ಚಿತ್ರಗಳಲ್ಲಿ: ಬೀದಿಯಲ್ಲಿ ಕುಳಿತ ರಾಹುಲ್, ಮಳೆ ಆರ್ಭಟ
ನವದೆಹಲಿ, ಜೂ. 12: ದೆಹಲಿಯಲ್ಲಿ ಪೌರ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಾಥ್ ನೀಡಿದ್ದಾರೆ. 10 ದಿನಗಳಿಂದ ರಸ್ತೆಬದಿಯಲ್ಲೇ ತ್ಯಾಜ್ಯ ಸುರಿದು ನಡೆಸುತ್ತಿರುವ ಪ್ರತಿಭಟನೆಗೆ ರಾಹುಲ್ ಬೆಂಬಲ ವ್ಯಕ್ತಪಡಿಸಿದ್ದು ಶುಕ್ರವಾರ ಅವರೊಂದಿಗೆ ರಸ್ತೆಯಲ್ಲೇ ಕುಳಿತು ಧರಣಿ ನಡೆಸಿದರು.
ಪೌರ ಕಾರ್ಮಿಕರ ಧರಣಿಯಿಂದ ರಾಜಧಾನಿಯಲ್ಲಿ ಆರೋಗ್ಯ ಸಮಸ್ಯೆ ಎದುರಾಗಿದೆ. ಮಹಾನಗರದ ಕಸ ವಿಲೇವಾರಿ ಸಂಪೂರ್ಣ ನಿಲುಗಡೆಯಾಗಿದ್ದು ನಾಗರಿಕರು ಪರಿತಪಿಸುವಂತೆ ಆಗಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ಪೌರ ಕಾರ್ಮಿಕರ ಬಾಕಿ ವೇತನವನ್ನು ಕೂಡಲೇ ನೀಡಬೇಕು ಎಂದು ರಾಹುಲ್ ಆಗ್ರಹಿಸಿದರು. ಶುಕ್ರವಾರ ಘಟಿಸಿದ ಇನ್ನಷ್ಟು ಸುದ್ದಿಗಳು ಚಿತ್ರಗಳಲ್ಲಿ....(ಪಿಟಿಐ ಚಿತ್ರಗಳು)

ಸಮಸ್ಯೆಗೆ ಪರಿಹಾರ ಸಿಗುವುದೇ?
ನವದೆಹಲಿಯ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಮೂವರು ಮೇಯರ್‌ಗಳು ಮತ್ತು ಪುರಸಭೆಗಳ ಆಯಕ್ತರನ್ನು ಶುಕ್ರವಾರ ಭೇಟಿ ಮಾಡಿದ್ದು, ಪ್ರತಿಭಟನೆಯಲ್ಲಿ ನಿರತರಾಗಿರುವ ಕಾರ್ಮಿಕರ ಸಂಬಳ ಪಾವತಿಸಲು 493 ಕೋಟಿ ರೂ. ಅಗತ್ಯ ಎಂದು ತಿಳಿಸಿದ್ದಾರೆ. ಜತೆಗೆ ಕಾರ್ಮಿಕರು ಮುಷ್ಕರ ಹಿಂಪಡೆಯಬೇಕು ಎಂದು ಮನವಿ ಮಾಡಿದ್ದಾರೆ.

ಮಧ್ಯ ಪ್ರವೇಶಿದ ದೆಹಲಿ ಹೈಕೋರ್ಟ್
ಪೌರ ಕಾರ್ಮಿಕರ ಪ್ರತಿಭಟನೆ ಬಗ್ಗೆ ಮಾತನಾಡಿರುವ ದಿಲ್ಲಿ ಹೈಕೋರ್ಟ್ ಕಾರ್ಮಿಕರ ಸಂಬಳವನ್ನು ಜೂನ್ 15ರೊಳಗೆ ಪಾವತಿ ಮಾಡಬೇಕೆಂದು ಆಮ್ ಆದ್ಮಿ ಸರ್ಕಾರಕ್ಕೆ ಸೂಚನೆ ನೀಡಿದೆ.

