ಹರಿಯಾಣ ಹಿಂಸಾಚಾರ: ಧಾರ್ಮಿಕ ಮೆರವಣಿಗೆಯ ಮೇಲೆ ಕಲ್ಲು ಎಸೆಯಲು ಬಳಸಿದ ನುಹ್ ಹೋಟೆಲ್ ಧ್ವಂಸ!

ನುಹ್ ಆಗಸ್ಟ್ 6: ಹಿಂಸಾಚಾರ ಪೀಡಿತ ರಾಜ್ಯ ಹರಿಯಾಣದ ನುಹ್‌ನಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಲಾದ ಮನೆಗಳನ್ನು ಧ್ವಂಸ ಕಾರ್ಯಾಚರಣೆಯು ಎರಡು ಸಮುದಾಯಗಳ ನಡುವಿನ ಧ್ವೇಷದ ಕಿಚ್ಚನ್ನು ಹೆಚ್ಚಿಸುತ್ತಿದೆ. ನುಹ್ ಜಿಲ್ಲಾಡಳಿತ ಸಹಾರಾ ಹೋಟೆಲ್ ಅನ್ನು ನೆಲಸಮಗೊಳಿಸಲು ಬುಲ್ಡೋಜರ್‌ಗಳನ್ನು ತಂದಿದ್ದು ಇದು ಡೆಮಾಲಿಶನ್ ಡ್ರೈವ್‌ನ ನಾಲ್ಕನೇ ದಿನವಾಗಿದೆ.

ಮೆಡಿಕಲ್ ಸ್ಟೋರ್‌ಗಳು ಸೇರಿದಂತೆ ಸುಮಾರು 12 ಅಂಗಡಿಗಳನ್ನು ಶನಿವಾರ ಧ್ವಂಸಗೊಳಿಸಲಾಗಿದೆ. ಹಿಂಸಾಚಾರ ಪೀಡಿತ ನುಹ್‌ನಿಂದ ಸುಮಾರು 20 ಕಿಮೀ ದೂರದಲ್ಲಿರುವ ಟೌರುನಲ್ಲಿ ವಾಸಿಸುವ ವಲಸಿಗರ ಗುಡಿಸಲುಗಳನ್ನು ಈ ವಾರದ ಆರಂಭದಲ್ಲಿ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿಕೊಂಡಿದ್ದಕ್ಕಾಗಿ ನೆಲಸಮಗೊಳಿಸಲಾಗಿತ್ತು.

Nuh Hotel was demolished after stone pelting on a religious procession

ಕೆಡವಲಾಗುತ್ತಿರುವ ಕೆಲವು ಅಂಗಡಿಗಳು ಮತ್ತು ಮನೆಗಳು ಇತ್ತೀಚಿನ ಘರ್ಷಣೆಯಲ್ಲಿ ಭಾಗಿಯಾದವರ ಒಡೆತನದಲ್ಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ವಿವಿಧ ಪ್ರದೇಶಗಳಲ್ಲಿ 50 ರಿಂದ 60 ಕಟ್ಟಡಗಳನ್ನು ಇದುವರೆಗೆ ಕೆಡವಲಾಗಿದೆ. ನುಹ್ ಹಿಂಸಾಚಾರದಲ್ಲಿ ಭಾಗಿಯಾಗಿರುವವರು ಬಂಧನಕ್ಕೆ ಹೆದರಿ ಓಡಿ ಹೋಗಿದ್ದಾರೆ.

ಈ ನಡುವೆ ಮೂರು ದಿನಗಳ ಕಾಲ ನುಹ್‌ನ ವಿವಿಧ ಸ್ಥಳಗಳಲ್ಲಿ ಬುಲ್ಡೋಜರ್ ಆಕ್ಷನ್ ನಡೆಸಲಾಗಿದೆ. ಕಳೆದ ಹಲವಾರು ವರ್ಷಗಳಿಂದ ತೆಗೆದುಹಾಕಲಾಗದ ಅಕ್ರಮ ಮನೆಗಳನ್ನು ಈ ಸಂದರ್ಭದಲ್ಲಿ ತೆಗೆದುಹಾಕುತ್ತಿರುವುದು ಹಿಂಸಾಚಾರದಲ್ಲಿ ಭಾಗಿಯಾಗಿರುವವರಿಗೆ ಪಾಠ ಕಲಿಸಲು ಎಂದು ಮೂಲಗಳು ಹೇಳುತ್ತಿವೆ.

