ಜಯಾ-ಮೋದಿ ಭೇಟಿ, ಬಿಗಿ ಭದ್ರತೆಯಲ್ಲಿ ಮಾಯಾ...

Written By:
Subscribe to Oneindia Kannada

ನವದೆಹಲಿ, ಜೂನ್. 14: ಮಂಗಳವಾರ ಸುದ್ದಿಗಳಿಗೇನು ಬರವಿಲ್ಲ. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಹರಿದ್ವಾರದ ಗಂಗಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿದ ಭಕ್ತರು ಪಾವನರಾದರು.

ಶ್ರೀನಗರದಲ್ಲಿ ಮತ್ತದೆ ಪ್ರತಿಭಟನೆ, ಪೊಲೀಸರ ಮೇಲೆ ಕಲ್ಲು ತೂರಲು ಮುಂದಾದ ಗುಂಪನ್ನು ನಿಯಂತ್ರಣಕ್ಕೆ ತರಲು ಹರಸಾಹಸ ಮಾಡಬೇಕಾಗಿ ಬಂತು. ಬಿಗಿ ಭದ್ರತೆಯ ನಡುವೆ ಹೆಜ್ಜೆ ಹಾಕುತ್ತ ಬಂದ ಬಹುಜನ ಸಮಾಜ ಪಾರ್ಟಿ ನಾಯಕಿ ಮಾಯಾವತಿ..[ಬಿಜೆಪಿ ಕಾರ್ಯಕಾರಣಿ: ಮೋದಿ ಮೇಲೆ ಅಡ್ವಾಣಿ ವಾರೆನೋಟ!]

ಮುಂಬೈನ ಮರೈನ್ ಡ್ರೈವ್ ಸಮೀಪ ಅಳವಡಿಸಿದ್ದ ಸಚಿನ್ ತೆಂಡೂಲ್ಕರ್ ಅವರ ಪುತ್ಥಳಿಯನ್ನು ಕೋರ್ಟ್ ಆದೇಶದ ಅನ್ವಯ ತೆರವು ಮಾಡಿದ ಕಾರ್ಮಿಕರು. ಅಮೆರಿಕದಲ್ಲಿ ಸಲಿಂಗಿಗಳ ಮೇಲೆ ನಡೆದ ಹತ್ಯಾಕಾಂಡದ ನಂತರದ ನೋವಿನ ಚಿತ್ರಣ. ಎನ್ ಸಿಸಿ ಕೆಡಿಟ್ ಗಳ ಜತೆ ಕಾಣಿಸಿಕೊಂಡ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್... ಇನ್ನಷ್ಟು ಸುದ್ದಿಗಳು ಚಿತ್ರಗಳಲ್ಲಿ...(ಪಿಟಿಐ ಚಿತ್ರಗಳು)

ಉಡ್ತಾ ಪಂಜಾಬ್

ಉಡ್ತಾ ಪಂಜಾಬ್

ಮುಂಬೈನಲ್ಲಿ ಹಮ್ಮಿಕೊಂಡಿದ್ದ ಉಡ್ತಾ ಪಂಜಾಬ್ ಚಿತ್ರದ ಪ್ರಮೋಶನ್ ವೇಳೆ ಜತೆಯಾಗಿ ಕಾಣಿಸಿಕೊಂಡ ಆಲಿಯಾ ಭಟ್ ಮತ್ತು ಶಾಹಿದ್ ಕಪೂರ್.

 ಪುಣ್ಯ ಸ್ನಾನ

ಪುಣ್ಯ ಸ್ನಾನ

ಹರಿದ್ವಾರ ಸಮೀಪ ಗಂಗಾ ದಸರಾ ಪ್ರಯುಕ್ತ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ಪಾವನರಾದ ಭಕ್ತ ಸಮೂಹ

ಜಯಾ-ಮೋದಿ

ಜಯಾ-ಮೋದಿ

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.

