ಬೆಂಗಳೂರಲ್ಲಿ ಚಿತ್ರಾಂಗದೆ, ಬಾಹ್ಯಾಕಾಶದಲ್ಲಿ ಗೊರಿಲ್ಲಾ...!

Subscribe to Oneindia Kannada

ಬೆಂಗಳೂರು, ಫೆಬ್ರವರಿ, 26: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಎದ್ದ ಗೊಂದಲ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ದೇಶದ್ರೋಹದ ಆರೋಪದಡಿ ಬಂಧನ ಮಾಡಿರುವ ಕನ್ಹಯ್ಯ ಕುಮಾರ್ ಮತ್ತು ಇತರರನ್ನು ಬಂಧ ಮುಕ್ತ ಮಾಡಬೇಕು ಎಂದು ಒತ್ತಾಯಿಸಿ ಚಿಕ್ಕಮಗಳೂರಿನಲ್ಲಿ ಸಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪಂಜಿನ ಮೆರವಣಿಗೆ ನಡೆಸಿ ಘೋಷಣೆಗಳನ್ನು ಕೂಗಿದರು.

ದೇಶ-ವಿದೇಶ ಮತ್ತು ರಾಜ್ಯಗಳ ನಡುವಿನ ಸುದ್ದಿಯ ಮೇಲೆ ಇಂದು ಕ್ವಿಕ್ ರೌಂಡಪ್ ಇಲ್ಲಿದೆ. ಚಿತ್ರಗಳೊಂದಿಗೆ ನಿಮ್ಮನ್ನು ಮುಟ್ಟುವ ಸುದ್ದಿ ಮಾಹಿತಿಯನ್ನು ದಾಖಲು ಮಾಡುತ್ತದೆ. [ಲಾಲ್ಬಾಗಿನಲ್ಲಿ ಮೈವೆತ್ತಿದೆ ದೇಶ-ವಿದೇಶಗಳ ಹಣ್ಣಿನ ಸಾಮ್ರಾಜ್ಯ]

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರರಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟಿ ಚಿತ್ರಾಂಗದ ಸಿಂಗ್ ಗ್ಲಾಮರ್, ತಮ್ಮ ಖಡಕ್ ಭಾಷಣದ ಮೂಲಕ ವಿಪಕ್ಷಗಳ ಆರೋಪಕ್ಕೆ ಸಮರ್ಪಕ ಉತ್ತರ ನೀಡಿದ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಸಂಸತ್ ಭವನದ ಹೊರಗಡೆ ಕಂಡಿದ್ದು ಹೀಗೆ. ನಾಸಾದ ಬಾಹ್ಯಾಕಾಶ ನಿಲ್ದಾಣಕ್ಕೆ ನುಗ್ಗಿದ ಗೋರಿಲ್ಲಾ.. ಇನ್ನಷ್ಟು ಸುದ್ದಿಗಳು ಚಿತ್ರಗಳಲ್ಲಿ...(ಪಿಟಿಐ ಚಿತ್ರಗಳು)

ಬಾಹ್ಯಾಕಾಶ ನಿಲ್ದಾಣದಲ್ಲಿ ಗೊರಿಲ್ಲಾ?

ಬಾಹ್ಯಾಕಾಶ ನಿಲ್ದಾಣದಲ್ಲಿ ಗೊರಿಲ್ಲಾ?

ಅಮೆರಿಕ ಬಾಹ್ಯಾಕಾಶ ಸಂಸ್ಥೆಯ ಅಂತರಿಕ್ಷ ನಿಲ್ದಾಣದಲ್ಲಿ ಗೊರಿಲ್ಲಾ ಕಂಡುಬಂದಿದೆ! ಆಶ್ಚರ್ಯವಾಗುತ್ತಿದೆಯಾ ಬಾಹ್ಯಾಕಾಶ ಯಾನಿ ಸ್ಕ್ಯಾಟ್ ಕೆಲ್ಲಿ ತಮ್ಮ ಅವಳಿ ಸಹೋದರ ಮಾರ್ಕ್ ಕೆಲ್ಲಿ ನೀಡಿದ ಗೊರಿಲ್ಲಾ ವೇಷ ತೊಟ್ಟು ಓಡಾಡಿದ್ದು ಹೀಗೆ.

ಚಿತ್ರಾಂಗದೆ!

ಚಿತ್ರಾಂಗದೆ!

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರರಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟಿ ಚಿತ್ರಾಂಗದಾ ಸಿಂಗ್. ನಟಿ ಲಿಸಾ ಹೇಡನ್, ಶಿಬಾನಿ ದಂಡೇಕರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸ್ಮೃತಿ ಇರಾನಿ

ಸ್ಮೃತಿ ಇರಾನಿ

ತಮ್ಮ ಖಡಕ್ ಭಾಷಣದ ಮೂಲಕ ವಿಪಕ್ಷಗಳ ಆರೋಪಕ್ಕೆ ಸಮರ್ಪಕ ಉತ್ತರ ನೀಡಿದ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಸಂಸತ್ ಭವನದ ಹೊರಗಡೆ ಕಂಡಿದ್ದು ಹೀಗೆ.

ದಿಗ್ಗಜರ ಸೆಲ್ಫಿ

ದಿಗ್ಗಜರ ಸೆಲ್ಫಿ

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ತಬಲಾ ಮಾಂತ್ರಿಕ ಝಾಕಿರ್ ಹುಸೇನ್ ಸೆಲ್ಫಿ ತೆಗೆದುಕೊಂಡಾಗ ಸೆರೆಸಿಕ್ಕ ಚಿತ್ರ.

 ಸೈನಾ ನೆಹ್ವಾಲ್

ಸೈನಾ ನೆಹ್ವಾಲ್

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಎಲ್ ಪಿಜಿ ಗ್ಯಾಸ್ ಸಬ್ಸಿಡಿ ತ್ಯಜಿಸುವ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್.

ಮುಗಿಯದ ಪ್ರತಿಭಟನೆ

ಮುಗಿಯದ ಪ್ರತಿಭಟನೆ

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಎದ್ದ ಗೊಂದಲ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ದೇಶದ್ರೋಹದ ಆರೋಪದಡಿ ಬಂಧನ ಮಾಡಿರುವ ಕನ್ಹಯ್ಯ ಕುಮಾರ್ ಮತ್ತು ಇತರರನ್ನು ಬಂಧ ಮುಕ್ತ ಮಾಡಬೇಕು ಎಂದು ಒತ್ತಾಯಿಸಿ ಚಿಕ್ಕಮಗಳೂರಿನಲ್ಲಿ ಸಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
News In Pics: Ace Shuttler Saina Nehwal holding balloons during an LPG subsidy give-up event, in Bengaluru on Friday. PTI Photo by Shailendra Bhojak. Bollywood Actress Chitrangada Singh during the unveiling the Scotch Whisky Collection from United Spirits in Bengaluru.
Please Wait while comments are loading...