ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀಡಿ ಕಾರ್ಮಿಕರ ಬದುಕಲ್ಲಿ ಬೆಳಕು ಯಾವಾಗ?

|
Google Oneindia Kannada News

ಬೆಂಗಳೂರು, ಫೆಬ್ರವರಿ 09 : ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಕಟ್ಟಡ 7 ಜನರ ಜೀವವನ್ನು ಬಲಿ ಪಡೆದ ದುರ್ಘಟನೆ ಮಾಸಿಲ್ಲ. ಸಂತ್ರಸ್ತ ಕುಟುಂಬಗಳಿಗೆ ರಾಜಕಾರಣಿಗಳು ಸಾಂತ್ವನ ಹೇಳಿದ್ದಾರೆ. ಪರಿಹಾರವನ್ನು ಘೋಷಣೆ ಮಾಡಿದ್ದಾರೆ. ಅತ್ತ ಸಿಯಾಚಿನ್ ನ ಹಿಮದಡಿ ಸಿಕ್ಕಿದ್ದ ನಮ್ಮ ರಾಜ್ಯದ ಯೋಧ ಹನುಮಂತಪ್ಪ ಕೊಪ್ಪದ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಯೋಧನ ಯೋಗಕ್ಷೇಮ ವಿಚಾರಿಸಿದ್ದಾರೆ.[ಯೋಧ ಹನುಮಂತಪ್ಪ ತಾಯಿ ಹೇಳುವುದು ಏನು?]

ಉತ್ತರ ಭಾರತದಲ್ಲಿ ಅಮಾವಾಸ್ಯೆಗೆ ವಿಶೇಷ ಸ್ಥಾನ. ಸೋಮಾವತಿ ಅಮಾವಾಸ್ಯೆ, ಮೌನಿ ಅಮಾವಾಸ್ಯೆ ಎಂಬಿತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ. ಪುಣ್ಯ ಕ್ಷೇತ್ರಗಳಿಗೆ ತೆರಳಿ ಪವಿತ್ರ ಸ್ನಾನ ಮಾಡುವುದು ವಾಡಿಕೆ. ಅದರಂತೆ ಹರಿದ್ವಾರ ಮತ್ತು ಅಹಮದಾಬಾದ್ ನಲ್ಲಿ ಭಕ್ತರು ಪುಣ್ಯ ಸ್ನಾನ ಮಾಡಿದರು. ಅತ್ತ ಚೀನಾದಲ್ಲಿ ಬೀದಿ ಬದಿ ವ್ಯಾಪಾರಿಗಳು ಮತ್ತು ಪೊಲೀಸರ ನಡುವಿನ ಘರ್ಷಣೆ ತಾರರಕ್ಕೇರಿದೆ.[ಹುಬ್ಬಳ್ಳಿ ಕಟ್ಟಡ ಕುಸಿಯಲು ಕಾರಣವೇನು?]

ಇಡೀ ದೇಶದಲ್ಲಿ ಯಾವ ಯಾವ ಘಟನಾವಳಿಗಳು ಸಂಭವಿಸಿದವು ಎಂಬುದರ ಮೇಲಿನ ಒಂದು ಪಕ್ಷಿ ನೋಟ ಇಲ್ಲಿದೆ...(ಪಿಟಿಐ ಚಿತ್ರಗಳು)

ಯೋಧರ ಪಾರ್ಥಿವ ಶರೀರಕ್ಕೆ ಹುಡುಕಾಟ

ಯೋಧರ ಪಾರ್ಥಿವ ಶರೀರಕ್ಕೆ ಹುಡುಕಾಟ

ಸಿಯಾಚಿನ್ ಹಿಮಪಾತದಲ್ಲಿ ಪ್ರಾಣ ಕಳೆದುಕೊಂಡ ಯೋಧರ ಪಾರ್ಥಿವ ಶರೀರಗಳಿಗಾಗಿ ಸೇನಾ ನಾಯಿಗಳನ್ನು ಬಳಸಿಕೊಂಡು ಹುಡುಕಾಟ ಮುಂದುವರಿಸಲಾಗಿದೆ.

ಉಳಿದಿರುವುದು ಅವಶೇಷ ಮಾತ್ರ

ಉಳಿದಿರುವುದು ಅವಶೇಷ ಮಾತ್ರ

ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಪಾರ್ಸೆಲ್ ಕೌಂಟರ್‌ನ ಕಟ್ಟಡ ಫೆಬ್ರವರಿ 8 ಮಧ್ಯಾಹ್ನ ಕುಸಿದು ಬಿದ್ದ ಪರಿಣಾಮ ನಿಲ್ದಾಣದ ಕಟ್ಟಡ 7 ಜನ ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿರುವ ದೃಶ್ಯ.

ಬೀಡಿ ಕಾರ್ಮಿಕರ ಪ್ರತಿಭಟನೆ

ಬೀಡಿ ಕಾರ್ಮಿಕರ ಪ್ರತಿಭಟನೆ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಂಗಳೂರಿನಲ್ಲಿ ಬೀಡಿ ವಲಯದ ಕಾರ್ಮಿಕರು ಬೃಹತ್ ಪ್ರತಿಭಟನೆ ನಡೆಸಿದರು.

ಯೋಧನ ಆರೋಗ್ಯ ವಿಚಾರಿಸಿದ ಪ್ರಧಾನಿ

ಯೋಧನ ಆರೋಗ್ಯ ವಿಚಾರಿಸಿದ ಪ್ರಧಾನಿ

ಸಿಯಾಚಿನ್ ಹಿಮಪಾತದಲ್ಲಿ ಸಿಕ್ಕರೂ ಪವಾಡದ ರೀತಿ ಬದುಕುಳಿದ ಯೋಧ ಹನುಮಂತಪ್ಪ ಅವರ ಆರೋಗ್ಯವನ್ನು ಖುದ್ದು ಪ್ರಧಾನಿ ನರೇಂದ್ರ ಮೋದಿ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದರು.

ಯಾವ ಚರ್ಚೆ?

ಯಾವ ಚರ್ಚೆ?

ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಒಟ್ಟಾಗಿ ಕಾಣಿಸಿಕೊಂಡರು.

ಚೀನಿಗರ ವರಸೆ

ಚೀನಿಗರ ವರಸೆ

ಅಕ್ರಮ ಅಂಗಡಿ ಮುಂಗಟ್ಟುಗಳನ್ನು ತೆರವು ಮಾಡಲು ಮುಂದಾದ ಪೊಲೀಸರ ಮೇಲೆ ಹಾಂಕಾಂಗ್ ನ ವ್ಯಾಪಾರಿಗಳು ತಿರುಗಿ ಬಿದ್ದಿದ್ದಾರೆ. ಪೊಲೀಸರು ಮತ್ತು ವ್ಯಾಪಾರಿಗಳ ನಡುವಿನ ಗಲಾಟೆ ಘರ್ಷಣೆ ರೂಪಕ್ಕೆ ತಿರುಗಿದೆ.

ಪವಿತ್ರ ಮಾಘ ಸ್ನಾನ

ಪವಿತ್ರ ಮಾಘ ಸ್ನಾನ

ಸೋಮಾವತಿ ಅಮಾವಾಸ್ಯೆ ನಿಮಿತ್ತ ಹರಿದ್ವಾರದಲ್ಲಿ ಸೇರಿದ್ದ ಲಕ್ಷಾಂತರ ಜನ ಭಕ್ತರು ಮಾಘ ಸ್ನಾನ ಮಾಡಿದರು.

ಪ್ರಥಮ ಮಹಿಳಾ ಖಾಜಿಗಳು

ಪ್ರಥಮ ಮಹಿಳಾ ಖಾಜಿಗಳು

ಮುಂಬೈನಲ್ಲಿ ಎರಡು ವರ್ಷ ತರಬೇತಿ ಪಡೆದು ಖ್ವಾಜಿಗಳಾಗಿ(ಇಸ್ಲಾಂ ಸಮುದಾಯದ ನ್ಯಾಯ ತೀರ್ಮಾನ ಮಾಡುವ ಅಧಿಕಾರ ಇರುವವರನ್ನು ಖಾಜಿಗಳು ಎಂದು ಕರೆಯಲಾಗುತ್ತದೆ) ಅಧಿಕಾರ ವಹಿಸಿಕೊಂಡ ಜೈಪುರದ ಅಫ್ರಾಜ್ ಬೇಗಂ ಮತ್ತು ಜಹಾನ್ ಆರಾ.

ತ್ರಿವೇಣಿ ಸಂಗಮ

ತ್ರಿವೇಣಿ ಸಂಗಮ

ಮೌನಿ ಅಮಾವಾಸ್ಯೆ ನಿಮಿತ್ತ ಅಲಹಾಬಾದ್ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಭಕ್ತರು. ಗಂಗಾ, ಯಮುನಾ ಮತ್ತು ಗುಪ್ತಗಾಮಿನಿಯಾಗಿರುವ ಸರಸ್ವತಿ ನದಿ ಇಲ್ಲಿ ಒಂದಾಗುತ್ತದೆ ಎಂವ ನಂಬಿಕೆ ಸ್ಥಳಕ್ಕೆ ಮತ್ತಷ್ಟು ಮಹತ್ವ ತಂದು ನೀಡಿದೆ.

ಷೇರು ಮಾರುಕಟ್ಟೆ ಪಾತಾಳಕ್ಕೆ

ಷೇರು ಮಾರುಕಟ್ಟೆ ಪಾತಾಳಕ್ಕೆ

ಮಂಗಳವಾರ ಭಾರತದ ಷೇರು ಮಾರುಕಟ್ಟೆ ತಲ್ಲಣ ಅನುಭವಿಸಿತು. ಸೆನ್ಸೆಕ್ಸ್ 266 ಅಂಕ ಕುಸಿದರೆ, ನಿಫ್ಟಿ 86 ಅಂಕ ನಷ್ಟ ಕಂಡಿತು. ಸೆನ್ಸೆಕ್ಸ್ 24 ಸಾವಿರ ಗಡಿ ಸಮೀಪಿಸಿ ಹೂಡಿಕೆದಾರರಿಗೆ ಭರ್ಜರಿ ನಷ್ಟ ಮಾಡಿತು.

ಮಂಜಿನ ಹನಿ

ಮಂಜಿನ ಹನಿ

ನವದೆಹಲಿಯ ವಿಜಯ್ ಚೌಕ್ ನಲ್ಲಿ ಕಂಡು ಬಂದ ಚಳಿಗಾಲದ ದೃಶ್ಯ ಮಂಜು ಮತ್ತು ಸೂರ್ಯನ ಬೆಳಕಿನ ನಡುವಿನ ಹೊಂದಾಣಿಕೆ, ಸಾಂರಸ್ಯದ ಕತೆ ಹೇಳುತ್ತಿತ್ತು.

English summary
News In Pics: Operations by the specialized teams of the Army and the Air Force in progress to search for the bodies of the soldiers hit by an avalanche, in Siachen. Devotees gather to take holy dip at Har ki Paouri on the occasion of Somvati Amavasaya during Magh Mela festival in Haridwar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X