ಬೆಳ್ಳಂಬೆಳಗ್ಗೆ ಸನ್ನಿ ಕಾಂಡೋಮ್ ಆಡ್ ಗೆ ಕತ್ತರಿ ಹಾಕಿದ ಸ್ಮೃತಿ
Recommended Video

ನವದೆಹಲಿ, ಡಿಸೆಂಬರ್ 12: ನಟಿ ಸನ್ನಿ ಲಿಯೋನ್ ಮಾಡೆಲ್ ಆಗಿರುವ ಕಾಂಡೋಮ್ ಜಾಹೀರಾತಿನಲ್ಲಿ ನವರಾತ್ರಿಯ ಬಗ್ಗೆ ಉಲ್ಲೇಖ ಇದ್ದಿದ್ದೆ ಬಂತು, ಕಾಂಡೋಮ್ ಜಾಹೀರಾತು ಪ್ರಸಾರಕ್ಕೆ ಮಾಹಿತಿ ಹಾಗೂ ಪ್ರಸಾರ ಸಚಿವೆ ಸ್ಮೃತಿ ಇರಾನಿ ಅವರು ಕಡಿವಾಣ ಹಾಕಿಬಿಟ್ಟರು.
ಟಿವಿ ಚಾನೆಲ್‌ಗಳಲ್ಲಿ ಇನ್ಮುಂದೆ ಬೆಳಗ್ಗೆ 6 ರಿಂದ ರಾತ್ರಿ 10 ವರೆಗೆ ಕಾಂಡೋಮ್ ಜಾಹೀರಾತುಗಳನ್ನು ಪ್ರಸಾರ ಮಾಡುವಂತಿಲ್ಲ ಎಂದು ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ಮಾಧ್ಯಮ ಸಂಸ್ಥೆಗಳಿಗೆ ನಿರ್ದೇಶಿಸಿದೆ.
ಇಂಥ ಜಾಹೀರಾತು ಪ್ರಸಾರ ಮಾಡುವುದರಿಂದ ಸಮಾಜದ ಸ್ವಾಸ್ಥ್ಯ ಕೆಡುತ್ತದೆ, ಕಾಂಡೋಮ್ ಜಾಹೀರಾತುಗಳು ಅಶ್ಲೀಲವಾಗಿರುತ್ತವೆ ಹಾಗೂ ಮಕ್ಕಳಿಗೆ ಅಸಹ್ಯವಾಗಿವೆ ಹಾಗೂ ಪ್ರೈಮ್ ಅವಧಿಯಲ್ಲಿ ಇದು ನೋಡಲು ಸೂಕ್ತವಲ್ಲ ಎಂಬ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಸಚಿವಾಲಯ ಈ ಕ್ರಮ ಕೈಗೊಂಡಿದೆ.

ಕೇಬಲ್ ಟಿವಿ ಜಾಲ ನಿಯಮಾವಳಿ-1994ರ ಅನ್ವಯ ಟಿವಿ ಚಾನೆಲ್‌ಗಳು ವಿವಿಧ ಗರ್ಭನಿರೋಧಕ ಬ್ರಾಂಡ್‌ಗಳ ಜಾಹೀರಾತು ಪ್ರಸಾರ ಮಾಡುವುದಕ್ಕೆ ನಿರ್ಬಂಧವಿದೆ. ಅಶ್ಲೀಲ ಚಿತ್ರ, ವಿಡಿಯೋ ಪ್ರಸಾರಕ್ಕೂ ನಿಯಮಾವಳಿಗಳಿವೆ. ಪ್ರೇಕ್ಷಕರು ಕೂಡಾ ತಮ್ಮ ಅಭಿಪ್ರಾಯವನ್ನು ತಿಳಿಸುವ ವ್ಯವಸ್ಥೆಯೂ ಇದೆ.
ಇಂಥ ಜಾಹೀರಾತುಗಳನ್ನು ರಾತ್ರಿ 11ರಿಂದ ಮುಂಜಾನೆ 5ರ ಮಧ್ಯೆ ಮಾತ್ರ ಪ್ರಸಾರ ಮಾಡುವಂತೆ ನಿರ್ಬಂಧ ವಿಧಿಸುವ ಬಗ್ಗೆ ಭಾರತದ ಜಾಹೀರಾತು ಗುಣಮಟ್ಟ ಮಂಡಳಿ (ಎಎಸ್‌ಸಿಐ) ಕೇಂದ್ರವು ಸಚಿವಾಲಯದ ಸಲಹೆ ಕೋರಿತ್ತು. ಎಎಸ್‌ಸಿಐ ಜಾಹೀರಾತು ನಿರ್ಬಂಧಿಸುವ ಅಧಿಕಾರ ಹೊಂದಿರುವುದಿಲ್ಲ.
ಸಲಹೆಯನ್ನು ಮನ್ನಿಸಿದ ಸಚಿವಾಲಯ, ಎರಡು ಗಂಟೆಗಳ ಸಡಿಲಿಕೆ ನೀಡಿ ರಾತ್ರಿ 10ರಿಂದ ಮುಂಜಾನೆ 6ರವರೆಗೆ ಇದರ ಪ್ರಸಾರಕ್ಕೆ ಅನುಮತಿ ನೀಡಿದೆ.












Click it and Unblock the Notifications