ಸೀತಾ ಮಾತೆಯನ್ನು ಸಹ ಬಿಡಲಿಲ್ಲ; ಉತ್ತರ ಪ್ರದೇಶ ಮತದಾರರ ಮೇಲೆ ಕಿಡಿ ಕಾರಿದ ಲಕ್ಷ್ಮಣ ಪಾತ್ರಧಾರಿ
ರಮಾನಂದ್ ಸಾಗರ್ ಅವರ 'ರಾಮಾಯಣ' ಚಿತ್ರದಲ್ಲಿ ಲಕ್ಷ್ಮಣನ ಪಾತ್ರ ನಿರ್ವಹಿಸಿದ ನಟ ಸುನಿಲ್ ಲಾಹಿರಿ, ಬಿಜೆಪಿಗೆ ಮತ ಹಾಕದ ಉತ್ತರ ಪ್ರದೇಶದ ಜನರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಡಿಯೊ ಸಂದೇಶದಲ್ಲಿ, ನಟ ತನ್ನ ಎನ್‌ಡಿಎ ಪಾಲುದಾರರೊಂದಿಗೆ ಬಿಜೆಪಿಯ ಸಮ್ಮಿಶ್ರ ಸರ್ಕಾರವು ತನ್ನ ಪೂರ್ಣಾವಧಿಯನ್ನು ತೊಂದರೆಗಳಿಲ್ಲದೆ ಪೂರ್ಣಗೊಳಿಸಬಹುದೇ ಎಂದು ಪ್ರಶ್ನಿಸಿದ್ದಾರೆ.

"ಚುನಾವಣಾ ಫಲಿತಾಂಶಗಳನ್ನು ನೋಡಿ ನನಗೆ ತುಂಬಾ ನಿರಾಸೆಯಾಗಿದೆ, ಮೊದಲನೆಯದಾಗಿ, ಮತದಾನವು ತುಂಬಾ ಕಡಿಮೆಯಾಗಿದೆ ಅದಕ್ಕೆ ಈ ರೀತಿ ಫಲಿತಾಂಶ ಬಂದಿದೆ, ನಾನು ನಿರಂತರವಾಗಿ ಜನರಿಗೆ ಮತ ನೀಡುವಂತೆ ಒತ್ತಾಯಿಸಿದ್ದೇನೆ ಆದರೆ ಯಾರೂ ಗಮನ ಹರಿಸಲಿಲ್ಲ. ಈಗ, ಸಮ್ಮಿಶ್ರ ಸರ್ಕಾರ ರಚನೆಯಾಗುತ್ತದೆ. ಆದರೆ ಈ ಸರ್ಕಾರ ಎಷ್ಟು ದಿನ ಇರುತ್ತದೆ, ಸರ್ಕಾರ ಸರಾಗವಾಗಿ ನಡೆಯಬಾರದ ಎಂದು ಕೇಳಿದ್ದಾರೆ.
ಅಯೋಧ್ಯೆ ಮತದಾರರ ವಿರುದ್ಧ ಟೀಕೆ
ಸುನಿಲ್ ಲಾಹಿರಿ ಅಯೋಧ್ಯೆಯ ಮತದಾರರನ್ನು ಟೀಕಿಸಿದ್ದಾರೆ. ಫೈಜಾಬಾದ್ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಕ್ಷಯ ಯಾದವ್ ಅವರು 89,000 ಮತಗಳಿಂದ ಬಿಜೆಪಿ ಅಭ್ಯರ್ಥಿ ವಿಶ್ವದೀಪ್ ಸಿಂಗ್ ಅವರನ್ನು ಸೋಲಿಸಿದರು.
ವನವಾಸದಿಂದ ಹಿಂದಿರುಗಿದ ನಂತರ ಅಯೋಧ್ಯೆಯ ನಿವಾಸಿಗಳು ಸೀತೆಯನ್ನೇ ಪ್ರಶ್ನಿಸಿದ್ದನ್ನು ನಾವು ಮರೆತಿದ್ದೇವೆ, ಅವರ ಮುಂದೆ ದೇವರೇ ಕಾಣಿಸಿಕೊಂಡರೂ, ಅವರು ಅವನನ್ನು ತಿರಸ್ಕರಿಸುತ್ತಾರೆ. ಅಯೋಧ್ಯೆ ಯಾವಾಗಲೂ ತನ್ನ ನಿಜವಾದ ರಾಜನಿಗೆ ದ್ರೋಹ ಬಗೆದಿದೆ ಎಂದು ಹೇಳಿದ್ದಾರೆ.
"ನಾನು ಅಯೋಧ್ಯೆ ನಿವಾಸಿಗಳ ಶ್ರೇಷ್ಠತೆಗೆ ನಮಸ್ಕರಿಸುತ್ತೇನೆ. ನೀವು ಮಾತೆ ಸೀತೆಯನ್ನು ಸಹ ಬಿಡಲಿಲ್ಲ, ಹಾಗಾದರೆ ರಾಮನನ್ನು ಗುಡಾರದಿಂದ ಹೊರತಂದು ಭವ್ಯವಾದ ದೇವಾಲಯದಲ್ಲಿ ಸಿಂಹಾಸನಾರೋಹಣ ಮಾಡಿದವರಿಗೆ ನೀವು ಹೇಗೆ ದ್ರೋಹ ಮಾಡಬಾರದು? ಭಾರತವು ನಿಮ್ಮನ್ನು ಎಂದಿಗೂ ದಯೆಯಿಂದ ನೋಡುವುದಿಲ್ಲ," ಎಂದು ಪೋಸ್ಟ್ ಮಾಡಲಾಗಿದೆ.
ಕಂಗನಾ ರಣಾವತ್ ಮತ್ತು ಅರುಣ್ ಗೋವಿಲ್ ಗೆಲುವು ಸಾಧಿಸಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications