ಜಿಂದಾಲ್‌ಗೆ ಬಂದ ಕೇಜ್ರಿವಾಲ್, ಪಾಠ ಹೇಳಿದ ಭಾರತ ರತ್ನ

Subscribe to Oneindia Kannada

ಬೆಂಗಳೂರು, ಜನವರಿ, 28: ತೀವ್ರ ಕೆಮ್ಮು ಮತ್ತು ಮಧುಮೇಹದಿಂದ ಬಳಲುತ್ತಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಚಿಕಿತ್ಸೆಗಾಗಿ ಬೆಂಗಳೂರಿನ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯಕ್ಕೆ ದಾಖಲಾಗಿದ್ದಾರೆ.

ಪತ್ನಿ ಸುನೀತಾ ಅವರೊಂದಿಗೆ ಕೇಜ್ರಿವಾಲ್ ಬೆಂಗಳೂರಿಗೆ ಆಗಮಿಸಿದ್ದಾರೆ. ಅಲ್ಲಿಂದ ಸರ್ಕಾರಿ ವಾಹನ ತೊರೆದು ಖಾಸಗಿ ವಾಹನದಲ್ಲಿಯೇ ಆಸ್ಪತ್ರೆಗೆ ಆಗಮಿಸಿದರು. ಬುಧವಾರ ಮಧ್ಯಾಹ್ನ ಜಿಂದಾಲ್ ಆಸ್ಪತ್ರೆಯ ಒಳರೋಗಿಯಾಗಿ ದಾಖಲಾದರು.

ಉತ್ತರ ಕರ್ನಾಟಕದ ವಿವಿಧೆಡೆ ಪ್ರವಾಸ ನಡೆಸಿದ ಹಿರಿಯ ವಿಜ್ಞಾನಿ ಭಾರತರತ್ನ ಡಾ.ಸಿ.ಎನ್‌.ಆರ್‌. ರಾವ್‌ ಮಕ್ಕಳೊಂದಿಗೆ ಬೆರೆತು ವಿಜ್ಞಾನದ ಪಾಠ ಹೇಳಿಕೊಟ್ಟರು, ಕೊಪ್ಪಳ ಮತ್ತು ಗದಗದಲ್ಲಿ ರಾವ್ ಪ್ರವಾಸ ಮಾಡಿದರು. ಈ ವೇಳೆ ನಂಬಿಕೆ ಇರಬೇಕು ಆದರೆ ಮೂಢನಂಬಿಕೆ ಇರಬಾರದು ಎಂದು ಪ್ರತಿಪಾದಿಸಿದರು. ಬೆಂಗಳೂರು ಸೇರಿದಂತೆ ರಾಜ್ಯ ಮತ್ತು ದೇಶದ, ವಿವಿಧೆಡೆ ನಡೆದ ಘಟನಾವಳಿಗಳ ಒಟ್ಟು ಚಿತ್ರಣ ಇಲ್ಲಿದೆ....(ಪಿಟಿಐ ಚಿತ್ರಗಳು)

ಕೇಜ್ರಿವಾಲ್ ಚಿಕಿತ್ಸೆ

ಕೇಜ್ರಿವಾಲ್ ಚಿಕಿತ್ಸೆ

ತೀವ್ರ ಕೆಮ್ಮು ಮತ್ತು ಮಧುಮೇಹದಿಂದ ಬಳಲುತ್ತಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಚಿಕಿತ್ಸೆಗಾಗಿ ಬೆಂಗಳೂರಿನ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯಕ್ಕೆ ದಾಖಲಾಗಿದ್ದಾರೆ.

ಕೇಜ್ರಿವಾಲ್ ರೌಂಡ್ಸ್

ಕೇಜ್ರಿವಾಲ್ ರೌಂಡ್ಸ್

ಜಿಂದಾಲ್ ಆಸ್ಪತ್ರೆ ಆವರಣದಲ್ಲಿ ವಾಯು ವಿಹಾರಕ್ಕೆ ಹೊರಟ ಅರವಿಂದ್ ಕೇಜ್ರಿವಾಲ್. ಆಟೋ ಚಾಲಕರಿಗೆ 8ನೇ ತರಗತಿ ಕಡ್ಡಾಯ ಎಂಬ ನೀತಿ ವಿರೋಧಿಸಿ ಜನವರಿ 31 ರಂದು ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಕೇಜ್ರಿವಾಲ್ ಭಾಗವಹಿಸಲಿದ್ದಾರೆ.

