ನಿಕ್ಕಿ ಯಾದವ್ ಹತ್ಯೆ ಪ್ರಕರಣ: ಮತ್ತೊಂದು ಕೊಲೆ ಆರೋಪದಲ್ಲಿ ಸಾಹಿಲ್ ತಂದೆ ಅರೆಸ್ಟ್!

ದೆಹಲಿ ನಿಕ್ಕಿ ಯಾದವ್ ಹತ್ಯೆ ಪ್ರಕರಣದಲ್ಲಿ ಲಿವ್‌-ಇನ್‌ ಸಂಗಾತಿ ಸಾಹಿಲ್ ತಂದೆ ಆರೋಪಿಯಾಗಿದ್ದು ಈತನನ್ನು ಈ ಹಿಂದೆ ಕೊಲೆ ಆರೋಪದಲ್ಲಿ ಬಂಧಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹೊಸದಿಲ್ಲಿ ಫೆಬ್ರವರಿ 20: ಶ್ರದ್ಧಾ ವಾಕರ್ ಪ್ರಕರಣದಂತೆ ದೆಹಲಿಯಲ್ಲಿ ನಡೆದ ನಿಕ್ಕಿ ಯಾದವ್ ಪ್ರಕರಣದಲ್ಲೂ ಹಲವಾರು ವಿಷಯಗಳು ವಿಚಾರಣೆಯಿಂದ ಹೊರಬರುತ್ತಿವೆ. ಲಿವ್-ಇನ್ ಸಂಗಾತಿಯಾದ ನಿಕ್ಕಿ ಯಾದವ್ ಸಾಹಿಲ್ ಗೆಹ್ಲೋಟ್ ಎಂಬಾತನಿಂದ ಹತ್ಯೆಗೊಳಗಾಗಿ ಮೃತದೇಹವನ್ನು ಫ್ರಿಡ್ಜ್ನಲ್ಲಿ ಇಡಲಾಗಿತ್ತು. ಈ ಹತ್ಯೆಯ ಹಿಂದೆ ಸಾಹಿಲ್ ತಂದೆಯ ಕೈವಾಡವಿರುವುದು ಬೆಳಕಿಗೆ ಬಂದಿದ್ದು, ಈ ಹಿಂದೆಯೂ ಸಾಹಿಲ್ ತಂದೆ ಕೊಲೆ ಆರೋಪಿಯಾಗಿರುವುದು ತಿಳಿದು ಬಂದಿದೆ. ಹೀಗಾಗಿ ಅವರನ್ನು ಬಂಧಿಸಲಾಗಿದೆ.

ಅಪರಾಧದ ಬಗ್ಗೆ ತನಿಖೆ ಮಾಡಲು ಪೊಲೀಸರು ಸಾಹಿಲ್ ಗೆಹ್ಲೋಟ್ ಮತ್ತು ಅವರ ತಂದೆ ವೀರೇಂದ್ರರನ್ನು ಧಾಬಾಕ್ಕೆ ಕರೆದೊಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶುಕ್ರವಾರ ಪೊಲೀಸರು ವೀರೇಂದ್ರ, ಸಾಹಿಲ್‌ನ ಇಬ್ಬರು ಸೋದರ ಸಂಬಂಧಿಗಳಾದ ಆಶಿಶ್ ಮತ್ತು ನವೀನ್ ಮತ್ತು ಇಬ್ಬರು ಸ್ನೇಹಿತರಾದ ಅಮರ್ ಮತ್ತು ಲೋಕೇಶ್ ಅವರನ್ನು ಡ್ಯೂಟಿ ಮ್ಯಾಜಿಸ್ಟ್ರೇಟ್ ನಿವಾಸಕ್ಕೆ ಹಾಜರುಪಡಿಸಿದರು.

