ಗುಂಡಿಟ್ಟು ಪಠಾಣ್‌ಕೋಟ್ ತನಿಖಾಧಿಕಾರಿ ಹತ್ಯೆ
ಬಿಜ್ನೋರ್, ಏಪ್ರಿಲ್, 03: ಉತ್ತರ ಪ್ರದೇಶದ ಬಿಜ್ನೋರ್ ನಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಶನಿವಾರ ರಾತ್ರಿ ಮನೆಗೆ ಮರಳುತ್ತಿದ್ದ ಅಧಿಕಾರಿ ತಂಜಿಲ್ ಅಹಮದ್ ಅವರನ್ನು ಹತ್ಯೆ ಮಾಡಲಾಗಿದೆ. ಕಾರ್ಯಕ್ರಮವೊಂದನ್ನು ಮುಗಿಸಿ ಅಹಮದ್ ತಮ್ಮ ಹೆಂಡತಿ ಮತ್ತು ಮಕ್ಕಳೊಂದಿಗೆ ಮನೆಗೆ ವಾಪಸಾಗುತ್ತಿದ್ದ ವೇಳೆ ದುಷ್ಕರ್ಮಿಗಳ ಗುಂಡೆಟಿಗೆ ಬಲಿಯಾಗಿದ್ದಾರೆ.[ಪಠಾಣ್ ಕೋಟ್ ದಾಳಿ : ತನಿಖೆಗೆ ಬಂತು ಪಾಕ್ ತಂಡ]

ಪಠಾಣ್ ಕೋಟ್ ದಾಳಿಯ ತನಿಖಾ ತಂಡದಲ್ಲಿ ಇದ್ದ ಅಧಿಕಾರಿ ಗುಂಡೆಟಿಗೆ ಬಲಿಯಾಗಿರುವುದು ಆತಂಕ ಸೃಷ್ಟಿಸಿದೆ. ಅಹಮದ್ ಹೆಂಡತಿ ಮತ್ತು ಮಕ್ಕಳಿಗೂ ಗಂಭೀರ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.[ಪಠಾಣ್ ಕೋಟ್ ಉಗ್ರರ ದಾಳಿ ಟೈಮ್ ಲೈನ್]
ಯಾವ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂಬ ಸಂಗತಿ ಬಹಿರಂಗವಾಗಿಲ್ಲ. ಸ್ಥಳೀಯ ಇಸ್ಲಾಮಿಕ್ ಸಂಘಟನೆ ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ. ಸಿಮಿ ಸಂಘಟನೆ ಈ ಹತ್ಯೆಯ ಹಿಂದೆ ಇರಬಹುದು ಎಂದು ಹೇಳಲಾಗಿದೆ.












Click it and Unblock the Notifications