ಸಿಂಪಲ್ ನಿರ್ಮಲಾ ಸೀತಾರಾಮನ್‌ಗೆ ಮತ್ತೊಮ್ಮೆ ಕೇಂದ್ರ ಸಚಿವ ಸ್ಥಾನ
ಹಲವು ಪ್ರಥಮಗಳಿಗೆ ತಮ್ಮ ಹೆಸರನ್ನು ನಮೂದಿಸಿರುವ ಬಿಜೆಪಿ ಹಿರಿಯ ನಾಯಕಿ ನಿರ್ಮಲಾ ಸಿತಾರಾಮನ್. ಈಗ ಮೂರನೇ ಅವಧಿಯ ಮೋದಿ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಹಲವು ಸಚಿವ ಸ್ಥಾನಗಳನ್ನು ನಿಭಾಯಿಸಿ ಸೈ ಎನಿಸಿಕೊಂಡಿರುವ ಇವರು, ಯಾವುದೇ ಸವಾಲಿನ ಕೆಲಸಕ್ಕೂ ಸಿದ್ಧ. ಇವರಿಗೂ ಹಾಗೂ ಕರ್ನಾಟಕಕ್ಕೂ ಅವಿನಾಭಾವ ಸಂಭಂಧ ಇದೆ.
ಅಂದಹಾಗೆ ನಿರ್ಮಲಾ ಸಿತಾರಮನ್ ಅವರು ಆಂಧ್ರದ ಮೂಲದವರು. ಆದರೆ ಅವರು ರಾಜ್ಯಸಭೆಗೆ ಕರ್ನಾಟಕದಿಂದಲೇ ಆಯ್ಕೆ ಆಗಿದ್ದಾರೆ. ಇಲ್ಲಿಯೇ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇದ್ದು, ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಅವರು ಬೆಂಗಳೂರಿನಲ್ಲಿ ಮತ ಚಲಾಯಿಸಿದ್ದನ್ನು ಕಂಡಿದ್ದೀರಾ.

ಖಡಕ್ ಉತ್ತರ
ನಿರ್ಮಲಾ ಖಡಕ್ ಉತ್ತರ ಹಾಗೂ ಸದನದಲ್ಲಿ ಯಾವಾಗಲೂ ಕ್ರಿಯಾಶೀಲರಾಗಿರುವ ಇವರ ಸ್ವಭಾವ ಎಲ್ಲರೂ ಇವರತ್ತ ಒಮ್ಮೆ ನೋಡುವಂತೆ ಮಾಡುತ್ತದೆ. ವಿರೋಧ ಪಕ್ಷದವರು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಂದಾಗ, ಡಿಫೆಂಡ್ ಮಾಡಿಕೊಳ್ಳುವಲ್ಲಿ ಇವರು ಸಹ ಪ್ರಥಮರು. ಇವರ ಅಂಕಿ ಅಂಶಗಳ ಮೂಲಕವೇ ತಮ್ಮ ಉತ್ತರವನ್ನು ನೀಡುತ್ತಾರೆ.
ನಿರ್ಮಲಾ ಸೀತಾರಾಮನ್ ಬಿಜೆಪಿ ಪಕ್ಷಕ್ಕೆ ಸೇರಿದ ಕೆಲವೇ ವರ್ಷಗಳಲ್ಲಿ ಇವರಲ್ಲಿರುವ ಟ್ಯಾಲೆಂಟ್ ಗುರುತಿಸಿದ ಬಿಜೆಪಿ, ಇವರಿಗೆ ಹಂತ ಹಂತವಾಗಿ ಸ್ಥಾನವನ್ನು ನೀಡುತ್ತಾ ಬಂದಿತು. ಪಕ್ಷ ತಮ್ಮ ಮೇಲೆ ನಂಬಿಕೆ ಇಟ್ಟು ನೀಡಿದ ಪ್ರತಿ ಸವಾಲನ್ನು ಶ್ರದ್ಧೆ ಹಾಗೂ ಚಾಣಕ್ಯ ತನದಿಂದ ಮುಗಿಸಿದ ನಿರ್ಮಾಲಾ ಸೀತಾರಾಮನ್, ದೊಡ್ಡ ಹುದ್ದೆಯ ಮೇಲೆ ಅದಾಗಲೇ ಕಣ್ಣು ನೆಟ್ಟಿದ್ದರು.