ಪೋಲೀಸರ ಮೇಲೆ ಕಲ್ಲು

ಪೋಲೀಸರ ಮೇಲೆ ಕಲ್ಲು

ಶ್ರೀನಗರದಲ್ಲಿ ಮತ್ತದೆ ಪ್ರತಿಭಟನೆ, ಪೊಲೀಸರ ಮೇಲೆ ಕಲ್ಲು ತೂರಲು ಮುಂದಾದ ಗುಂಪು ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ

ಪೊಲೀಸರ ಪರಿಸ್ಥಿತಿ

ಪೊಲೀಸರ ಪರಿಸ್ಥಿತಿ

ಪ್ರತಿಭಟನೆ ಹೆಸರಿನಲ್ಲಿ ಕಲ್ಲು ತೂರುತ್ತಿದ್ದವರನ್ನು ನಿಯಂತ್ರಣ ಮಾಡಲು ಶ್ರೀನಗರದಲ್ಲಿ ಪೊಲೀಸಪ್ಪನ ಸರ್ಕಸ್.

ಭದ್ರತೆಯಲ್ಲಿ ಮಾಯಾ

ಭದ್ರತೆಯಲ್ಲಿ ಮಾಯಾ

ಬಿಗಿ ಭದ್ರತೆಯ ನಡುವೆ ಹೆಜ್ಜೆ ಹಾಕುತ್ತ ಬಂದ ಬಹುಜನ ಸಮಾಜ ಪಾರ್ಟಿ ನಾಯಕಿ ಮಾಯಾವತಿ ಲಕ್ನೋದಲ್ಲಿ ಕಂಡಿದ್ದು ಹೀಗೆ.

ತೆರವು

ತೆರವು

ಮುಂಬೈನ ಮರೈನ್ ಡ್ರೈವ್ ಸಮೀಪ ಅಳವಡಿಸಿದ್ದ ಸಚಿನ್ ತೆಂಡೂಲ್ಕರ್ ಅವರ ಪುತ್ಥಳಿಯನ್ನು ಕೋರ್ಟ್ ಆದೇಶದ ಅನ್ವಯ ತೆರವು ಮಾಡಿದ ಕಾರ್ಮಿಕರು.

ಹತ್ಯಾಕಾಂಡದ ನಂತರ

ಹತ್ಯಾಕಾಂಡದ ನಂತರ

ಅಮೆರಿಕದ ಒರ್ಲಾಂಡೊದ ಸಲಿಂಗಿಗಳ ಹತ್ಯಾಕಾಂಡದ ನಂತರದ ದೃಶ್ಯಗಳು ಮನಸ್ಸನ್ನು ಕರಗಿಸಿದೇ ಇರದು. ಸಂಬಂಧಿಕಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಕೇಂದ್ರ ರಕ್ಷಣಾ ಸಚಿವರ ಸರಳತೆ

ಕೇಂದ್ರ ರಕ್ಷಣಾ ಸಚಿವರ ಸರಳತೆ

ಎನ್ ಸಿಸಿ ಕೆಡಿಟ್ ಗಳ ಜತೆ ಕಾಣಿಸಿಕೊಂಡ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ . ನವದೆಹಲಿಯಲ್ಲಿ ಸಿಕ್ಕ ಚಿತ್ರ.

ಮೋದಿ ಭೇಟಿ

ಮೋದಿ ಭೇಟಿ

ನವದೆಹಲಿಯಲ್ಲಿ ಪ್ರಧಾನಿಯನ್ನು ಭೇಟಿ ಮಾಡಿದ ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ್‌ ಪರ್ಸೇಕರ್‌.

ಮಳೆ ಆರ್ಭಟ

ಮಳೆ ಆರ್ಭಟ

ಹಿಸ್ಸಾರ್ ನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ರಸ್ತೆಯಲ್ಲೇ ಸಿಕ್ಕಿಹಾಕಿಕೊಂಡ ವಾಹನಗಳು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
News In Pics: Hindu devotees take holy dip in river Yamuna on the occasion of Ganga Dusshara festival in Mathura. Chief Minister of Tamil Nadu, J. Jayalalithaa calling on the Prime Minister Narendra Modi, in New Delhi on Tuesday.
Please Wait while comments are loading...