Bank holidays: ನಾಳೆಯಿಂದ ಸತತ 9 ದಿನ ಬ್ಯಾಂಕುಗಳಿಗೆ ರಜೆ, ಯಾವೆಲ್ಲಾ ಊರುಗಳಲ್ಲಿ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

ಹಬ್ಬಗಳ ಸೀಸನ್ ಆರಂಭವಾಗಿದೆ. ದಸರಾ ಮತ್ತು ನವರಾತ್ರಿಯ ಸಂಭ್ರಮ ಎಲ್ಲೆಡೆ ಮನೆಮಾಡಿದೆ. ಈ ಹಬ್ಬದ ವಾತಾವರಣದ ನಡುವೆ ಬ್ಯಾಂಕ್ ಗ್ರಾಹಕರಿಗೆ ಒಂದು ಪ್ರಮುಖ ಅಪ್‌ಡೇಟ್ ಇಲ್ಲಿದೆ. ಅಕ್ಟೋಬರ್ 17 ರಿಂದ ಅಕ್ಟೋಬರ್ 25 ರವರೆಗೆ ದೇಶದ ವಿವಿಧ ಭಾಗಗಳಲ್ಲಿ ಬ್ಯಾಂಕುಗಳಿಗೆ ಸಾಲು ರಜೆಗಳಿವೆ.

ಹೌದು, ನವರಾತ್ರಿ, ದುರ್ಗಾ ಪೂಜೆ ಮತ್ತು ದಸರಾ ಹಬ್ಬದ ಪ್ರಯುಕ್ತ ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ ರಜಾಪಟ್ಟಿಯ ಪ್ರಕಾರ, ಸತತ 9 ದಿನಗಳ ಕಾಲ ಬ್ಯಾಂಕ್ ನೌಕರರಿಗೆ ರಜೆ ಸಿಗಲಿದೆ.

Next Week Bank Holidays 9 Days Holiday Alerts Why SBI HDFCBanks Will Be Closed From Oct 17-25

ಆದರೆ, ಈ ಎಲ್ಲಾ 9 ದಿನಗಳ ರಜೆ ಇಡೀ ದೇಶಕ್ಕೆ ಅನ್ವಯಿಸುವುದಿಲ್ಲ. ಸ್ಥಳೀಯ ಹಬ್ಬಗಳು ಮತ್ತು ಆಚರಣೆಗಳಿಗೆ ಅನುಗುಣವಾಗಿ ಆಯಾ ರಾಜ್ಯಗಳು ಮತ್ತು ನಗರಗಳಿಗೆ ಮಾತ್ರ ರಜೆಗಳನ್ನ ಘೋಷಿಸಲಾಗಿದೆ.

ಎಸ್‌ಬಿಐ, ಎಚ್‌ಡಿಎಫ್‌ಸಿ, ಐಸಿಐಸಿಐ, ಆಕ್ಸಿಸ್ ಬ್ಯಾಂಕ್ ಸೇರಿದಂತೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳು ಈ ದಿನಗಳಲ್ಲಿ ಮುಚ್ಚಲ್ಪಡುತ್ತವೆ. ನೀವು ಬ್ಯಾಂಕ್‌ಗೆ ಭೇಟಿ ನೀಡಿ ಹಣಕಾಸಿನ ವಹಿವಾಟು ನಡೆಸುವ ಯೋಜನೆ ಹೊಂದಿದ್ದರೆ, ನಿಮ್ಮ ನಗರದಲ್ಲಿ ಬ್ಯಾಂಕ್ ತೆರೆದಿರುತ್ತದೆಯೋ ಇಲ್ಲವೋ ಎಂಬುದನ್ನು ಮೊದಲು ಪರಿಶೀಲಿಸುವುದು ಒಳಿತು.

ಅಕ್ಟೋಬರ್ 17 ರಿಂದ 21 ರವರೆಗಿನ ಬ್ಯಾಂಕ್ ರಜೆಗಳ ವಿವರ

* ಅಕ್ಟೋಬರ್ 17 (ಮಹಾ ಸಪ್ತಮಿ): ಅಗರ್ತಲಾದಲ್ಲಿ ಮಹಾ ಸಪ್ತಮಿ ಆಚರಣೆ ಇರುವುದರಿಂದ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ.

* ಅಕ್ಟೋಬರ್ 18 (ಭಾನುವಾರ): ಭಾನುವಾರವಾಗಿರುವುದರಿಂದ ದೇಶಾದ್ಯಂತ ಎಲ್ಲಾ ಬ್ಯಾಂಕುಗಳಿಗೆ ಸಾಮಾನ್ಯ ರಜೆ.

* ಅಕ್ಟೋಬರ್ 19 (ಮಹಾ ನವಮಿ / ದುರ್ಗಾ ಪೂಜೆ): ಈ ದಿನ ಅಸ್ಸಾಂ, ಒಡಿಶಾ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಹಬ್ಬದ ಆಚರಣೆ ಇರುತ್ತದೆ. ಅಗರ್ತಲಾ, ಭುವನೇಶ್ವರ, ಚೆನ್ನೈ, ಹೈದರಾಬಾದ್, ಕೊಚ್ಚಿ, ಕೋಲ್ಕತ್ತಾ, ಪಟನಾ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕುಗಳು ಮುಚ್ಚಿರುತ್ತವೆ.

