ಎಚ್ರಾ! ರೈಲ್ವೆ ಪ್ರಯಾಣ ರದ್ದಾದರೆ ರೀಫಂಡ್ ಮಾಡುವುದಿಲ್ಲ

ಬಲ್ಕ್ ಬುಕ್ಕಿಂಗ್ ಗೂ ಅದೇ ಗತಿ:
ಟಿಕೆಟ್ booking ಮಾಡಿಸಿರುವವರು ಪ್ರಯಾಣ ರದ್ದು ಮಾಡಿದ್ದೇವೆ. ಟಿಕೆಟ್ ದರವನ್ನು refund ಮಾಡಿ ಅನ್ನುವ ಹಾಗಿಲ್ಲ. ಇನ್ನು, ತಂಡೋಪಾದಿಯಾಗಿ ಅಂದರೆ ಹೆಚ್ಚು ಜನ ರೈಲ್ವೆ ಪ್ರಯಾಣಕ್ಕಾಗಿ booking ಮಾಡಿಸಿ, ಕೊನೆ ಘಳಿಗೆಯಲ್ಲಿ ಕಾರಣ ಏನೇ ಇದ್ದರೂ ಪ್ರಯಾಣ ರದ್ದು ಪಡಿಸಿದ್ದೇ ಆದರೆ ಅಂತಹವರಿಗೂ refund ದಕ್ಕುವುದಿಲ್ಲ.
ಸಾರ್ವಜನಿಕ ಕಾಯ್ದಿರಿಸುವಿಕೆ ವ್ಯವಸ್ಥೆಯಡಿ ಟಿಕೆಟ್ ರದ್ದುಪಡಿಸಿದ ಸಂದರ್ಭದಲ್ಲಿ refund ಮಾಡುವ ಸಂಬಂಧ ಇಲಾಖೆಯು ತನ್ನ ಯೋಜನೆಯಲ್ಲಿ ಫೆಬ್ರವರಿ 21ರಂದು ಈ ಮಾರ್ಪಾಡು ತಂದುಕೊಂಡಿದೆ.
ಇದು reserved ಮತ್ತು RAC ticketಗೆ ಮಾತ್ರ ಅನ್ವಯ:
ಆದರೆ ಕೆಳ ವರ್ಗದ ಸಾಮಾನ್ಯ ಪ್ರಯಾಣ, ಕೋಚ್ ಗಳಲ್ಲಿ ಎಸಿ ಇಲ್ಲದೆ ಪ್ರಯಾಣ ರದ್ದಾದಾಗ, ಟ್ರೈನ್ ಸೇವೆಗಳು ಲಭ್ಯವಾಗದೆ ಪ್ರಯಾಣಿಕರು ತಮ್ಮ ಪ್ರವಾಸವನ್ನು ರದ್ದುಪಡಿಸಿದರೆ, ಅಥವಾ ಟ್ರೈನ್ ಸೇವೆಯೇ ರದ್ದಾದರೆ ಅಂತಹ ಸಂದರ್ಭಗಳಲ್ಲಿ ಮಾತ್ರ ಇಲಾಖೆಯೇ ಮುತುವರ್ಜಿ ವಹಿಸಿ, ತನ್ನಿಂದಾದ ತಪ್ಪಿಗೆ refund ಮಾಡುತ್ತದೆ.
ಅದೇ wait listed ticket ಗೆ refund ಇರುವುದಿಲ್ಲ. ಈ ಸಂಬಂಧ ರೈಲ್ವೆಯ ಕಂಪ್ಯೂಟರುಗಳಲ್ಲಿಯೂ ಮಾರ್ಪಾಡು ತರಲಾಗುತ್ತಿದೆ.
ಈ ಹಿಂದಿನ ವ್ಯವಸ್ಥೆಯಲ್ಲಿ ಪ್ರಯಾಣ ಆರಂಭವಾದ 2 ಗಂಟೆಗಳೊಳಗಾಗಿ ಪ್ರಯಾಣ ರದ್ದುಪಡಿಸಿ, refundಗೆ ಅರ್ಜಿ ತುಂಬಿಸಿದರೆ ಒಂದಷ್ಟು ಶುಲ್ಕ ಹಿಡಿದುಕೊಂಡು ಉಳಿದ ಹಣವನ್ನು ಇಲಾಖೆ ವಾಪಸ್ ಮಾಡುತ್ತಿತ್ತು. ಆದರೆ ಇನ್ಮುಂದೆ ಹಾಗಿಲ್ಲ.












Click it and Unblock the Notifications