ಸೋಮವಾರ ವಿಶ್ವ ಹಿಂದೂ ಪರಿಷತ್ ಮೆರವಣಿಗೆ ಮೇಲೆ ಗುಂಪು ದಾಳಿ ಮಾಡಿದಾಗ ನುಹ್‌ನಲ್ಲಿ ಉಂಟಾದ ಕೋಮು ಘರ್ಷಣೆಯಲ್ಲಿ ಇಬ್ಬರು ಗೃಹ ರಕ್ಷಕರು ಮತ್ತು ಧರ್ಮಗುರು ಸೇರಿದಂತೆ ಆರು ಜನರು ಸಾವನ್ನಪ್ಪಿದರು. ಸಂಜೆಯಾಗುತ್ತಿದ್ದಂತೆ ಹಿಂಸಾಚಾರವು ಉಲ್ಬಣಗೊಂಡಿತ್ತು. ಮಧ್ಯರಾತ್ರಿಯ ನಂತರ ಮಸೀದಿಗೆ ಬೆಂಕಿ ಹಚ್ಚಲಾಯಿತು. ನೂರಕ್ಕೂ ಹೆಚ್ಚು ವಾಹನಗಳನ್ನು ಸುಟ್ಟುಹಾಕಿ ಧ್ವಂಸಗೊಳಿಸಲಾಯಿತು. ಜನಸಮೂಹ ನುಹ್ ಮತ್ತು ನೆರೆಯ ಗುರುಗ್ರಾಮ್‌ನಲ್ಲಿ ಧಾಳಿ ನಡೆಸಿತು.

ಹರಿಯಾಣದ ಗೃಹ ಸಚಿವ ಅನಿಲ್ ವಿಜ್ ಈ ಬಗ್ಗೆ ಮಾತನಾಡಿ, ಹಿಂಸಾಚಾರದ ಹಿಂದೆ "ದೊಡ್ಡ ಆಟದ ಯೋಜನೆ ಇದೆ" ಎಂದು ಆರೋಪಿಸಿದ್ದಾರೆ. ಪ್ರತಿಪಕ್ಷಗಳ ಗುಪ್ತಚರ ವೈಫಲ್ಯದ ಆರೋಪಗಳನ್ನು ಆಡಳಿತ ಪಕ್ಷ ತಿರಸ್ಕರಿಸಿದೆ. ಆದಾಗ್ಯೂ, ಘರ್ಷಣೆಯ ಹಿಂದೆ ಯಾವುದೇ ಮಾಸ್ಟರ್‌ಮೈಂಡ್‌ನ ಸುಳಿವು ಸಿಕ್ಕಿಲ್ಲ ಎಂದು ನುಹ್ ಪೊಲೀಸ್ ವರಿಷ್ಠಾಧಿಕಾರಿ ಹೇಳುತ್ತಾರೆ.

ಇಲ್ಲಿಯವರೆಗೆ 106 ಪ್ರಥಮ ಮಾಹಿತಿ ವರದಿಗಳನ್ನು (ಎಫ್‌ಐಆರ್) ದಾಖಲಿಸಲಾಗಿದೆ ಮತ್ತು 216 ಜನರನ್ನು ಬಂಧಿಸಲಾಗಿದೆ. 24 ಎಫ್‌ಐಆರ್‌ಗಳು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ವಿರುದ್ಧವಾಗಿವೆ ಮತ್ತು ಹಿಂಸಾಚಾರಕ್ಕೆ ಕಾರಣವಾದ ವಿಷಯಕ್ಕಾಗಿ ನಾಲ್ವರನ್ನು ಬಂಧಿಸಲಾಗಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+