* ಅಕ್ಟೋಬರ್ 20 (ವಿಜಯದಶಮಿ / ದಸರಾ): ದಸರಾ ಹಬ್ಬದ ಪ್ರಮುಖ ದಿನವಾದ ವಿಜಯದಶಮಿಯಂದು ಬೆಂಗಳೂರು, ಅಹಮದಾಬಾದ್, ಭೋಪಾಲ್, ಚಂಡೀಗಢ, ಚೆನ್ನೈ, ಮುಂಬೈ, ನವದೆಹಲಿ, ಶಿಮ್ಲಾ, ಹೈದರಾಬಾದ್ ಮತ್ತು ಲಕ್ನೋ ಸೇರಿದಂತೆ ದೇಶದ ಬಹುಪಾಲು ಪ್ರಮುಖ ನಗರಗಳಲ್ಲಿ ಬ್ಯಾಂಕುಗಳಿಗೆ ರಜೆ ಘೋಷಿಸಲಾಗಿದೆ.

* ಅಕ್ಟೋಬರ್ 21 (ದುರ್ಗಾ ಪೂಜೆ / ಮಹಾ ದಶಮಿ): ಬೆಂಗಳೂರು, ಅಗರ್ತಲಾ, ಗ್ಯಾಂಗ್ಟಾಕ್, ಕೊಚ್ಚಿ, ಕೋಲ್ಕತ್ತಾ ಮತ್ತು ತಿರುವನಂತಪುರಂ ನಗರಗಳಲ್ಲಿ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ.

ವಾರಾಂತ್ಯದ ರಜೆಗಳು: ಆನ್‌ಲೈನ್ ಸೇವೆಗಳಷ್ಟೇ ಲಭ್ಯ

ದಸರಾ ಹಬ್ಬದ ರಜೆಗಳ ಜೊತೆಗೆ ಅಕ್ಟೋಬರ್ ಅಂತ್ಯದಲ್ಲಿ ಸಾಲು ಸಾಲು ವಾರಾಂತ್ಯದ ರಜೆಗಳೂ ಬರಲಿವೆ. ಅಕ್ಟೋಬರ್ 22 ಮತ್ತು 23 ರಂದು ಗ್ಯಾಂಗ್ಟಾಕ್‌ನಲ್ಲಿ ದಸೈನ್ ಅಂದರೆ ದುರ್ಗಾ ಪೂಜೆ ಪ್ರಯುಕ್ತ ಎರಡು ದಿನಗಳ ಸತತ ರಜೆ ಇರಲಿದೆ.

ಇದರ ಬೆನ್ನಲ್ಲೇ, ಅಕ್ಟೋಬರ್ 24 ತಿಂಗಳ ನಾಲ್ಕನೇ ಶನಿವಾರವಾಗಿದೆ. ಆರ್‌ಬಿಐ ನಿಯಮಗಳ ಪ್ರಕಾರ, ಎರಡನೇ ಮತ್ತು ನಾಲ್ಕನೇ ಶನಿವಾರ ಎಲ್ಲಾ ಬ್ಯಾಂಕುಗಳಿಗೆ ರಜೆ ಇರುತ್ತದೆ. ಅಂದು ಆರ್‌ಟಿಜಿಎಸ್ ಮತ್ತು ನೆಫ್ಟ್ (NEFT) ನಂತಹ ಪೇಮೆಂಟ್ ಸಿಸ್ಟಮ್‌ಗಳು ಕೂಡ ಕಾರ್ಯನಿರ್ವಹಿಸುವುದಿಲ್ಲ.

ಮರುದಿನ ಅಕ್ಟೋಬರ್ 25 ರಂದು ಭಾನುವಾರವಾದ್ದರಿಂದ ದೇಶಾದ್ಯಂತ ಎಂದಿನಂತೆ ಬ್ಯಾಂಕುಗಳು ಮುಚ್ಚಿರುತ್ತವೆ. ಒಟ್ಟಾರೆಯಾಗಿ, ಕೊಚ್ಚಿ, ಕೋಲ್ಕತ್ತಾ ಮತ್ತು ಗುವಾಹಟಿಯಂತಹ ನಗರಗಳಲ್ಲಿ ಸತತ ಮೂರು ದಿನ ಬ್ಯಾಂಕುಗಳು ತೆರೆಯುವುದಿಲ್ಲ. ಅಗರ್ತಲಾದಲ್ಲಿ ನಾಲ್ಕು ದಿನಗಳ ಕಾಲ ರಜೆ ಇರಲಿದೆ.

ಬ್ಯಾಂಕ್ ಬಾಗಿಲು ಮುಚ್ಚಿದ್ದರೂ, ಎಟಿಎಂ ಸೇವೆಗಳು, ಮೊಬೈಲ್ ಬ್ಯಾಂಕಿಂಗ್ ಮತ್ತು ನೆಟ್ ಬ್ಯಾಂಕಿಂಗ್ ಸೌಲಭ್ಯಗಳು ಎಂದಿನಂತೆ ಗ್ರಾಹಕರಿಗೆ ಲಭ್ಯವಿರುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+