ಕಾಫಿ ನಾಡಲ್ಲಿ ಮಳೆ, ಮುಗಿಯದ ಜೆಎನ್‌ಯು ರಗಳೆ

Subscribe to Oneindia Kannada

ನವದೆಹಲಿ, ಫೆಬ್ರವರಿ, 25: ಫೆಬ್ರವರಿ ತಿಂಗಳಲ್ಲೇ ಮಳೆಗಾಲವೇ? ಹೌದು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಬುಧವಾರ ಮಳೆ ಸುರಿದಿದೆ. ಜಿಲ್ಲೆಯ ಆಲ್ದೂರು ಸೇರಿದಂತೆ ವಿವಿಧೆಡೆ ಮಳೆಯಾಗಿದೆ. ಮಲೆನಾಡಿನಲ್ಲಿ ಚಳಿಗಾಲದ ಅಂತ್ಯದಲ್ಲಿ ಮಳೆ ಸುರಿದಿದ್ದು ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ.

ರಾಜ್ಯದ ಒಂದೆಡೆ ಬರ ಪರಿಸ್ಥಿತಿ ಆವರಿಸುತ್ತಿದೆ. ಉತ್ತರ ಕರ್ನಾಟಕ ಭಾಗಗಳು ಮಳೆ ಕೊರೆತಿಂದ ಬಳಲಿದ್ದು ಬೇಸಿಗೆಯ ಬೇಗೆಗೆ ಸಿಕ್ಕಿ ಹಾಕಿಕೊಳ್ಳುತ್ತಿವೆ. ಇತ್ತ ಅಕಾಲಿಕ ಮಳೆ ಅಲ್ಪ ಸ್ವಲ್ಪ ಇದ್ದ ಬೆಳೆಯನ್ನು ಬಲಿ ಪಡೆಯುತ್ತಿದ್ದು ರೈತರನ್ನು ಮತ್ತಷ್ಟು ಆತಂಕಕಕ್ಕೆ ದೂಡಿದೆ.

ಇನ್ನುಳಿದಂತೆ ಅತ್ತ ಭಾರತೀಯ ರೈಲ್ವೆ ಬಜೆಟ್ ಹಿನ್ನಲೆಯಲ್ಲಿ ಮರಳಿನಲ್ಲಿ ಮೂಡಿಬಂದ ಕಲಾಕೃತಿ, ವಿಶ್ವ ಟಿ-20 ಕಪ್ ಎದುರು ಫೋಟೋ ತೆಗೆಸಿಕೊಂಡ ರೂಪದರ್ಶಿಗಳು, ರಾಜ್ಯ ಸಭೆಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಭಾಷಣ ಎಲ್ಲವವನ್ನು ಚಿತ್ರಗಳಲ್ಲಿ ನೋಡಿಕೊಂಡು ಬನ್ನಿ(ಪಿಟಿಐ ಚಿತ್ರಗಳು)...

ಚಿಕ್ಕಮಗಳೂರಲ್ಲಿ ಮಳೆ

ಚಿಕ್ಕಮಗಳೂರಲ್ಲಿ ಮಳೆ

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಬುಧವಾರ ಮಳೆ ಸುರಿದಿದೆ. ಜಿಲ್ಲೆಯ ಆಲ್ದೂರು ಸೇರಿದಂತೆ ವಿವಿಧೆಡೆ ಮಳೆಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬರು ನೀರು ಹೊರಹಾಕಲು ಹರಸಾಹಸ ಮಾಡುತ್ತಿದ್ದ ದೃಶ್ಯ.

ಮುಗಿಯದ ಪ್ರತಿಭಟನೆ

ಮುಗಿಯದ ಪ್ರತಿಭಟನೆ

ದೇಶದ್ರೋಹದ ಆರೋಪದಡಿ ಬಂಧಿತರಾಗಿರುವ ಜವಾಹರಲಾಲ್ ನೆಹರು ವಿವಿ ವಿದ್ಯಾರ್ಥಿ ಸಂಘದ ಮುಖಂಡ ಕನ್ಹಯ್ಯ ಕುಮಾರ್ ಮತ್ತು ಶರಣಾಗಿರುವ ಉಮರ್ ಖಲೀದ್ ಅವರನ್ನು ಬಿಡಬೇಕು ಎಂದು ಒತ್ತಾಯಿಸಿ ದೆಹಲಿಯಲ್ಲಿ ಪ್ರತಿಭಟನೆ.

ರೈಲ್ವೆ ಬಜೆಟ್ ಗೆ ಸ್ವಾಗತ

ರೈಲ್ವೆ ಬಜೆಟ್ ಗೆ ಸ್ವಾಗತ

ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಪುರಿಯ ಸಮುದ್ರ ದಂಡೆಯಲ್ಲಿ ರೈಲ್ವೆ ಬಜೆಟ್ ಹಿನ್ನಲೆಯಲ್ಲಿ ನಿರ್ಮಿಸಿದ ಕಲಾಕೃತಿ ಗಮನ ಸೆಳೆಯಿತು.

ಇರಾನಿ ಭಾಷಣ

ಇರಾನಿ ಭಾಷಣ

ಹೈದ್ರಾಬಾದ್ ಸಂಶೋಧನಾ ವಿದ್‌ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಸಂಬಂಧ ಕೇಳಿಬಂದ ಎಲ್ಲ ಆರೋಪಗಳಿಗೆ ರಾಜ್ಯ ಸಭೆಯಲ್ಲಿ ಉತ್ತರ ನೀಡಿದ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ.

ವೇಮುಲ ಪರ ಪ್ರತಿಭಟನೆ

ವೇಮುಲ ಪರ ಪ್ರತಿಭಟನೆ

ಆತ್ಮಹತ್ಯೆಗೆ ಶರಣಾದ ರೋಹಿತ್ ವೇಮುಲ ಅವರ ತಾಯಿ ರಾಧಿಕಾ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಚುಟುಕು ಕ್ರಿಕಟ್ ಜ್ವರ

ಚುಟುಕು ಕ್ರಿಕಟ್ ಜ್ವರ

ಐಸಿಸಿ ಟಿ-20 ವಿಶ್ವಕಪ್ ಎದುರು ನಿಂತು ಕೋಲ್ಕತಾದಲ್ಲಿ ಸೆಲ್ಫಿ ತೆಗೆದುಕೊಂಡ ರೂಪದರ್ಶಿಯರು ಕಂಡಿದ್ದು ಹೀಗೆ. ಟಿ 2 ಏಷ್ಯಾ ಕಪ್ ಮುಗಿದ ನಂತರ ಟಿ-20 ವಿಶ್ವ ಕಪ್ ಆರಂಭವಾಗಲಿದೆ.

ನಿಸರ್ಗಕ್ಕೆ ಯಾರು ಸಾಟಿ?

ನಿಸರ್ಗಕ್ಕೆ ಯಾರು ಸಾಟಿ?

ಶ್ರೀನಗರದಲ್ಲಿ ಕಂಡು ಬಂದ ನಿಸರ್ಗದ ದೃಶ್ಯ ವೈಭವಕ್ಕೆ ನಮ್ಮ ಬಳಿ ವರ್ಣನೆ ಮಾಡಲು ಸಾಧ್ಯವಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
News In Pics: Chikmagalur District received rain fall of February 23. A fire brigade person carrying the things out from a shop during the Unseasonal heavy rain at Chikmagalur in Karnataka on Wednesday. JNU students agitate for the release of students arrested on sedition charges on the university campus in New Delhi.
Please Wait while comments are loading...