ಉಗ್ರ ಸಂಘಟನೆಗೆ ರಹಸ್ಯ ಮಾಹಿತಿ ಸೋರಿಕೆ ಆರೋಪದ ಮೇಲೆ ಐಪಿಎಸ್ ಅಧಿಕಾರಿ ಬಂಧನ

ನವದೆಹಲಿ, ಫೆಬ್ರವರಿ 19: ಪಾಕಿಸ್ತಾನದ ಉಗ್ರ ಸಂಘಟನೆ ಲಷ್ಕರ್-ಇ-ತೊಯ್ಬಾಗೆ ರಹಸ್ಯ ದಾಖಲೆ ನೀಡಿದ ಆರೋಪದಡಿ ಐಪಿಎಸ್ ಅಧಿಕಾರಿ ಅರವಿಂದ್ ದಿಗ್ವಿಜಯ್ ನೇಗಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಬಂಧಿಸಿದೆ.

ಅರವಿಂದ್ ನೇಗಿ ಈ ಹಿಂದೆ ಎನ್‍ಐಎ ತನಿಖಾಧಿಕಾರಿಯಾಗಿದ್ದಾಗ ಲಷ್ಕರ್-ಇ-ತೊಯ್ಬಾಗೆ ಕೆಲವು ರಹಸ್ಯ ಮಾಹಿತಿಗಳನ್ನು ನೀಡಿದ್ದರು ಎಂಬ ಆರೋಪವಿದೆ. ಅಲ್ಲದೇ ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿದ್ದರು ಎಂಬ ಅಂಶ ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಎನ್‍ಐಎ ಮೂಲಗಳಿಂದ ವರದಿಯಾಗಿದೆ.

ನೇಗಿ 2007ರಲ್ಲಿ ಅಜ್ಮೀರ್ ದರ್ಗಾ ಸ್ಫೋಟ ಸೇರಿದಂತೆ ಹಲವು ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಯಾಗಿದ್ದರು. ಇದೀಗ ಉಗ್ರರಿಗೆ ರಹಸ್ಯ ಮಾಹಿತಿ ನೀಡಿದ ಆರೋಪದಡಿ ಎನ್‍ಐಎ ಐಪಿಸಿ ಸೆಕ್ಷನ್ 120ಬಿ (ಕ್ರಿಮಿನಲ್ ಪಿತೂರಿ) 121 (ಸರ್ಕಾರದ ವಿರುದ್ಧ ನಡೆ) 17 (ಭಯೋತ್ಪಾದಕ ಕೃತ್ಯಕ್ಕೆ ನಿಧಿ ಸಂಗ್ರಹ) ಸೆಕ್ಷನ್ ಅಡಿ ಎನ್‍ಐಎ ಬಂಧನ ಮಾಡಿದೆ.

NIA Arrested IPS Officer AD Negi On Alleges of Leaking Classified Information to Terrorist Organization

2017ರಲ್ಲಿ ಅರವಿಂದ್ ನೇಗಿ ಅವರು ಪ್ರತಿಭಾನ್ವಿತ ಸೇವೆಗಾಗಿ ಪೊಲೀಸ್ ಪದಕವನ್ನು ಪಡೆದ ಅಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ. ಹಿಮಾಚಲ ಪ್ರದೇಶ ಕೇಡರ್ ಅಧಿಕಾರಿಯಾಗಿದ್ದ ನೇಗಿ, 2016ರಲ್ಲಿ ಐಪಿಎಸ್‌ಗೆ ಬಡ್ತಿ ಪಡೆದಿದ್ದರು.

ಸೂಕ್ಷ್ಮ ಪ್ರಕರಣಗಳನ್ನು ನಿಭಾಯಿಸಿದ್ದರು
ಎನ್‌ಐಎಯ ಅಧಿಕಾರಾವಧಿಯಲ್ಲಿ ನೇಗಿ ಅವರು ಕಾಶ್ಮೀರದಲ್ಲಿ ಹುರಿಯತ್ ನಾಯಕರಿಗೆ ಆಪಾದಿತ ಹಣದ ತನಿಖೆ ಮತ್ತು ಇತರ ಕಾರ್ಯಕರ್ತ ವಾಹಿದ್ ಪರ್ರಾ ಅವರ ಬಂಧನ ಸೇರಿದಂತೆ ಅನೇಕ ಸೂಕ್ಷ್ಮ ತನಿಖೆಗಳನ್ನು ನಿರ್ವಹಿಸಿದ್ದಾರೆ.