ರಾಜ್ಯ ಖಾತೆ, ರಕ್ಷಣಾ ಸಚಿವೆ
2014ರಲ್ಲಿ ಮೋದಿ ಸರ್ಕಾರ ಮೊದಲ ಬಾರಿಗೆ ಗದ್ದುಗೆ ಏರಿದಾಗ ಇವರಿಗೆ ರಾಜ್ಯ ಖಾತೆಯ ಸಚಿವರನ್ನಾಗಿ ಮಾಡಲಾಯಿತು. ಇವರ ಕೆಲಸ ನೋಡಿದ ಬಿಜೆಪಿ ವರಿಷ್ಠರು ಇವರಿಗೆ 2017ರಲ್ಲಿ ಬಡ್ತಿ ನೀಡಿದರು. ಅಲ್ಲದೆ ರಕ್ಷಣಾ ಇಲಾಖೆಯ ಕೆಲಸವನ್ನು ಇವರ ಹೆಗಲಿಗೆ ಹೊರಿಸಿದರು. ಈ ಮೂಲಕ ಈ ಖಾತೆಯನ್ನು ನಿರ್ವಹಿಸಿದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾದರು. ಇದಕ್ಕೂ ಮೊದಲು ಇಂದಿರಾ ಗಾಂಧಿ ಈ ಖಾತೆಯನ್ನು ನಿರ್ವಹಿಸಿದ್ದರು.

ಹಣಕಾಸು ಸಚಿವೆ
2019ರಲ್ಲಿ ಮೋದಿ ಎರಡನೇ ಬಾರಿಗೆ ಪ್ರಧಾನಿ ಆದಾಗ ಇವರಿಗೆ ಹಣಕಾಸು ಇಲಾಖೆಯ ಜವಾಬ್ದಾರಿಯನ್ನು ನೀಡಲಾಯಿತು. ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ಬಳಸಿಕೊಂಡ ನಿರ್ಮಾಲಾ ಸೀತಾರಾಮನ್, ಎಲ್ಲರ ಗಮನ ಸೆಳೆದರು. ಅಲ್ಲದೆ ಐದು ಬಾರಿ ಬಜೆಟ್ ಮಂಡಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಈಗ ಮೂರನೇ ಬಾರಿಗೆ ಮೋದಿ ಸರ್ಕಾರದಲ್ಲೂ ಸಚಿವೆ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.
ಆಂಧ್ರಪ್ರದೇಶದಿಂದ ನಿರ್ಮಲಾ ಸೀತರಾಮನ್ 2014 ರಿಂದ 2016ರ ವರೆಗೆ ಪ್ರತಿನಿಧಿಸಿದ್ದರು. ಆ ಬಳಿಕ ನಿರ್ಮಲಾ ಸೀತಾರಾಮನ್ 2016ರಿಂದ ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆ ಆಗುತ್ತಿದ್ದಾರೆ.
ಸೀತಾರಾಮನ್ ಅವರ ಕಿರು ಪರಿಚಯ
ನಿರ್ಮಲಾ ಸೀತಾರಾಮನ್ ಅವರು 18 ಆಗಸ್ಟ್ 1959 ರಂದು ಮಧುರೈನಲ್ಲಿ ಜನಿಸಿದರು. ಅವರ ತಂದೆ ನಾರಾಯಣನ್ ಸೀತಾರಾಮನ್ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದರು. ತಾಯಿ ಸಾವಿತ್ರಿ ಗೃಹಿಣಿ. ನಿರ್ಮಲಾ ಸೀತಾರಾಮನ್ ಅವರ ಆರಂಭಿಕ ಶಿಕ್ಷಣವು ಮಧುರೈನಲ್ಲಿ ಪೂರ್ಣಗೊಂಡಿತು. ನಂತರ ತಿರುಚಿರಾಪಳ್ಳಿಯ ಸೀತಾಲಕ್ಷ್ಮಿ ರಾಮಸ್ವಾಮಿ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ಸೀತಾರಾಮನ್ ಅವರು ದೆಹಲಿಯ ಜವಾಹರ್ ನೆಹರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಎಂಎ ಮತ್ತು ಎಂಫಿಲ್ ಮಾಡಿದರು. ಸೀತಾರಾಮನ್ ಅವರ ಪತಿ ಪರ್ಕಲ್ ಪ್ರಭಾಕರ್ ಕೂಡ ಜೆಎನ್‌ಯು ಮೂಲದವರು. ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಅಧ್ಯಯನ ಮಾಡಿದರು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications