ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರೇ ದಿನಗಳಲ್ಲಿ ಪಾಸ್ ಪೋರ್ಟ್ ಪಡೆಯಿರಿ!

By Mahesh
|
Google Oneindia Kannada News

ಬೆಂಗಳೂರು, ಜನವರಿ 30: ತತ್ಕಾಲ್ ಅಥವಾ ಫಾಸ್ಟ್ ಟ್ರ್ಯಾಕ್ ಯೋಜನೆಯಡಿ ಮೂರೇ ದಿನಗಳಲ್ಲಿ ಪಾಸ್ ಪೋರ್ಟ್ಪಡೆಯಬಹುದಾಗಿದೆ. ತ್ವರಿತಗತಿಯಲ್ಲಿ ಪಾಸ್ ಪೋರ್ಟ್ ಪಡೆಯುವ ವಿಧಾನದಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಪ್ರಕಟಿಸಿದೆ.

ಪಾಸ್ ಪೋರ್ಟ್ ಪಡೆಯುವ ಪ್ರಕ್ರಿಯೆಯಲ್ಲಿ ಗೆಜೆಟೆಡ್ ಅಧಿಕಾರಿಗಳಿಂದ ಪ್ರಮಾಣ ಪತ್ರ ತರುವುದು ಅನಿವಾರ್ಯವಲ್ಲ. ಆದರೆ, ಅರ್ಜಿದಾರರು ಆಧಾರ್ ಕಾರ್ಡ್ ಕಡ್ಡಾಯವಾಗಿ ನೀಡಬೇಕಾಗುತ್ತದೆ.

 Now, get Passport in 3 days via Tatkal or Fast Track Scheme
ವಿದೇಶಾಂಗ ಸಚಿವಾಲಯದ ಪಾಸ್ಪೋರ್ಟ್ ತಿದ್ದುಪಡಿ 2018ರ ಪ್ರಕಾರ, 3500 ರೂಪಾಯಿಯನ್ನು ಅರ್ಜಿ ಶುಲ್ಕವಾಗಿ ನೀಡಬೇಕಾಗುತ್ತದೆ. ಈ ಹಿಂದೆ 1,500 ರುಪಾಯಿ ನೀಡಿದರೆ, 20 ರಿಂದ 30 ದಿನದೊಳಗೆ ಪಾಸ್ ಪೋರ್ಟ್ ಕೈ ಸೇರುತ್ತಿತ್ತು.

ಆನ್ಲೈನ್ ನಲ್ಲಿ ಪಾಸ್ ಪೋರ್ಟ್ ಗಾಗಿ ಅರ್ಜಿ ಹಾಕುವುದು ಹೇಗೆ?ಆನ್ಲೈನ್ ನಲ್ಲಿ ಪಾಸ್ ಪೋರ್ಟ್ ಗಾಗಿ ಅರ್ಜಿ ಹಾಕುವುದು ಹೇಗೆ?

ಆನ್ ಲೈನ್ ವೇರಿಫಿಕೇಷನ್ ವ್ಯವಸ್ಥೆ ಈಗಾಗಲೇ ಕರ್ನಾಟಕದಲ್ಲಿ ಜಾರಿಯಲ್ಲಿದ್ದು, ದೇಶದೆಲ್ಲೆಡೆ ಶೀಘ್ರದಲ್ಲೇ ಜಾರಿಗೆ ಬರಲಿದೆ. ರಾಷ್ಟ್ರೀಯ ಕ್ರಿಮಿನಲ್ ಹಾಗೂ ಕ್ರೈಂ ಡೇಟಾ ಬೇಸ್ ಜತೆಗೆ ಈ ಪ್ರಕ್ರಿಯೆಯನ್ನು ಜೋಡಿಸಲಾಗುತ್ತಿದ್ದು, ಪಾಸ್ ಪೋರ್ಟ್ ಪರಿಶೀಲನೆ, ವಿತರಣೆ ಸರಳ, ಸುಲಭವಾಗಲಿದೆ.

ಪಾಸ್ ಪೋರ್ಟ್ ನವೀಕರಣ ಮಾಡಿಕೊಳ್ಳುವುದು ಹೇಗೆ?ಪಾಸ್ ಪೋರ್ಟ್ ನವೀಕರಣ ಮಾಡಿಕೊಳ್ಳುವುದು ಹೇಗೆ?

ಪಾಸ್ ಪೋರ್ಟ್ ವಿತರಣೆಯ ಪ್ರಕ್ರಿಯೆಯಲ್ಲಿ ಕಚೇರಿಯ ಕೆಲಸಕ್ಕೆ ಬೇಕಾಗುವುದು ಮೂರು ದಿನ ಮಾತ್ರ. ಆದರೆ, ಹೆಚ್ಚಿನ ಸಮಯ ತಗುಲುವುದು ಪೊಲೀಸ್ ಪರಿಶೀಲನೆ ಹಂತದಲ್ಲಿ. ಇದಕ್ಕಾಗಿಯೇ ಸರಾಸರಿ 45 ದಿನ ಆಗುತ್ತಿತ್ತು. ಸದ್ಯಕ್ಕೆ ಬೆಂಗಳೂರಿನಲ್ಲಿ ಈ ಪ್ರಕ್ರಿಯೆ 13 ದಿನದಲ್ಲಿ, ರಾಜ್ಯದ ಇತರೆಡೆ 25 ದಿನದಲ್ಲಿ ಮುಗಿಯುತ್ತಿದೆ ಎಂದು ಪ್ರಾದೇಶಿಕ ಪಾಸ್ ಪೋರ್ಟ್ ಅಧಿಕಾರಿ ಹೇಳಿದ್ದಾರೆ.

English summary
Under Tatkal (or fast track) scheme, it has now become easier to obtain a passport.The passport will be processed and issued within 3 days and the police verification will be carried out after the passport has been dispatched.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X