ಎನ್‌ಐಎ ಅಧಿಕೃತ ಪ್ರಕಟಣೆಯಲ್ಲಿ, "ತನಿಖೆಯ ಸಮಯದಲ್ಲಿ, ಶಿಮ್ಲಾದಲ್ಲಿ ನಿಯೋಜಿಸಲಾದ ಅರವಿಂದ್ ದಿಗ್ವಿಜಯ್ ನೇಗಿ ಅವರ ಐಪಿಎಸ್, ಎಸ್‌ಪಿ ಪಾತ್ರವನ್ನು ಪರಿಶೀಲಿಸಲಾಗಿದೆ ಮತ್ತು ಅವರ ಮನೆಗಳನ್ನು ಶೋಧಿಸಲಾಗಿದೆ ಮತ್ತು ಎನ್‌ಐಎ ಅಧಿಕೃತ ರಹಸ್ಯ ದಾಖಲೆಗಳು ಪತ್ತೆಯಾಗಿವೆ. ಈ ಪ್ರಕರಣದಲ್ಲಿ ಲಷ್ಕರ್-ಇ-ತೊಯ್ಬಾ ಒಜಿಡಬ್ಲ್ಯೂ ಆಗಿರುವ ಇನ್ನೊಬ್ಬ ಆರೋಪಿಗೆ ಅರವಿಂದ್ ದಿಗ್ವಿಜಯ್ ನೇಗಿಯಿಂದ ಸೋರಿಕೆಯಾಗಿದೆ,'' ಎಂದು ಹೇಳಲಾಗಿದೆ.

"ಇದು ಅಧಿಕೃತ ರಹಸ್ಯ ಕಾಯಿದೆಯ ಉಲ್ಲಂಘನೆಯಾಗಿದೆ. ತನಿಖಾ ಸಂಸ್ಥೆಗಳು ಭ್ರಷ್ಟಾಚಾರ ಮತ್ತು ಅವರ ಆಸ್ತಿಗಳ ಬಗ್ಗೆಯೂ ತನಿಖೆ ನಡೆಸುತ್ತಿವೆ,'' ಎಂದು ಎನ್ಐಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ," ಎಂದು ಸುದ್ದಿ ಸಂಸ್ಥೆ ಇಂಡಿಯಾ ಟುಡೇ ವರದಿ ಮಾಡಿದೆ.

ನೇಗಿ ವಿರುದ್ಧ ಪ್ರಕರಣ
ಕಳೆದ ವರ್ಷ ನವೆಂಬರ್ 6ರಂದು ನೇಗಿ ವಿರುದ್ಧ ದಾಖಲಾಗಿರುವ ಪ್ರಕರಣವು ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಎಲ್ಇಟಿ (ಲಷ್ಕರ್-ಇ-ತೊಯ್ಬಾ) ನ ಒಜಿಡಬ್ಲ್ಯೂಗಳ (ಓವರ್ ಗ್ರೌಂಡ್ ವರ್ಕರ್ಸ್) ಜಾಲದ ಹರಡುವಿಕೆಗೆ ಸಂಬಂಧಿಸಿದೆ.

ಐಪಿಎಸ್ ಅಧಿಕಾರಿ ಹಂಚಿಕೊಂಡ ಮಾಹಿತಿಯು ಎಲ್‌ಇಟಿಗೆ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಯೋಜಿಸಲು ಮತ್ತು ಕಾರ್ಯಗತಗೊಳಿಸಲು ಸಹಾಯ ಮಾಡಿದೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಇದಕ್ಕೂ ಮುನ್ನ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳನ್ನು ಎನ್‌ಐಎ ಬಂಧಿಸಿತ್ತು.

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ನವೆಂಬರ್ 2021 ರಲ್ಲಿ ಬಂಧಿಸಲ್ಪಟ್ಟ ಮಾನವ ಹಕ್ಕುಗಳ ಕಾರ್ಯಕರ್ತ ಖುರ್ರಂ ಪರ್ವೇಜ್ ಅವರಿಗೆ ಅರವಿಂದ್ ದಿಗ್ವಿಜಯ್ ನೇಗಿ ಸೂಕ್ಷ್ಮ ಮಾಹಿತಿಯನ್ನು ರವಾನಿಸಿರಬಹುದು ಎಂದು ಎನ್ಐಎ ಶಂಕೆ ವ್ಯಕ್ತಪಡಿಸಿದೆ.

Recommended Video

      ವಿರಾಟ್ ಕೊಟ್ಟ ಗಿಫ್ಟ್ ನೋಡಿ ಬಿಕ್ಕಿ‌ಬಿಕ್ಕಿ ಅತ್ತಿದ್ದ ಸಚಿನ್‌ ಆ ಕ್ಷಣವನ್ನು ಇಂದಿಗೂ ಮರೆತಿಲ್ಲ |Oneindia Kannada

      ಇಂಟಲಿಜೆನ್ಸ್ ಬ್ಯೂರೋ (ಐಬಿ) ಯಿಂದ ನೇಗಿಯ ಬಗ್ಗೆ ಸುಳಿವು ನೀಡಿದ ಆಧಾರದ ಮೇಲೆ ತನಿಖಾಧಿಕಾರಿಗಳು ನೇಗಿಯ ಜಾಡು ಹಿಡಿದಿದ್ದರು. ಈ ಸುಳಿವು ಕಳೆದ ವರ್ಷ ನವೆಂಬರ್ 22ರಂದು ಹಿಮಾಚಲ ಪ್ರದೇಶದ ಕಿನ್ನೌರ್ ಸೇರಿದಂತೆ ಮೂರು ಸ್ಥಳಗಳಲ್ಲಿನ ಆವರಣಗಳ ಮೇಲೆ ದಾಳಿ ನಡೆಸಿತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+