ಬಿಹಾರದಲ್ಲಿ ಮಹಾಮೈತ್ರಿಕೂಟ ಪರ್ವ ಆರಂಭ
ಪಾಟ್ನಾ, ನ.20: ಬಿಹಾರದಲ್ಲಿ ಮಹಾಮೈತ್ರಿಕೂಟ ಪರ್ವ ಆರಂಭಗೊಂಡಿದೆ. ನಿತೀಶ್ ಕುಮಾರ್ ಅವರು ಐದನೇ ಬಾರಿಗೆ ಸಿಎಂ ಪಟ್ಟ ಅಲಂಕರಿಸಿದ್ದಾರೆ. ಸತ್ಯ, ಧರ್ಮ, ನಿಷ್ಠೆಯಿಂದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುವುದಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಇಬ್ಬರು ಮಕ್ಕಳು ಮಹಾಮೈತ್ರಿಕೂಟದ ನಾಯಕ ನಿತೀಶ್ ಕುಮಾರ್ ಅವರ ಸಂಪುಟ ಸೇರಿದ್ದಾರೆ. ತೇಜಸ್ವಿ ಯಾದವ್ ಮತ್ತು ತೇಜ್ ಪ್ರತಾಪ್ ಯಾದವ್ ಅವರು ಶುಕ್ರವಾರ ಮಧ್ಯಾಹ್ನ ನಿತೀಶ್ ಸಂಪುಟ ಸೇರಿಕೊಂಡಿದ್ದಾರೆ.ನಿತೀಶ್ ಕುಮಾರ್ ಅವರ ಸಂಪುಟಕ್ಕೆ ಆರ್ ಜೆ ಡಿ ಹಾಗೂ ಜೆಡಿಯು ಕಡೆಯಿಂದ ತಲಾ 12 ಸಚಿವರು ಹಾಗೂ ಕಾಂಗ್ರೆಸ್ಸಿನಿಂದ ನಾಲ್ವರು ಸಂಪುಟ ಸೇರಿದ್ದಾರೆ.

ಮಂಜು ವರ್ಮ, ಮದನ್ ಸಹ್ನಿ, ಶೈಲೇಶ್ ಕುಮಾರ್ ಹಾಗೂ ಕಪಿಲ್ ದೇವ್ ಕಾಮತ್ ಅವರು ಸಚಿವ ಸ್ಥಾನ ಪಡೆದುಕೊಳ್ಳುತ್ತಿದ್ದಾರೆ. ಬಿಜೇಂದ್ರ ಪ್ರಸಾದ್ ಯಾದವ್, ಶ್ರವಣ್ ಕುಮಾರ್, ರಾಜೀವ್ ರಂಜನ್ ಸಿಂಗ್ ಲಲ್ಲನ್, ಜಯ್ ಕುಮಾರ್ ಸಿಂಗ್ ಅವರು ಸ್ಥಾನ ಉಳಿಸಿಕೊಂಡಿದ್ದಾರೆ.
ಆರ್ ಜೆ ಡಿಯಿಂದ 12 ಜನ ಸ್ಥಾನವನ್ನು ತೇಜಸ್ವಿ ಯಾದವ್ ಹಾಗೂ ಅವರ ಸೋದರ ತೇಜ್ ಪ್ರತಾಪ್ ಯಾದವ್, ಅಬ್ದುಲ್ ಬಾರಿ ಸಿದ್ದಿಕಿ, ಅಬ್ದುಲ್ ಗಫೂರ್, ವಿಜಯ್ ಪ್ರಕಾಶ್, ಚಂದ್ರಿಕಾ ರಾಯ್, ಮುಂದ್ರಿಕಾ ಸಿಂಗ್ ಯಾದವ್, ಸಂತೋಷ್ ನಿರಾಳ, ರಾಮ್ ವಿಚಾರ್ ರಾಯ್ ಹಾಗೂ ಶೆಯೋ ರಾಮ್.
Nitish Kumar sworn in as Chief Minister of Bihar pic.twitter.com/v33VBHJxB6
— ANI (@ANI_news) November 20, 2015 ಕಾಂಗ್ರೆಸ್ ನಿಂದ ಅಶೋಕ್ ಚೌಧರಿ, ಮದನ ಮೋಹನ್ ಝಾ, ಅಬ್ದುಲ್ ಜಲೀಲ್ ಮಸ್ತಾನ್, ಅವದೇಶ್ ಕುಮಾರ್ ಸಿಂಗ್ ಸೇರ್ಪಡೆಗೊಂಡಿದ್ದಾರೆ.
Nitish Kumar and Lalu Yadav at Gandhi Maidan in Patna. pic.twitter.com/dv1as9rGTM
— ANI (@ANI_news) November 20, 2015 ಗಣ್ಯಾತಿಗಣ್ಯರ ಉಪಸ್ಥಿತಿ: ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ, ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಹಿಮಾಚಲ ಪ್ರದೇಶ ಸಿಎಂ ವೀರಭದ್ರ ಸಿಂಗ್ ಅವರು ಅವರು ಗಾಂಧಿ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಉಪಸ್ಥಿತರಿದ್ದರು.












Click it and Unblock the Notifications