ಸಾಹಿಲ್ ಮತ್ತು ನಿಕ್ಕಿ ಮೂರು ವರ್ಷಗಳ ಹಿಂದೆ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ನಿಕ್ಕಿ ತನ್ನ ಕುಟುಂಬವನ್ನು ಮದುವೆಗೆ ಆಹ್ವಾನಿಸಿದ್ದರು. ಆದರೆ ಜಾತಿ ಭೇದದ ಕಾರಣ ಅವರು ಮದುವೆಗೆ ಒಪ್ಪಿಗೆ ನೀಡಲಿಲ್ಲ. ಇದೇ ಸೇಡಿನಿಂದ ಸದ್ಯ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಈ ಹಿಂದೆ ಕೊಲೆ ಆರೋಪ ಹೊತ್ತಿದ್ದ ಸಾಹಿಲ್ ತಂದೆ

ಈ ಹಿಂದೆ ಕೊಲೆ ಆರೋಪ ಹೊತ್ತಿದ್ದ ಸಾಹಿಲ್ ತಂದೆ

ಹೀಗಾಗಿ ಸಾಹಿಲ್‌ನ ತಂದೆ, ಸೋದರ ಸಂಬಂಧಿಗಳು ಮತ್ತು ಇಬ್ಬರು ಸ್ನೇಹಿತರ ಭಾಗಿಯಾಗಿರುವ ಶಂಕೆಯಿಂದ ಪೊಲೀಸರು ಅವರನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. ಅವರ ಬಂಧನದ ಒಂದು ದಿನದ ನಂತರ, ಪೊಲೀಸರು ಅವರನ್ನು ಧಾಬಾಕ್ಕೆ ಕರೆದೊಯ್ದರು, ಅಲ್ಲಿ ಸಾಹಿಲ್ ನಿಕ್ಕಿಯ ದೇಹವನ್ನು ಫ್ರಿಡ್ಜ್‌ನಲ್ಲಿ ತುಂಬಿರುವುದಾಗಿ ಒಪ್ಪಿಕೊಂಡಿದ್ದಾರೆ.

ಪೊಲೀಸರ ಪ್ರಕಾರ, ನಿಕ್ಕಿ ಮತ್ತು ಸಾಹಿಲ್ ಅವರು ಗ್ರೇಟರ್ ನೋಯ್ಡಾದಲ್ಲಿ ವಾಸಿಸುತ್ತಿದ್ದಾಗ 2020 ರಲ್ಲಿ ವಿವಾಹವಾದರು. ಇದಕ್ಕಾಗಿಯೇ ಪೊಲೀಸರು ಸಾಹಿಲ್‌ನನ್ನು ಅವರು ವಾಸಿಸುತ್ತಿದ್ದ ನೋಯ್ಡಾದ ಮನೆಗೆ ಕರೆದೊಯ್ದರು. ನೆರೆಹೊರೆಯವರನ್ನೂ ವಿಚಾರಣೆ ನಡೆಸಲಾಯಿತು. ಇದುವರೆಗಿನ ತನಿಖೆಯಿಂದ ನಿಕ್ಕಿಯ ಕುಟುಂಬ ಸದಸ್ಯರಿಗೆ ಆಕೆಯ ಮದುವೆಯ ಬಗ್ಗೆ ತಿಳಿದಿತ್ತು, ಆದರೂ ಅವರು ಅದನ್ನು ಮೊದಲಿನಿಂದಲೂ ನಿರಾಕರಿಸಿದ್ದಾರೆ.

ಕೊಲೆ ಸಂಚಿನ ಬಗ್ಗೆ ವಿಚಾರಣೆ

ಕೊಲೆ ಸಂಚಿನ ಬಗ್ಗೆ ವಿಚಾರಣೆ

ಪೊಲೀಸರು ಆರೋಪಿಗಳ ಫೋನ್ ಲಾಗ್‌ಗಳು ಮತ್ತು ಡೇಟಾವನ್ನು ಪರಿಶೀಲಿಸುತ್ತಿದ್ದು, ಸಂಚಿನಲ್ಲಿ ಯಾರು ಭಾಗಿಯಾಗಿದ್ದಾರೆ ಮತ್ತು ಅವರು ಕೊಲೆಗೆ ಹೇಗೆ ಯೋಜಿಸಿದ್ದಾರೆ ಎಂಬುದನ್ನು ಕಂಡುಹಿಡಿಯಲು ಪೊಲೀಸರು ಪ್ರಸ್ತುತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ವಾರ ಸಾಹಿಲ್ ಗೆಹ್ಲೋಟ್ ಅವರನ್ನು ಬಂಧಿಸಿ ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು.

