ಸೆ.30ರ ತನಕ ರೈಲು ಸಂಚಾರ ರದ್ದು; ಬೋರ್ಡ್ ಸ್ಪಷ್ಟನೆ
ನವದೆಹಲಿ, ಆಗಸ್ಟ್ 10 : ಪ್ರಯಾಣಿಕ ರೈಲುಗಳ ಸೇವೆ ಆರಂಭಿಸುವ, ರದ್ದುಗೊಳಿಸುವ ಕುರಿತು ಯಾವುದೇ ಹೊಸ ಸುತ್ತೋಲೆಯನ್ನು ಹೊರಡಿಸಿಲ್ಲ ಎಂದು ರೈಲ್ವೆ ಬೋರ್ಡ್ ಸ್ಪಷ್ಟನೆ ನೀಡಿದೆ.
ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ಎಕ್ಸ್‌ಪ್ರೆಸ್/ ಪ್ಯಾಸೆಂಜರ್/ ಸಬ್ ಅರ್ಬನ್ ರೈಲುಗಳ ಸಂಚಾರವನ್ನು ಸೆಪ್ಟೆಂಬರ್ 30ರ ತನಕ ರದ್ದುಗೊಳಿಸಲಾಗಿದೆ ಎಂಬುದು ಸುದ್ದಿ.
ರೈಲಿನ ಕಥೆ ಹೇಳಲಿದೆ ಹುಬ್ಬಳ್ಳಿಯ ಪಾರಂಪರಿಕ ರೈಲು ವಸ್ತು ಸಂಗ್ರಹಾಲಯ
ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ವೈರಲ್ ಆದ ಹಿನ್ನಲೆಯಲ್ಲಿ ರೈಲ್ವೆ ಬೋರ್ಡ್ ಸ್ಪಷ್ಟನೆಯನ್ನು ನೀಡಿದೆ. ರೈಲುಗಳ ಸಂಚಾರ ಆರಂಭಿಸುವ, ರದ್ದುಗೊಳಿಸುವ ಕುರಿತು ಯಾವುದೇ ಹೊಸ ಸುತ್ತೋಲೆ ಹೊರಡಿಸಿಲ್ಲ ಎಂದು ಬೋರ್ಡ್ ಹೇಳಿದೆ.
ಕರ್ನಾಟಕದಿಂದ 12 ಖಾಸಗಿ ರೈಲು ಸಂಚಾರ; ಮಾರ್ಗಗಳು
ಮೇ 11ರಂದು ಹೊರಡಿಸಿರುವ ಆದೇಶದಂತೆಯೇ ಪ್ಯಾಸೆಂಜರ್, ವಿಶೇಷ ರೈಲುಗಳು ಸಂಚಾರ ನಡೆಸಲಿವೆ. ಮುಂಬೈ ನಗರದಲ್ಲಿ ಅಗತ್ಯ ಸೇವೆಗಳನ್ನು ಒದಗಿಸಲು ಹಲವು ವಿಶೇಷ ರೈಲುಗಳು ಸಂಚಾರ ನಡೆಸಲಿವೆ ಎಂದು ರೈಲ್ವೆ ಬೋರ್ಡ್ ಸ್ಪಷ್ಟಪಡಿಸಿದೆ.
2023ರೊಳಗೆ ಖಾಸಗಿ ರೈಲು ಪ್ರಾರಂಭಿಸಲಿರುವ ಭಾರತೀಯ ರೈಲ್ವೆ: 2027ರ ವೇಳೆಗೆ 151 ರೈಲುಗಳು
ಪ್ರಸ್ತುತ ಸಂಚಾರ ನಡೆಸುತ್ತಿರುವ ರೈಲುಗಳ ಸಂಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಹೊಸ ರೈಲುಗಳ ಸಂಚಾರದ ಬಗ್ಗೆ ಇನ್ನೂ ಅಧಿಕೃತ ಆದೇಶವನ್ನು ಹೊರಡಿಸಿಲ್ಲ ಎಂದು ರೈಲ್ವೆ ಬೋರ್ಡ್ ತಿಳಿಸಿದೆ.
62,064 ಹೊಸ ಕೊರೊನಾ ವೈರಸ್ ಸೋಂಕಿನ ಹೊಸ ಪ್ರಕರಣಗಳು ಸೋಮವಾರ ದೇಶದಲ್ಲಿ ಪತ್ತೆಯಾಗಿವೆ. ದೇಶದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 22 ಲಕ್ಷ ದಾಟಿದೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 44,386ಕ್ಕೆ ಏರಿಕೆಯಾಗಿದೆ.