Get Updates
Get notified of breaking news, exclusive insights, and must-see stories!

2003ರ ಬಳಿಕ ಮೊದಲ ಬಾರಿಗೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ!

ನವದೆಹಲಿ, ಜುಲೈ 18 : ಲೋಕಸಭೆಯಲ್ಲಿ ಶುಕ್ರವಾರ ಕೇಂದ್ರ ಎನ್‌ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಲಿದೆ. ಲೋಕಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟ ಸಾಕಷ್ಟು ಸದಸ್ಯ ಬಲ ಹೊಂದಿದ್ದು, ಸರ್ಕಾರ ಪತನಗೊಳ್ಳುವ ಯಾವುದೇ ಆತಂಕವಿಲ್ಲ.

ಬುಧವಾರ ಟಿಡಿಪಿ ಸಂಸದ ಕೆ.ಶ್ರೀನಿವಾಸ್ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಿದರು. ಸ್ಪೀಕರ್ ಸುಮಿತ್ರಾ ಮಹಾಜನ್ ಇದನ್ನು ಅಂಗೀಕರಿಸಿದರು. ಜು.20ರ ಶುಕ್ರವಾರ ಲೋಕಸಭೆಯಲ್ಲಿ ನಿರ್ಣಯ ಮಂಡಿಸಲು ಅವಕಾಶ ಮಾಡಿಕೊಡುವುದಾಗಿ ಹೇಳಿದರು.

ಇಂದಿನ ಕಲಾಪದಲ್ಲಿ ಕೆ.ಶ್ರೀನಿವಾಸ್ ಮಂಡಿಸಿದ ನಿರ್ಣಯಕ್ಕೆ 50ಕ್ಕೂ ಹೆಚ್ಚು ಸಂಸದರು ಬೆಂಬಲ ನೀಡಿದರು. ನಿಯಮದಂತೆ ಲೋಕಸಭೆ ಸ್ಪೀಕರ್ 10 ದಿನದ ಒಳಗಾಗಿ ಕಲಾಪದಲ್ಲಿ ನಿರ್ಣಯ ಮಂಡನೆ ಮಾಡಲು ಅವಕಾಶ ನೀಡಬೇಕು. ಶುಕ್ರವಾರಕ್ಕೆ ಸ್ಪೀಕರ್ ದಿನಾಂಕ ನಿಗದಿ ಮಾಡಿದ್ದಾರೆ.

ಬಿಜೆಪಿ ಎಲ್ಲಾ ಸಂಸದರಿಗೆ ವಿಪ್ ಜಾರಿ ಮಾಡಿದೆ. ಶುಕ್ರವಾರದ ಕಲಾಪದಲ್ಲಿ ಎಲ್ಲರೂ ಹಾಜರಿರಬೇಕು ಎಂದು ಸೂಚನೆ ನೀಡಿದೆ. ಬಿಜೆಪಿ 273 ಸದಸ್ಯ ಬಲವನ್ನು ಲೋಕಸಭೆಯಲ್ಲಿ ಹೊಂದಿದೆ. 2003ರ ಬಳಿಕ ಮೊದಲ ಬಾರಿಗೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಒಪ್ಪಿಗೆ ಸಿಕ್ಕಿದೆ.

ಲೋಕಸಭೆಯಲ್ಲಿ ಸಮ್ಮತಿ

ಲೋಕಸಭೆಯಲ್ಲಿ ಸಮ್ಮತಿ

ಬುಧವಾರ ಲೋಕಸಭೆಯ ಮಳೆಗಾಲದ ಅಧಿವೇಶನ ಆರಂಭವಾಯಿತು. ಟಿಡಿಪಿ ಸಂಸದ ಕೆ.ಶ್ರೀನಿವಾಸ್ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಿದರು. ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ನಿರ್ಣಯ ಅಂಗೀಕರಿಸಿದರು. ಶುಕ್ರವಾರ ಈ ನಿರ್ಣಯದ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಯಲಿದೆ.