ಬೇರೊಂದು ಮಹಿಳೆಯೊಂದಿಗೆ ಸಾಹಿಲ್ ವಿವಾಹ

ಬೇರೊಂದು ಮಹಿಳೆಯೊಂದಿಗೆ ಸಾಹಿಲ್ ವಿವಾಹ

ನಿಕ್ಕಿಗೆ ಸಾಹಿಲ್ ಬೇರೊಂದು ಮಹಿಳೆಯೊಂದಿಗೆ ವಿವಾಹ ನಡೆಯುವ ಬಗ್ಗೆ ತಿಳಿದಿರಲಿಲ್ಲ. ಆರೋಪಿಯು ಫೆಬ್ರವರಿ 9 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದನು. ಫೆಬ್ರವರಿ 10ಕ್ಕೆ ಆತನ ಮದುವೆ ಎಂದು ನಿಕ್ಕಿಗೆ ತಿಳಿಯಿತು. ಹೀಗಾಗಿ ನಿಕ್ಕಿ ಸಾಹಿಲ್ ಮದುವೆಗೆ ನಿರಾಕರಿಸಿದ್ದಾಳೆ. ರಾತ್ರಿಯಿಡಿ ನಿಕ್ಕಿ ಹಾಗೂ ಸಾಃಇಲ್ ನಡುವೆ ಮದುವೆ ವಿಚಾರವಾಗಿ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ಸಾಹಿಲ್ ನಿಕ್ಕಿಯನ್ನು ಚಾರ್ಜ್‌ ಕೇಬಲ್‌ನಿಂದ ಕತ್ತು ಹಿಸುಕಿ ಕೊಂದಿದ್ದಾನೆ. ಬಳಿಕ ನಿಕ್ಕಿ ದೇಹವನ್ನು ತನ್ನ ಕುಟುಂಬ ಒಡೆತನದ ಫ್ರಡ್ಜ್‌ನಲ್ಲಿ ಇರಿಸಿ ಮದುವೆಗೆ ಮನೆಗೆ ತೆರಳಿ ಮದುವೆ ಕೂಡ ಮಾಡಿಕೊಂಡಿದ್ದಾನೆ. ಕಳೆದ ಮಂಗಳವಾರ ಸಾಹಿಲ್ ನನ್ನು ಬಂಧಿಸಲಾಗಿದೆ. ಸಾಹಿಲ್ ಹತ್ಯೆ ವಿಚಾರ ತಿಳಿದು ನವ ವಿವಾಹಿತೆ ತವರು ಮನೆ ಸೇರಿದ್ದಾಳೆ.

ಚುರುಕುಕೊಂಡ ಪೊಲೀಸ್ ತನಿಖೆ

ಚುರುಕುಕೊಂಡ ಪೊಲೀಸ್ ತನಿಖೆ

ಸಾಹಿಲ್ ವಿಚಾರಣೆ ಬಳಿಕ ನಿಕ್ಕಿ ಹತ್ಯೆಯಲ್ಲಿ ಸಾಹಿಲ್ ತಂದೆ ಹಾಗೂ ಕುಟುಂಬಸ್ಥರು ಭಾಗಿಯಾಗಿರುವ ವಿಚಾರ ತಿಳಿದುಬಂದಿದೆ. ಮಾತ್ರವಲ್ಲದೆ ಸಾಹಿಲ್ ಗೆಹ್ಲೋಟ್ ಅವರ ತಂದೆ ವೀರೇಂದ್ರ ಈ ಹಿಂದೆ ಕೊಲೆ ಆರೋಪವನ್ನೂ ಹೊತ್ತಿದ್ದಾರೆಂದು ತಿಳಿದುಬಂದಿದೆ. ಹೀಗಾಗಿ ಹತ್ಯೆಯ ಸಂಚಿನಲ್ಲಿ ಸಾಹಿಲ್‌ನ ಕುಟುಂಬಸ್ಥರು ಭಾಗಿಯಾಗಿರುವುದು ಸ್ಪಷ್ಟವಾಗಿದ್ದು ಪೊಲೀಸರು ಮತ್ತಷ್ಟು ವಿಚಾರಣೆ ಚುರುಕುಗೊಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+