Get Updates
Get notified of breaking news, exclusive insights, and must-see stories!

ಉದ್ಯೋಗಿಗಳು ಜೀನ್ಸ್, ಟೀ ಶರ್ಟ್ ಧರಿಸುವಂತಿಲ್ಲ, ಗಡ್ಡ ಬೆಳೆಸುವಂತಿಲ್ಲ: ಸಿಬಿಐ

ನವದೆಹಲಿ, ಜೂ. 04: ಕೇಂದ್ರಿಯ ತನಿಖಾ ದಳ (ಸಿಬಿಐ) ಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಹೊಸ ವಸ್ತ್ರ ಸಂಹಿತೆ ಜಾರಿಗೆ ತರಲಾಗಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಚೇರಿಗೆ ಬರುವ ಸಂದರ್ಭದಲ್ಲಿ ಜೀನ್ಸ್, ಟೀ ಶರ್ಟ್, ಸ್ಪೋರ್ಟ್ಸ್ ಶೂಗಳಂಥ ಯಾವುದೇ ಉಡುಪುಗಳನ್ನು ಧರಿಸುವಂತಿಲ್ಲ. ಹಾಗೆಯೇ ಗಡ್ಡ ಬೆಳೆಸುವಂತಿಲ್ಲ ಎಂದು ಸಿಬಿಐನ ನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್ ಸೂಚನೆ ನೀಡಿದ್ದಾರೆ.

ಆದೇಶದ ಪ್ರಕಾರ, ಪುರುಷರು ಶರ್ಟ್, ಫಾರ್ಮಲ್ ಪ್ಯಾಂಟ್ ಮತ್ತು ಫಾರ್ಮಲ್ ಶೂಗಳನ್ನು ಧರಿಸಿ, ಗಡ್ಡವನ್ನು ಸಂಪೂರ್ಣವಾಗಿ ತೆಗೆದು ಕಚೇರಿಗೆ ಬರಬೇಕಾಗಿದೆ. ಸಿಬಿಐನ ಮಹಿಳಾ ಉದ್ಯೋಗಿಗಳು ಸೀರೆ, ಸೂಟ್, ಫಾರ್ಮಲ್ ಶರ್ಟ್ ಮತ್ತು ಪ್ಯಾಂಟ್ ಮಾತ್ರ ಧರಿಸಲು ಅವಕಾಶ ನೀಡಲಾಗಿದೆ ಎಂದು ವರದಿಯಾಗಿದೆ.

"ಯಾವುದೇ ಜೀನ್ಸ್, ಟೀ ಶರ್ಟ್, ಸ್ಪೋರ್ಟ್ಸ್ ಶೂಗಳು, ಚಪ್ಪಲಿಗಳನ್ನು ಧರಿಸಿ ಕಚೇರಿಗೆ ಬರಲು ಅನುಮತಿ ನೀಡಲಾಗುವುದಿಲ್ಲ ಎಂದು ಕೂಡಾ ಆದೇಶದಲ್ಲಿ ತಿಳಿಸಲಾಗಿದೆ.

No Jeans, T-shirts & Beard: New Director orders to CBI Employees

ದೇಶಾದ್ಯಂತ ಸಿಬಿಐ ಕಚೇರಿಗಳಿಗೆ ಈ ನಿಯಮ ಅನ್ವಯಿಸಲಿದ್ದು, ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆಯೆ ನೋಡಿಕೊಳ್ಳುವಂತೆ ಎಂದು ಶಾಖೆಗಳ ಮುಖ್ಯಸ್ಥರಿಗೆ ಆದೇಶದಲ್ಲಿ ಸೂಚಿಸಲಾಗಿದೆ.

ಇನ್ನು ಈ ಬಗ್ಗೆ ಮಾತನಾಡಿದ ಸಿಬಿಐ ಅಧಿಕಾರಿಗಳು, ಇದು ಸಮತೋಲಿತ ಆದೇಶ. ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿ ಯಾವಾಗಲೂ ಔಪಚಾರಿಕ ಉಡುಗೆ ಧರಿಸಲು ಪ್ರಾರಂಭಿಸಬೇಕು. ವರ್ಷಗಳಿಂದ ಅನೇಕ ಮಂದಿ ಜೀನ್ಸ್ ಮತ್ತು ಟೀ ಶರ್ಟ್‌ ಸೇರಿದಂತೆ ಸಾಮಾನ್ಯ ಉಡುಗೆಗಳನ್ನು ಧರಿಸಲು ಪ್ರಾರಂಭಿಸಿದರು. ಯಾರೂ ಅದನ್ನು ಪ್ರಶ್ನಿಸಿಲ್ಲ, ಕಚೇರಿಗೆ ಆ ರೀತಿ ಬರದಂತೆ ಹೇಳಿಲ್ಲ. ಸಿಬಿಐ ಅಧಿಕಾರಿಗಳು ಕನಿಷ್ಠ ಔಪಚಾರಿಕ ಕಾಲರ್‌ ಹೊಂದಿರುವ ಶರ್ಟ್, ಪ್ಯಾಂಟ್‌ ಹಾಗೂ ಬೂಟುಗಳನ್ನು ಧರಿಸಬೇಕು ಎಂದು ಹೇಳಿದ್ದಾರೆ.

ಜೈಸ್ವಾಲ್ ಕಳೆದ ವಾರ ಸಿಬಿಐನ 33 ನೇ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದು ಸಿಬಿಐನ ದಕ್ಷತೆಯನ್ನು ಸುಧಾರಿಸಲು ಇನ್ನಷ್ಟು ಪ್ರಮುಖ ಆಡಳಿತಾತ್ಮಕ ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

(ಒನ್ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+