ಭಟ್ಕಳದ ಶಫಿ ಅರ್ಮರ್ ಹತ್ಯೆ : ಎನ್‌ಐಎಗೆ ಖಚಿತ ಮಾಹಿತಿ ಸಿಕ್ಕಿಲ್ಲ

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಏಪ್ರಿಲ್ 26 : ಐಎಸ್‌ಐಎಸ್ ಉಗ್ರ ಸಂಘಟನೆಯಲ್ಲಿದ್ದ ಭಟ್ಕಳ ಮೂಲದ ಶಫಿ ಅರ್ಮರ್ ಸಾವಿನ ಬಗ್ಗೆ ಎನ್‌ಐಎ ಖಚಿತವಾದ ಮಾಹಿತಿಯನ್ನು ನಿರೀಕ್ಷಿಸುತ್ತಿದೆ. ಸಿರಿಯಾದ ಮೇಲೆ ನಡೆದ ವಾಯು ದಾಳಿಯಲ್ಲಿ ಅರ್ಮರ್ ಮೃತಪಟ್ಟಿದ್ದಾನೆ ಎಂಬ ಸುದ್ದಿ ಸೋಮವಾರ ಬಹಿರಂಗವಾಗಿದೆ.

ಸೋಮವಾರ ಕೇಂದ್ರ ಗುಪ್ತಚರ ಇಲಾಖೆಗೆ ಶಫಿ ಅರ್ಮರ್ ಮೃತಪಟ್ಟ ಬಗ್ಗೆ ಮಾಹಿತಿ ಬಂದಿದೆ. ಆದರೆ, ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಈ ಮಾಹಿತಿಯನ್ನು ಖಚಿತಪಡಿಸಿಕೊಳ್ಳಲು ಮುಂದಾಗಿದೆ. ಶಫಿ ಅರ್ಮರ್ ಎಲ್ಲಿ ನೆಲೆಸಿದ್ದ ಎಂಬ ಬಗ್ಗೆ ಇನ್ನೂ ಖಚಿತವಾದ ಮಾಹಿತಿ ಲಭ್ಯವಾಗಿಲ್ಲ. [ಭಟ್ಕಳ ಮೂಲದ ಶಫಿ ಅರ್ಮರ್ ಹತ್ಯೆ?]

shafi armar

ದೇಶದ ಹಲವು ನಗರಗಳಲ್ಲಿ ಐಎಸ್‌ಐಎಸ್ ಉಗ್ರರನ್ನು ಬಂಧಿಸಿರುವ ರಾಷ್ಟ್ರೀಯ ತನಿಖಾ ದಳ ಅವರಿಂದ ಮಾಹಿತಿ ಸಂಗ್ರಹಣೆ ಮಾಡಿದಾಗಲೂ ಶಫಿ ಅರ್ಮರ್ ಎಲ್ಲಿ ನೆಲೆಸಿದ್ದ? ಎಂಬ ಮಾಹಿತಿ ಸಿಕ್ಕಿರಲಿಲ್ಲ. ಅಬುದಾಬಿ ಅಥವ ಸಿರಿಯಾದಲ್ಲಿ ಆತ ನೆಲೆಸಿರಬಹುದು ಎಂದು ಶಂಕಿಸಲಾಗಿತ್ತು. [ಭಟ್ಕಳದ ಅಹಮದ್ ಗೆ ISIS ನಂಟಿಲ್ಲ]

ಶಫಿ ಅರ್ಮರ್ ವಾಯುದಾಳಿಯಲ್ಲಿ ಮೃತಪಟ್ಟಿದ್ದಾನೆ ಎಂದು ಮೊದಲು ಮಾಹಿತಿ ನೀಡಿದ್ದು ಅಮೆರಿಕ. ಎನ್‌ಐಎಗೆ ಬೇಕಾಗಿರುವ ಉಗ್ರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಅರ್ಮರ್‌ ಸಾವಿನ ಬಗ್ಗೆ ನಿಖರವಾದ ಮಾಹಿತಿಗಾಗಿ ಎನ್‌ಐಎ ಕಾಯುತ್ತಿದೆ. [ಯಾಸಿನ್ ಭಟ್ಕಳ್ ಪರಾರಿಗೆ ಸಂಚು ರೂಪಿಸಿದ್ದ ವಿದ್ಯಾರ್ಥಿ]

ತಮ್ಮ ಸಂಘಟನೆಯ ಪ್ರಮುಖ ವ್ಯಕ್ತಿಗಳು ಮೃತಪಟ್ಟಾಗ ಐಎಸ್‌ಐಎಸ್ ಅವರ ಸಾಮಾಜಿಕ ಜಾಲ ತಾಣದಲ್ಲಿ ಅಂತಿಮ ನಮನ ಸಲ್ಲಿಸುತ್ತದೆ. ಹಿಂದೆ ಸುಲ್ತಾನ್ ಅರ್ಮರ್ ಸತ್ತಾಗ, ಸಾಮಾಜಿಕ ಜಾಲ ತಾಣದಲ್ಲಿ ನಮನ ಸಲ್ಲಿಸಲಾಗಿತ್ತು. ಆದರೆ, ಈಗ ಶಫಿ ಅರ್ಮರ್ ಸಾವಿನ ಬಗ್ಗೆ ಯಾವುದೇ ಮಾಹಿತಿಯನ್ನು ಹಾಕಿಲ್ಲ.

ಐಎಸ್‌ಐಎಸ್ ಉಗ್ರ ಸಂಘಟನೆಗೆ ಭಾರತೀಯರನ್ನು ನೇಮಕ ಮಾಡಲು ಸುಲ್ತಾನ್ ಅರ್ಮರ್ ಅನ್ಸರ್-ಉತ್-ತಾಹಿದ್ ಸಂಘಟನೆ ಸ್ಥಾಪಿಸಿದ್ದ. ಆತನ ಸಾವಿನ ಬಗ್ಗೆ ಐದು ಬಾರಿ ಮಾಹಿತಿ ಪಡೆದ ಬಳಿಕ, ಮೃತಪಟ್ಟಿದ್ದಾನೆ ಎಂದು ಘೋಷಣೆ ಮಾಡಲಾಗಿತ್ತು.

ಆದ್ದರಿಂದ, ಶಫಿ ಅರ್ಮರ್ ಸಾವಿನ ವಿಚಾರವನ್ನು ಎನ್‌ಐಎ ಖಚಿತಪಡಿಸಿಕೊಳ್ಳುತ್ತಿದೆ. ಭಾರತದಲ್ಲಿ ಉಗ್ರರ ನೇಮಕಾತಿ, ಹಣ ವರ್ಗಾವಣೆ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಶಫಿ ಅರ್ಮರ್‌ ರಾಷ್ಟ್ರೀಯ ತನಿಖಾ ದಳಕ್ಕೆ ಬೇಕಾಗಿದ್ದಾನೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The National Investigation Agency is yet to get a confirmation on the death of Shafi Armar, an alleged recruiter for the ISIS in India. Intelligence Bureau reports suggested that Armar may have died in an air strike in Syria.
Please Wait while comments are loading...