ಮಣಿಪುರದಲ್ಲಿ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದ ಎನ್‌ಪಿಎಫ್
ಕೊಹಿಮಾ, ಮೇ 19: ಮಣಿಪುರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಎನ್‌ಪಿಎಫ್(ನಾಗಾ ಪೀಪಲ್ಸ್ ಫ್ರಂಟ್) ಹಿಂಪಡೆಯಲು ನಿರ್ಧರಿಸಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಲೋಕಸಭಾ ಚುನಾವಣೆ ಅಂತ್ಯವಾಗುತ್ತಿದ್ದಂತೆ ಮಣಿಪುರದಲ್ಲಿ ನಡೆದ ಈ ಬೆಳವಣಿಗೆ ಆಶ್ಚರ್ಯ ಮೂಡಿಸಿದೆ.
60 ಶಾಸಕರ ಸಂಖ್ಯಾಬಲದ ವಿಧಾನಸಭೆಯಲ್ಲಿ ನಾಲ್ಕು ಶಾಸಕರನ್ನು ಹೊಂದಿರುವ ಎನ್‌ಪಿಎಫ್ ಬೆಂಬಲವನ್ನು ಹಿಂಪಡೆದರೂ ಸರ್ಕಾರಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ.

ಇನ್ನೆರೆಡು ಸ್ಥಳೀಯ ಪಕ್ಷಗಳು ಹಾಗೂ ಪಕ್ಷೇತರರ ಬೆಂಬಲದಿಂದ ಸರ್ಕಾರ ಸುಭದ್ರವಾಗಿದೆ. ಇದಲ್ಲದೆ ಚುನಾವಣೆ ಬಳಿಕ ಕಾಂಗ್ರೆಸ್‌ನ ಎಲ್ಲಾ ಎಂಟು ಶಾಸಕರು ಬಿಜೆಪಿ ಸೇರಿರುವುದು ಬಿಜೆಪಿ ಸಂಖ್ಯಾಬಲವನ್ನು 29ಕ್ಕೆ ಏರಿಸಿದೆ.
ಬಿಜೆಪಿ ನಾಯಕರು ನಮಗೆ ಗೌರವ ಕೊಡುತ್ತಿಲ್ಲ, ಎನ್‌ಪಿಎಫ್ ಜೊತೆಗೆ ಬಿಜೆಪಿಯವರ ನಡವಳಿಕೆಯಲ್ಲಿ ಹೊಂದಾಣಿಕೆ ಕಂಡುಬರುತ್ತಿಲ್ಲ. ಆದ್ದರಿಂದ ಕಳೆದ ಫೆಬ್ರವರಿಯಿಂದ ನಾವು ಪರಾಮರ್ಶೆ ಸಭೆ ನಡೆಸುತ್ತಾ ಬಂದಿದ್ದೇವೆ. ಮೈತ್ರಿ ಸರ್ಕಾರದಿಂದ ಹೊರಬರುವ ಕುರಿತು ನಿರ್ಧರಿಸಿದ್ದೇವೆ ಎಂದು ಎನ್‌ಪಿಎಫ್ ವಕ್ತಾರ ಅಕುಂಬೆಮೋ ಕಿಕೊನ್ ತಿಳಿಸಿದ್ದಾರೆ.












Click it and Unblock the Notifications