ಮರಣ ಪ್ರಮಾಣ ಪತ್ರ ಪಡೆಯಲು ಆಧಾರ್ ಕಡ್ಡಾಯವಲ್ಲ

Posted By: Gururaj
Subscribe to Oneindia Kannada

ನವದೆಹಲಿ, ಆ.5 : ಮರಣ ನೋಂದಣಿಗೆ ಆಧಾರ್ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ವಂಚನೆ ತಡೆಯಲು ಮರಣ ನೋಂದಣಿ ಮಾಡಿಸುವ ವೇಳೆ ಆಧಾರ್ ನಂಬರ್ ನೀಡಬೇಕು ಎಂದು ಶುಕ್ರವಾರ ಸುತ್ತೋಲೆ ಹೊರಡಿಸಲಾಗಿತ್ತು.

ನೆನಪಿಡಿ, ಆಧಾರ್ ಗೆ ಲಿಂಕ್ ಆಗದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ರದ್ದು

ಗೃಹ ಇಲಾಖೆ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದು, ಜನರಲ್ಲಿದ್ದ ಗೊಂದಲವನ್ನು ಬಗೆಹರಿಸಿದೆ. ಮರಣ ನೋಂದಣಿ ವೇಳೆ ಆಧಾರ್ ನಂಬರ್ ನೀಡಿದರೆ ಮೃತ ವ್ಯಕ್ತಿಯ ಗುರುತು ಪತ್ತೆ ಹಚ್ಚುವುದು ಸುಲಭವಾಗುತ್ತದೆ. ಸಂಬಂಧಿಕರು ನೀಡಿದ ಮಾಹಿತಿ ನಿಖರವಾದದ್ದೇ? ಎಂದು ತಿಳಿಯಲಿದೆ ಎಂದು ಹೇಳಿದೆ.

Now govt says Aadhaar not mandatory for death certificates

ಮರಣ ನೋಂದಣಿ ಪತ್ರ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಲ್ಲ. ಮೃತ ವ್ಯಕ್ತಿಯ ಆಧಾರ್ ನಂಬರ್ ಮತ್ತು ಎನ್ ರೋಲ್ ಮೆಂಟ್ ಐಡಿ ಬಗ್ಗೆ ಮಾಹಿತಿ ತಿಳಿಯದಿದ್ದರೆ ಪ್ರಮಾಣ ಪತ್ರವನ್ನು ಸಂಬಂಧಿಕರಿಗೆ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

ಮರಣ ನೋಂದಣಿ ಮಾಡಿಸುವ ಸಂದರ್ಭದಲ್ಲಿ ಹಲವಾರು ದಾಖೆಲಗಳನ್ನು ನೀಡುವುದಕ್ಕಿಂತ ಆಧಾರ್ ನಂಬರ್ ನೀಡಿದರೆ ಸಾಕಾಗುತ್ತದೆ. ಸಂಬಂಧಿಕರು ನೀಡುವ ಮಾಹಿತಿಯ ನಿಖರತೆ ತಿಳಿಯಲು ಮತ್ತು ವಂಚನೆ ತಡೆಯಲು ಆಧಾರ್ ನಂಬರ್ ನೀಡಬೇಕು. ಆದರೆ, ಪ್ರಮಾಣ ಪತ್ರ ಪಡೆಯಲು ಇದು ಕಡ್ಡಾಯವಲ್ಲ ಎಂದು ಹೇಳಿದೆ.

ಮರಣ ನೋಂದಣಿ ಮಾಡಿಸುವಾಗ ಯಾವುದೇ ತಪ್ಪು ಮಾಹಿತಿ ನೀಡಿದರೆ ಅದನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ ಎಂದು ಗೃಹ ಇಲಾಖೆ ಹೇಳಿದೆ. ನೋಂದಣಿ ಮಾಡಿಸಲು ಆಗಮಿಸುವ ವ್ಯಕ್ತಿಯ ಆಧಾರ್ ನಂಬರ್ ಅವರ ಪೋಷಕರ ನಂಬರ್ ಗಳನ್ನು ಪಡೆಯಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The government clarified that the use of Aadhaar to register deaths will not be mandatory. In a statement, the home ministry said the use of Aadhaar number for death certificate will help establish the identity of the deceased and ensure accuracy of details provided by relatives or dependents of the deceased and obviate the need for producing multiple documents.
Please Wait while comments are loading...