ನಿಮ್ಮೊಂದಿಗೆ ನಾನಿದ್ದೇನೆ
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪೌರ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದ ರಾಹುಲ್ ಗಾಂಧಿ, ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಿದೆ. ಸರ್ಕಾರ ಇಂಥ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕು ಎಂದು ಆಗ್ರಹ ಮಾಡಿದರು.

ಮಳೆ ಬರುವ ಮುನ್ನ
ಮಾನ್ಸೂನ್ ಮಾರುತಗಳು ದೇಶವನ್ನು ಪ್ರವೇಶಿಸಿದ್ದು ಹಲವಾರು ಕಡೆ ಮಳೆ ಬೀಳುತ್ತಿದೆ. ಮುಂಬೈನ ಸಮುದ್ರ ತೀರದಲ್ಲಿ ತಯಾರು ಮಾಡಿದ್ದ ಉಪ್ಪನ್ನು ಸುರಕ್ಷಿತ ಜಾಗಕ್ಕೆ ಕೊಂಡೊಯ್ಯುತ್ತಿರುವ ಕಾರ್ಮಿಕರು.

ದಟ್ಟ ಮೋಡಗಳ ನೋಟ
ಮಾನ್ಸೂನ್ ಮಾರುತಗಳು ಪಶ್ಚಿಮ ಬಂಗಾಳವನ್ನು ಪ್ರವೇಶ ಮಾಡಿದ್ದು ಕೋಲ್ಕತ್ತಾದ ಸಮುದ್ರ ತೀರದಲ್ಲಿ ಕಂಡುಬಂದ ದಟ್ಟ ಕಪ್ಪು ಮೋಡಗಳ ನೋಟ.

ಮಳೆ ಆರ್ಭಟ ಜೋರು
ಜೊಧಪುರದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಶುಕ್ರವಾರ ರಸ್ತೆಯ ಮೇಲೆ ಹರಿದ ನೀರಿನಲ್ಲಿಯೇ ಸಂಚರಿಸಿದ ವಾಹನಗಳು. ಜೂನ್ 5 ರಂದು ದೇಶವನ್ನು ಪ್ರವೇಶಿಸಿದ ಮುಂಗಾರು ಮಾರುತಗಳು ಮಳೆ ಸುರಿಸುತ್ತ ಸಾಗುತ್ತಿವೆ.

ಸ್ವಿವನ್ ಸ್ಮಿತ್ ಶತಕದಾಟ
ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವೆ ಟೆಸ್ಟ್ ಪಂದ್ಯ ಆರಂಭವಾಗಿದ್ದು ಮೊದಲ ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ ನಾಲ್ಕು ವಿಕೆಟ್ ಕಳೆದುಕೊಂಡು 258 ರನ್ ಗಳಿಸಿದೆ. ಶತಕ ದಾಖಲಿಸಿರುವ ಸ್ವಿವನ್ ಸ್ಮಿತ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಮೋದಿ ಭೇಟಿ ಮಾಡಿದ ಗುರೂಜಿ
ಪ್ರಧಾನಿ ನರೇಂದ್ರ ಮೋದಿ ಅವರನ್ನು ಆರ್ಟ್ ಆಫ್ ಲಿವಿಂಗ್ ನ ಶ್ರೀ ರವಿಶಂಕರ್ ಗುರೂಜಿ ನವದೆಹಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.

ಮನವಿ ಸಲ್ಲಿಸಿದ ನಾಗಾ ನಿಯೋಗ
ಪ್ರಧಾನಿ ನರೇಂದ್ರ ಮೋದಿ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿದ ನಾಗಾಗಳು ತಮ್ಮ ವಿವಿಧ ಬೇಡಿಕೆಗಳ ಮನವಿಯನ್ನು ಸಲ್ಲಿಸಿದರು.












Click it and Unblock the Notifications