ಪಾರ್ಲಿಮೆಂಟ್‌ನಲ್ಲಿ ಕಡಿಮೆ ಬೆಲೆಯ ಊಟಕ್ಕೆ ಬ್ರೇಕ್: 17 ಕೋಟಿ ಉಳಿತಾಯ
ನವದೆಹಲಿ, ಡಿಸೆಂಬರ್ 05: ಭಾರತದಲ್ಲಿ ಅತಿ ಕಡಿಮೆ ಹಣಕ್ಕೆ ಊಟ ದೊರೆಯುತ್ತಿದ್ದ ಸ್ಥಳ ಭಾರತ ಲೋಕಸಭೆ. ಆದರೆ ಇನ್ನು ಮುಂದೆ ಇಲ್ಲಿನ ಕ್ಯಾಂಟೀನ್‌ನಲ್ಲಿ ಕಡಿಮೆ ದರಕ್ಕೆ ಊಟ ದೊರಕುವುದಿಲ್ಲ.
ಹೌದು, ಲೋಕಸಭೆ ಕ್ಯಾಂಟೀನ್ ನಲ್ಲಿ ಸಬ್ಸಿಡಿ ದರದಲ್ಲಿ ಊಟ ಸಿಗುತ್ತಿದ್ದ ಕಾರಣ, ಅತ್ಯಂತ ಕಡಿಮೆ ದರಕ್ಕೆ ಇಲ್ಲಿ ಊಟ ದೊರಕುತ್ತಿತ್ತು. ಆದರೆ ಸಂಸದರೆಲ್ಲರೂ ಸೇರಿ ಸಬ್ಸಿಡಿಯನ್ನು ಬಿಟ್ಟುಕೊಟ್ಟಿದ್ದಾರೆ.
ಕ್ಯಾಂಟೀನ್ ಊಟದ ದರದ ಮೇಲೆ ಶೇ 80% ಸಬ್ಸಿಡಿ ದೊರಕುತ್ತಿತ್ತು. ಹಾಗಾಗಿ ಅತ್ಯಂತ ಕಡಿಮೆ ದರಕ್ಕೆ ಪಾರ್ಲಿಮೆಂಟ್‌ನಲ್ಲಿ ಊಟ ದೊರಕುತ್ತಿತ್ತು. ಎರಡು ರೂಪಾಯಿಗೆ ಚಪಾತಿ. ಏಳು ರೂಪಾಯಿಗೆ ಅನ್ನ-ಸಾರು. ಮೂವತ್ತು ರೂಪಾಯಿಗೆ ಹೈದರಾಬಾದ್ ಚಿಕನ್ ಹೀಗೆ ಹಲವು ರೀತಿಯ ಸಸ್ಯಹಾರ, ಮಾಂಸಾಹಾರ ಖಾದ್ಯಗಳು ಅತ್ಯಂತ ಕಡಿಮೆ ಬೆಲೆಗೆ ಸಂಸದರಿಗೆ ದೊರಕುತ್ತಿದ್ದವು.

ಆದರೆ ಇದಕ್ಕೆ ಬ್ರೇಕ್ ಬಿದ್ದಿದ್ದು, ಸಂಸದರೆಲ್ಲೂ ಪಕ್ಷಭೇದವಿಲ್ಲದೆ, ಸ್ವಯಂಪ್ರೇರಿತರಾಗಿ ಸಬ್ಸಿಡಿಯನ್ನು ಸರ್ಕಾರಕ್ಕೆ ಬಿಟ್ಟುಕೊಟ್ಟಿದ್ದಾರೆ. ಹಾಗಾಗಿ ಇನ್ನು ಮುಂದೆ ನ್ಯಾಯೋಚಿತ ದರಕ್ಕೆ ಖಾದ್ಯಗಳು ಪಾರ್ಲಿಮೆಂಟ್‌ನಲ್ಲಿ ದೊರಕಲಿವೆ.
ಸರ್ವ ಪಕ್ಷದ ಸದಸ್ಯರೂ ಇರುವ ಲೋಕಸಭೆ ವ್ಯವಹಾರ ಸಲಹಾ ಸಮಿತಿಯು ಸಭೆ ನಡೆಸಿ ಆಹಾರದ ಮೇಲೆ ಸಂಸದರಿಗೆ ಸಿಗುತ್ತಿರುವ ಸಬ್ಸಿಡಿ ಹಣವನ್ನು ತೆಗೆದುಹಾಕುವಂತೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದರು. ಅದರಂತೆ ಸಬ್ಸಿಡಿಯನ್ನು ತೆಗೆದು ಹಾಕಲಾಗಿದೆ. ಇದರಿಂದ 17 ಕೋಟಿ ರೂಪಾಯಿಗಳು ಪ್ರತಿವರ್ಷ ಸರ್ಕಾರಕ್ಕೆ ಉಳಿತಾಯವಾಗಲಿದೆ.
ಇನ್ನು ಮುಂದೆ ಸಂಸದರ ಕ್ಯಾಂಟೀನ್, ಲಾಭ-ನಷ್ಟವಿಲ್ಲದ ವ್ಯವಹಾರ ಮಾದರಿಯಲ್ಲಿ ಆಹಾರವನ್ನು ನೀಡಲಿದೆ. ವಸ್ತುಗಳ ಬೆಲೆ ಹೆಚ್ಚಿದಾಗ ಹೆಚ್ಚಿನ ಬೆಲೆಗೆ, ವಸ್ತುಗಳ ಬೆಲೆ ಇಳಿದಾಗ ಕಡಿಮೆ ಬೆಲೆಗೆ ಆಹಾರ ಒದಗಿಸಲಿದೆ.
-
ನಾವು ಸೇವಿಸುವ ಈ ಆಹಾರಗಳಲ್ಲಿ ಆಲ್ಕೋಹಾಲ್ ಇರುತ್ತದೆ.. ಇದು ನಿಮಗೆ ಗೊತ್ತಿರಲಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications