'ಉಡಾನ್' ಟಿಕೆಟ್ ದರ ಇನ್ನು ಮೂರು ತಿಂಗಳಿಗೊಮ್ಮೆ ಪರಿಷ್ಕರಣೆ
ದೇಶದಲ್ಲಿನ ಹಣದುಬ್ಬರದ ಆಧಾರದಲ್ಲಿ ಈ ಟಿಕೆಟ್ ಬೆಲೆಗಳನ್ನು ಪರಿಷ್ಕರಣೆಗೊಳಿಸಲಾಗುವುದು ಎಂದ ಕೇಂದ್ರ ನಾಗರಿಕ ವಿಮಾನ ಯಾನ ಇಲಾಖೆ ಹೇಳಿದೆ.
ನವದೆಹಲಿ, ಮೇ 10: ಜನಸಾಮಾನ್ಯರಿಗೂ ವಿಮಾನಯಾನ ಅವಕಾಶ ಕಲ್ಪಿಸುವ ಸದುದ್ದೇಶದೊಂದಿಗೆ ಆರಂಭಿಸಲಾಗಿರುವ ಉಡಾನ್ ಯೋಜನೆಯಡಿ ಬರುವ ವಿಮಾನಗಳ ಟಿಕೆಟ್ ದರಗಳು ಪ್ರತಿ ಮೂರು ತಿಂಗಳಿಗೊಮ್ಮೆ ಪರಿಷ್ಕರಣೆಗೊಳ್ಳಲಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ದೇಶದಲ್ಲಿನ ಹಣದುಬ್ಬರದ ಆಧಾರದಲ್ಲಿ ಈ ಟಿಕೆಟ್ ಬೆಲೆಗಳನ್ನು ಪರಿಷ್ಕರಣೆಗೊಳಿಸಲಾಗುವುದು ಎಂದ ಕೇಂದ್ರ ನಾಗರಿಕ ವಿಮಾನ ಯಾನ ಇಲಾಖೆ ಹೇಳಿದೆ.

ಈ ಯೋಜನೆಯ ಟಿಕೆಟ್ ಬೆಲೆಗಳನ್ನು ನಿರ್ಧರಿಸುವ ವಯಾಬಿಲಿಟಿ ಗ್ಯಾಪ್ ಫಂಡಿಂಗ್ (ವಿಜಿಎಫ್) ಮೇಲೆ ಹಣದುಬ್ಬರದ ಪರಿಣಾಮಗಳನ್ನು ಆಧರಿಸಿ ಟಿಕೆಟ್ ಬೆಲೆಗಳನ್ನು ಪರಿಷ್ಕರಿಸುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುವುದು ಎಂದು ಇಲಾಖೆಯು ವಿವರಣೆ ನೀಡಿದೆ.

Click it and Unblock the Notifications