಯಾದ ಮಾರ್ಗಾವೋದ ವಾಹನಗಳ ಒತ್ತಡವನ್ನು ಕಡಿಮೆ ಮಾಡುತ್ತದೆ.

Nuvem Navelim Bypass In Goa Will Help Tourists From Karnataka

ಹೊಸದಾಗಿ ನಿರ್ಮಾಣ ಮಾಡಿರುವ 11. 9 ಕಿ. ಮೀ. ಉದ್ದದ ನುವೆಂ-ನಾವೆಲಿಮ್ ಪಶ್ಚಿಮ ಬೈಪಾಸ್ ಪಣಜಿ ಮತ್ತು ಕಾನಕೋನ ಪ್ರಯಾಣದ ಅವಧಿಯನ್ನು ಕಡಿಮೆ ಮಾಡಲಿದೆ. ಸ್ಥಳೀಯ ಜನರಿಗೆ ಅನುಕೂಲ ಮಾಡಿಕೊಡುವುದಲ್ಲದೇ ಕರ್ನಾಟಕದಿಂದ ಗೋವಾಕ್ಕೆ ಹೋಗುವ ಪ್ರವಾಸಿಗರಿಗೆ ಸಹಾಯಕವಾಗಿದೆ.

ಬೈಪಾಸ್ ರಸ್ತೆ ವಿವರಗಳು: ಗೋವಾ ಸರ್ಕಾರ ದಕ್ಷಿಣ ಗೋವಾದಲ್ಲಿನ ದಟ್ಟಣೆ ಕಡಿಮೆ ಮಾಡಲು ಮತ್ತು ಉತ್ತರ ಗೋವಾಕ್ಕೆ ಸಂಪರ್ಕ ಸುಲಭವಾಗಿಲು ಈ ನುವೆಂ-ನಾವೆಲಿಮ್ ಪಶ್ಚಿಮ ಬೈಪಾಸ್ ಯೋಜನೆಯನ್ನು ರೂಪಿಸಿ, ಅನುಷ್ಠಾನಗೊಳಿಸಿದೆ.

ಯೋಜನೆ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಪ್ರಮೋದ್ ಸಾವಂತ್, "ಇ ಬೈಪಾಸ್ 279.38 ಕಿ. ಮೀ. ಹೆದ್ದಾರಿ ಯೋಜನೆ ಭಾಗವಾಗಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ ಅನುದಾನವನ್ನು ನೀಡಿದ್ದು, ಎನ್‌ಹೆಚ್‌ಎಐ ಮೂಲಕ ನಿರ್ಮಾಣ ಮಾಡಲಾಗಿದೆ" ಎಂದರು.

"ಈ ಬೈಪಾಸ್ ರಸ್ತೆ ರಾಜ್ಯದ ಜನರಿಗೆ ಕ್ರಿಸ್‌ಮಸ್ ಹಬ್ಬದ ಉಡುಗೊರೆಯಾಗಿದೆ. ರಾಜ್ಯ ಸರ್ಕಾರ ಕಳೆದ 5 ವರ್ಷಗಳಲ್ಲಿ ಮೂಲ ಸೌಲಭ್ಯ ಸುಧಾರಣೆಗೆ ಹೆಚ್ಚಿನ ಗಮನ ನೀಡಿದೆ. ರಸ್ತೆ, ಸೇತುವೆ ಮತ್ತು ಕೇಂದ್ರದಿಂದ ಅನುಮೋದನೆಗೊಂಡ ಇತರ ಯೋಜನೆಗಳು ಮುಂದಿನ ನಾಲ್ಕು ವರ್ಷಗಳಲ್ಲಿ ಪೂರ್ಣವಾಗಲಿದೆ" ಎಂದು ಹೇಳಿದೆ.

ದಕ್ಷಿಣ ಗೋವಾದಲ್ಲಿರುವ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಉತ್ತರ ಗೋವಾಕ್ಕೆ ಸುಲಭವಾಗಿ ಸಂಚಾರ ನಡೆಸಲು ಅನುಕೂಲವಾಗುವಂತೆ ನುವೆಂ-ನಾವೆಲಿಮ್ ಪಶ್ಚಿಮ ಬೈಪಾಸ್ ನಿರ್ಮಾಣ ಮಾಡಲಾಗಿದೆ. ಉತ್ತಮ ಗುಣಮಟ್ಟದ ರಸ್ತೆ ಇದಾಗಿದ್ದು, 100 ಕಿ. ಮೀ. ವೇಗದಲ್ಲಿ ಸಂಚಾರವನ್ನು ನಡೆಸಬಹುದಾಗಿದೆ.

ಹೊಸ ಬೈಪಾಸ್ ರಸ್ತೆ ಮಾರ್ಗಾವೋದ ವಾಹನಗಳ ಒತ್ತಡ ಕಡಿಮೆ ಮಾಡುತ್ತದೆ. ಈ ರಸ್ತೆ ಗೇಮ್ ಚೇಂಜರ್ ಆಗಿದೆ ಎಂದು ಸ್ಥಳೀಯ ವ್ಯಾಪಾರಿಗಳು ಹೇಳಿದ್ದಾರೆ. ಈ ಹಿಂದೆ ಮಾರ್ಗವೋ ಮತ್ತು ಉತ್ತರ ಗೋವಾ ಸಂಪರ್ಕಿಸುವ ರಸ್ತೆ ಉತ್ತಮವಾಗಿರಲಿಲ್ಲ. ಈ ಯೋಜನೆ ಜಾರಿಗೊಳಿಸಿದ ಮುಖ್ಯಮಂತ್ರಿ ಮತ್ತು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಗೋವಾ ರಾಜ್ಯಕ್ಕೆ ಹೊರಗಿನಿಂದ ಆಗಮಿಸುವ ಪ್ರವಾಸಿಗರಿಗೆ ಈ ಬೈಪಾಸ್ ರಸ್ತೆ ಅನುಕೂಲವಾಗಿದೆ. ಉತ್ತಮ ರಸ್ತೆ ಸಂಪರ್ಕದ ಕಾರಣ ಪ್ರವಾಸಿಗರು ಸುಲಭವಾಗಿ ಕಾನಕೋನ ತನಕ ಸಂಚಾರ ನಡೆಸಬಹುದಾಗಿದೆ ಎಂದು ಸ್ಥಳೀಯರು ವಿವರಿಸಿದ್ದಾರೆ.

ಸರ್ಕಾರದ ಈ ಮಹತ್ವದ ನುವೆಂ-ನಾವೆಲಿಮ್ ಪಶ್ಚಿಮ ಬೈಪಾಸ್ ಯೋಜನೆಯಿಂದಾಗಿ ಅಂಬ್ಯುಲೆನ್ಸ್‌ಗಳು ಸಹ ಸುಲಭವಾಗಿ ನಾವೆಲಿಮ್‌ನಿಂದ ದಕ್ಷಿಣ ಗೋವಾದ ಆಸ್ಪತ್ರೆಗಳಿಗೆ ಸಂಚಾರ ನಡೆಸಲು ಅನುಕೂಲವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+