2003ರ ಬಳಿಕ ಮೊದಲ ಬಾರಿಗೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಸ್ಪೀಕರ್ ಒಪ್ಪಿಗೆ ನೀಡಿದ್ದಾರೆ. ಶುಕ್ರವಾರ ಲೋಕಸಭೆಯಲ್ಲಿ ಏನಾಗಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಅಟಲ್ ಸರ್ಕಾರದ ವಿರುದ್ಧ ಅವಿಶ್ವಾಸ

ಅಟಲ್ ಸರ್ಕಾರದ ವಿರುದ್ಧ ಅವಿಶ್ವಾಸ

2003ಕ್ಕೂ ಮೊದಲು ಕಾಂಗ್ರೆಸ್ ಮಿತ್ರ ಪಕ್ಷಗಳ ನೆರವಿನಿಂದ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿತ್ತು. ಜಾರ್ಜ್‌ ಫರ್ನಾಂಡೀಸ್ ಅವರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಂಡ ಬಳಿಕ ನಿರ್ಣಯ ಮಂಡನೆ ಮಾಡಲಾಗಿತ್ತು.

ಸರ್ಕಾರದ ಪರವಾಗಿ 312 ಮತ, ವಿರುದ್ಧವಾಗಿ 186 ಮತಗಳು ಬಂದಿದ್ದವು. ಎನ್‌ಡಿಎ ಸರ್ಕಾರ ವಿಶ್ವಾಸ ಮತ ಗೆದ್ದಿತ್ತು. ಈ ಮೂಲಕ ಕಾಂಗ್ರೆಸ್‌ಯೇತರ ಸರ್ಕಾರ ಲೋಕಸಭೆಯಲ್ಲಿ ವಿಶ್ವಾಸ ಮತ ಗೆದ್ದಂತಾಗಿತ್ತು.

ಭಾರತ-ಅಮೆರಿಕಾ ಪರಮಾಣು ಒಪ್ಪಂದ

ಭಾರತ-ಅಮೆರಿಕಾ ಪರಮಾಣು ಒಪ್ಪಂದ

2008ರಲ್ಲಿ ಭಾರತ ಅಮೆರಿಕಾ ಪರಮಾಣು ಒಪ್ಪಂದ ನಡೆದ ಸಮಯದಲ್ಲಿ ಹಲವು ಮಿತ್ರ ಪಕ್ಷಗಳು ಯುಪಿಎ ಮೈತ್ರಿಕೂಟವನ್ನು ಬಿಟ್ಟು ಹೋದವು. ಆಗ ಕಾಂಗ್ರೆಸ್ ನೇತೃತ್ವದ ಯುಪಿಎ ಲೋಕಸಭೆಯಲ್ಲಿ ಬಲಾಬಲ ಹೇಗಿದೆ? ಎಂಬ ಪರೀಕ್ಷೆ ಎದುರಿಸಿತು.

ಬಿಜೆಪಿಯಿಂದ ವಿಪ್ ಜಾರಿ

ಬಿಜೆಪಿಯಿಂದ ವಿಪ್ ಜಾರಿ

ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಶುಕ್ರವಾರ ಅವಿಶ್ವಾಸ ನಿರ್ಣಯದ ಚರ್ಚೆಗೆ ಅವಕಾಶ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಬಿಜೆಪಿ ಪಕ್ಷದ ಎಲ್ಲಾ ಸಂಸದರಿಗೆ ಶುಕ್ರವಾರ ಕಲಾಪಕ್ಕೆ ಹಾಜರಾಗಬೇಕು ಎಂದು ವಿಪ್ ಜಾರಿ ಮಾಡಿದೆ. ಮಿತ್ರಪಕ್ಷಗಳಿಗೂ ವಿಪ್ ಜಾರಿಗೊಳಿಸುವಂತೆ ಸೂಚನೆ ನೀಡಿದೆ.

2019ರ ಲೋಕಸಭೆ ಚುನಾವಣೆ ಎದುರಾಗಿರುವಾಗ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಆದರೆ, ಎನ್‌ಡಿಎ ಸರ್ಕಾರ ಅಗತ್ಯದಷ್ಟು ಬಹುಮತ ಹೊಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+