ಪರಮಾಣು ದಾಳಿ ಬಗ್ಗೆ ಪಾಕಿಸ್ತಾನ ಯೋಚಿಸಿರಲಿಲ್ಲ; ಸಂಸತ್‌ಗೆ ವಿಕ್ರಮ್ ಮಿಶ್ರಿ ಮಾಹಿತಿ
ಪಹಲ್ಗಾಮ್ ಉಗ್ರರ ದಾಳಿ ಬಳಿಕ ಭಾರತ ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಭಾರತ ಆಪರೇಷನ್ ಸಿಂಧೂರ ಹೆಸರಿನ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ 9 ಭಯೋತ್ಪಾದಕ ತರಬೇತಿ ಕೇಂದ್ರಗಳನ್ನು ಧ್ವಂಸಗೊಳಿಸಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದ ಭಾರತದ ಮೇಲೆ ಡ್ರೋನ್, ಕ್ಷಿಪಣಿ ದಾಳಿಗೆ ಪ್ರಯತ್ನಿಸಿತ್ತು. ಈ ನಡುವೆ ಪಾಕಿಸ್ತಾನ ಪರಮಾಣು ದಾಳಿಗೆ ಯೋಚಿಸಿತ್ತಾ ಎನ್ನುವ ಪ್ರಶ್ನೆಗಳಿಗೆ ಭಾರತ ಉತ್ತರ ನೀಡಿದೆ.
ಪಾಕಿಸ್ತಾನದೊಂದಿಗಿನ ಮಿಲಿಟರಿ ಸಂಘರ್ಷದ ಸಮಯದಲ್ಲಿ ಪಾಕ್ ಸರ್ಕಾರ ಯಾವುದೇ ಪರಮಾಣು ದಾಳಿ ಬಗ್ಗೆ ಸೂಚನೆ ಇರಲಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸೋಮವಾರ ಸಂಜೆ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ. ಪಾಕಿಸ್ತಾನದ HQ-9 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಒಳಗೊಂಡಂತೆ ಚೀನಾ ನಿರ್ಮಿತ ಶಸ್ತ್ರಾಸ್ತ್ರಗಳ ಬಳಕೆಯು ಅಪ್ರಸ್ತುತವಾಗಿದೆ, ನಾವು ಪಾಕಿಸ್ತಾನದ ವಾಯುನೆಲೆಗಳನ್ನು ಹೊಡೆದುರುಳಿಸಿದ್ದೇವೆ ಎಂದು ಮಿಶ್ರಿ ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿಗೆ ತಿಳಿಸಿದರು.

ರಾಷ್ಟ್ರೀಯ ಭದ್ರತಾ ನಿರ್ಬಂಧಗಳ ಕಾರಣ ನೀಡಿದ ಅವರು, ಪಾಕಿಸ್ತಾನದ ವಾಯು ರಕ್ಷಣಾ ಪಡೆಗಳು ಹೊಡೆದುರುಳಿಸಿರಬಹುದಾದ ಯಾವುದೇ ಭಾರತೀಯ ಯುದ್ಧ ವಿಮಾನಗಳ ಮಾಹಿತಿ ನೀಡಲು ನಿರಾಕರಿಸಿದರು. ಕನಿಷ್ಠ ಮೂರು ರಫೇಲ್‌ಗಳು ಸೇರಿದಂತೆ ಐದು ಭಾರತೀಯ ಜೆಟ್‌ಗಳನ್ನು ಪಾಕಿಸ್ತಾನ ಹೊಡೆದುರುಳಿಸಿದೆ ಎಂದು ಹಲವು ವರದಿಗಳಿದ್ದರೂ ಭಾರತ ಸರ್ಕಾರ ಅದನ್ನು ನಿರಾಕರಿಸಿತ್ತು.
ಪರಮಾಣು ಬಾಂಬ್‌ಗಳನ್ನು ಉದ್ದೇಶಪೂರ್ವಕವಾಗಿ ಅಥವಾ ಅಜಾಗರೂಕತೆಯಿಂದ ಬಳಕೆ ಮಾಡಬಹುದು ಎನ್ನುವ ಆತಂಕವನ್ನು ಸೃಷ್ಟಿಸಲಾಗಿತ್ತು. ಭಾರತವನ್ನು ಆಕ್ರಮಣಕಾರಿ ಎಂದು ಬಿಂಬಿಲಸು ಮತ್ತು ಭಾರತೀಯ ಸಶಸ್ತ್ರ ಪಡೆಗಳನ್ನು ಶರಣಾಗುವಂತೆ 'ಬ್ಲ್ಯಾಕ್‌ಮೇಲ್' ಮಾಡಲು ಪಾಕಿಸ್ತಾನವು ಪರಮಾಣು ಅಸ್ತ್ರಗಳ ಬಳಕೆ ಬಗ್ಗೆ ವದಂತಿಗಳನ್ನು ಹಬ್ಬಿಸಿತು. ಆದರೆ, ಪ್ರಧಾನಿ ನರೇಂದ್ರ ಮೋದಿ ಇದನ್ನು ತಳ್ಳಿಹಾಕಿದರು.
ಭಾರತವು ಪಾಕಿಸ್ತಾನದ ಪರಮಾಣು ಬೆದರಿಕೆಗೆ ಹೆದರುವುದಿಲ್ಲ ಎಂದು ಹೇಳಿದರು. ಭಯೋತ್ಪಾದನೆಗೆ ಬೆಂಬಲ ನೀಡುವ, ತರಬೇತಿನೀಡುವ ಸುರಕ್ಷಿತ ತಾಣಗಳ ಮೇಲೆ ನಿಖರವಾದ ದಾಳಿಯನ್ನು ನಡೆಸಲಾಗುತ್ತದೆ ಎಂದು ಮೋದಿ ಘೋಷಿಸಿದರು.
ಭಾರತೀಯ ವಾಯುಪಡೆಯು ಪಾಕಿಸ್ತಾನದ ಕಿರಾನಾ ಬೆಟ್ಟಗಳ ದಾಳಿ ನಡೆಸಿದೆ ಎಂಬ ವದಂತಿಗಳನ್ನು ಈ ಹಿಂದೆ ತಳ್ಳಿಹಾಕಿತ್ತ. ಆ ಸ್ಥಳದಲ್ಲಿ ಆ ದೇಶದ ಪರಮಾಣು ಸೌಲಭ್ಯವಿದೆ ಎಂದು ವರದಿಯಾಗಿದೆ. ಹಾಸ್ಯಮಯವಾಗಿ ಹೇಳುವುದಾದರೆ, ಏರ್ ಮಾರ್ಷಲ್ ಎ.ಕೆ. ಭಾರ್ತಿ ಅವರು ಕಿರಾನಾ ಬೆಟ್ಟಗಳ ಬಗ್ಗೆನಮಗೆ ಗೊತ್ತಿಲ್ಲ ಎಂದು ಹೇಳಿದರು.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತದ ಮಿಲಿಟರಿ ಪ್ರತಿಕ್ರಿಯೆ - ಆಪರೇಷನ್ ಸಿಂಧೂರ್ ಬಗ್ಗೆ ನೀಡಿದ ವಿವರಣೆಯಲ್ಲಿ ಮೇ 12 ರ ಕದನ ವಿರಾಮದಲ್ಲಿ ಅಮೆರಿಕಕ್ಕೆ ಯಾವುದೇ ಪಾತ್ರವಿಲ್ಲ ಎಂದು ಮಿಶ್ರಿ ಹೇಳಿದರು.












Click it and Unblock the Notifications