ಮಕ್ಕಳಿಗೆ ಪಾಠ ಹೇಳಿದ ಭಾರತ ರತ್ನ

ಮಕ್ಕಳಿಗೆ ಪಾಠ ಹೇಳಿದ ಭಾರತ ರತ್ನ

ಗದಗದ ಲಕ್ಷ್ಮೀಶ್ವರದಲ್ಲಿ ಮಕ್ಕಳ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದ ಹಿರಿಯ ವಿಜ್ಞಾನಿ ಭಾರತರತ್ನ ಡಾ.ಸಿ.ಎನ್‌.ಆರ್‌. ರಾವ್‌. ಉತ್ತರ ಕರ್ನಾಟಕದ ಹಲವೆಡೆ ಪ್ರವಾಸ ಮಾಡಿದ ರಾವ್ ಮಕ್ಕಳೊಂದಿಗೆ ಬೆರೆತರು.

ನ್ಯಾಯಾಲಕ್ಕೆ ಸರಿತಾ

ನ್ಯಾಯಾಲಕ್ಕೆ ಸರಿತಾ

ಬಹುಕೋಟಿ ಸೋಲಾರ್ ಹಗರಣದ ಪ್ರಮುಖ ಆರೋಪಿಗಳಾದ ಸರಿತಾ ಎಸ್ ನಾಯರ್ ಕೊಚ್ಚಿಯ ನ್ಯಾಯಾಲಯಕ್ಕೆ ಬುಧವಾರ ಹಾಜರಾಗಿದ್ದು. ಸೋಲಾರ್ ಹಗರಣ ದೇಶಾದ್ಯಂತ ವಿವಾದ ಎಬ್ಬಿಸಿದ್ದು ಕೇರಳದ ಪ್ರಮುಖರ ಹೆಸರು ಕೇಳಿ ಬರುತ್ತಿದೆ.

ಚಾಂಡಿ ರಾಜೀನಾಮಗೆ ಆಗ್ರಹ

ಚಾಂಡಿ ರಾಜೀನಾಮಗೆ ಆಗ್ರಹ

ಸೋಲಾರ್ ಹಗರಣದಲ್ಲಿ ಕೇರಳ ಸಿಎಂ ಉಮನ್ ಚಾಂಡಿ ಭಾಗಿಯಾಗಿದ್ದು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಲ್ ಇಂಡಿಯಾ ಯುತ್ ಫೆಡರೇಶನ್ ಕಾರ್ಯಕರ್ತಯರು ತಿರುವನಂತಪುರದಲ್ಲಿ ಪ್ರತಿಭಟನೆ ನಡೆಸಿದರು.

ಇದು ನಮ್ಮ ಕೊಡಗಿನ ತಂಡ

ಇದು ನಮ್ಮ ಕೊಡಗಿನ ತಂಡ

ನವದೆಹಲಿಯ ರಾಜ್ ಪಥ್ ನಲ್ಲಿ ನಡೆದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೊಡಗು ಕಾಫಿಯನಾಡು ಸ್ತಬ್ಧಚಿತ್ರ ಜನಮನ್ನಣೆಗೆ ಪಾತ್ರವಾಗಿತ್ತು. ಸ್ತಬ್ಧಚಿತ್ರದ ನೇತೃತ್ವ ವಹಿಸಿದ್ದ ತಂಡ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿಮಾಡಿತು.

ಮಹಾ ಸಿಎಂ ಭೇಟಿ

ಮಹಾ ಸಿಎಂ ಭೇಟಿ

ಮಹಾರಾಷ್ಟ್ರದ ಶನಿಸಿಂಗಣಾಪುರ ಶನಿ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಕುರಿತು ಎದ್ದಿರುವ ವಿವಾದ ದೊಡ್ಡದಾಗಿದೆ, ಮಹಿಳಾ ಪರ ಹೋರಾಟಗಾರ್ತಿ ತೃಪ್ತಿ ದೇಸಾತಿ ಮಹಾ ಸಿಎಂ ದೇವೇಂದ್ರ ಫಡ್ನವೀಸ್ ಅವರನ್ನು ಈ ಹಿನ್ನೆಲೆಯಲ್ಲಿ ಭೇಟಿ ಮಾಡಿದರು.

ವೆಬ್ ತಾಣ ಬಿಡುಗಡೆ

ವೆಬ್ ತಾಣ ಬಿಡುಗಡೆ

ನಾಪತ್ತೆಯಾದವರ ಬಗ್ಗೆ ಸಕಲ ಮಾಹಿತಿ ನೀಡುವ ವೆಬ್ ತಾಣವನ್ನು ಮುಂಬೈನಲ್ಲಿ ಬಾಲಿವುಡ್ ನಟಿ ಕಾಜೋಲ್ ಅನಾವರಣ ಮಾಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
News In Pics: Delhi Chief Minister Arvind Kejriwal undergo natural therapy for treating his dry cough at a private hospital in Bengaluru. Bharat Ratna awardee Prof. C. N. R. Rao interacting with students at a school at Laxmeshwar, in Gadag district.
Please Wait while comments are loading...