ಆಪ್ ವಿರುದ್ಧ ವಾಗ್ದಾಳಿ ನಡೆಸಿದ ನೇಗಿಲು ಹೊತ್ತ ರಾಹುಲ್!

ನವದೆಹಲಿ, ಜೂ. 17: ಬುಧವಾರ ದೇಶಾದ್ಯಂತ ಅನೇಕ ಘಟನಾವಳಿಗಳು ನಡೆದವು. ಸುಷ್ಮಾ ಸ್ವರಾಜ್-ಲಲಿತ್ ಮೋದಿ ವಿವಾದ ಕೊಂಚ ತಣ್ಣಗಾದರೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ಮುಂದುವರಿಸಿದ್ದರು.

ಇದಕ್ಕೈ ಮುನ್ನ ನವದೆಹಲಿಯ ಜಂತರ್-ಮಂತರ್‌ನಲ್ಲಿ ಎಂಸಿಡಿ ಪೌರ ಕಾರ್ಮಿಕರ ಪ್ರತಿಭಟನೆಯಲ್ಲಿ ಮಾತನಾಡಿ, ಛತ್ತೀಸ್‌ಗಢ ರೈತರ ಭೂಮಿಗೆ ಕಡಿಮೆ ಬೆಲೆ ನೀಡಲಾಗುತ್ತಿದೆ. ಪೌರ ಕಾರ್ಮಿಕರು ದೆಹಲಿಯ ಸೇನೆ ಇದ್ದಂತೆ. ಅವರನ್ನು ಕಡೆಗಣಿಸುವುದು ಸರಿಯಲ್ಲ. ಎರಡೂ ಸರ್ಕಾರಗಳು ಸಾಮಾನ್ಯರ ಹಿತ ಬಲಿ ಕೊಟ್ಟಿವೆ ಎಂದು ಆರೋಪ ಮಾಡಿದರು.

ಪಶ್ಚಿಮ ಬಂಗಾಳದಲ್ಲಿ ಮಳೆ ಆರ್ಭಟಿಸಿದರೆ, ದೆಹಲಿಯಲ್ಲಿ ಉರಿಬಿಸಿಲು. ಮಯನ್ಮಾರ್ ನಲ್ಲಿ ನಕ್ಸಲ್ ದಾಳಿಗೆ ಸಿಕ್ಕು ಪ್ರಾಣ ಕಳೆದುಕೊಂಡ ಸೈನಿಕನ ಕುಟುಂಬದ ಆಕ್ರಂದನ, ರಾಹುಲ್ ಗಾಂಧಿಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಸನ್ಮಾನ,, ಮತ್ತಷ್ಟು ಸುದ್ದಿಗಳು ಚಿತ್ರಗಳಲ್ಲಿ(ಪಿಟಿಐ ಚಿತ್ರಗಳು)

ನೇಗಿಲು ಹೊತ್ತ ರಾಹುಲ್

ನೇಗಿಲು ಹೊತ್ತ ರಾಹುಲ್

ಚತ್ತೀಸ್ ಘಡದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ನೇಗಿಲು ನೀಡಿ ಸನ್ಮಾನಿಸಿದ ಕಾಂಗ್ರೆಸ್ ಕಾರ್ಯಕರ್ತರು. ಕೇಂದ್ರ ಸರ್ಕಾರ ಮತ್ತು ದೆಹಲಿ ಆಮ್ ಆದ್ಮಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ.

ಮಳೆಯ ಆರ್ಭಟ

ಮಳೆಯ ಆರ್ಭಟ

ಪಶ್ವಿಮ ಬಂಗಾಳದ ಬೋಲಾಪುರ್ ದಲ್ಲಿ ಮುಂಗಾರು ಆರ್ಭಟ ಜೋರಾಗಿದ್ದು ಮಳೆ ನೀರಿನಲ್ಲೇ ಸಂಚರಿಸಿದ ವಾಹನಗಳು. ದೇಶಾದ್ಯಂತ ಮುಂಗಾರು ಮಳೆ ಜೋರಾಗುತ್ತಿದೆ. ಈಗಾಗಲೇ ಕಳೆದ ವರ್ಷಕ್ಕೆ ಹೋಲಿಸಿದರೆ ಅಧಿಕ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸೈನಿಕನ ಕುಟುಂಬದ ಆಕ್ರಂದನ

ಸೈನಿಕನ ಕುಟುಂಬದ ಆಕ್ರಂದನ

ಮಯನ್ಮಾರ್ ನಲ್ಲಿ ನಡೆದ ನಕ್ಸಲ್ ದಾಳಿಗೆ ಬಲಿಯಾದ ಸಿಆರ್ ಪಿಎಫ್ ಯೋಧ ವರುಣ್ ಕುಮಾರ್ ಅವರ ಪಾರ್ಥೀವ ಶರೀರವನ್ನು ಸ್ವಗ್ರಾಮಕ್ಕೆ ತರಲಾಗಿದ್ದು ಮುಗಿಲು ಮುಟ್ಟಿದ ಕುಟುಂಬದವರ ಆಕ್ರಂದನ. ಉಗ್ರರು ಇತ್ತೀಚೆಗೆ ಭಾರತ ಮಯನ್ಮಾರ್ ಗಡಿಯಲ್ಲಿ ಬಾಂಬ್ ಸ್ಫೋಟಿಸಿ 20 ಸೈನಿಕರನ್ನು ಹತ್ಯೆ ಮಾಡಿದ್ದರು.

ಪರಮಶಿವನ ಧ್ಯಾನ

ಪರಮಶಿವನ ಧ್ಯಾನ

ಪರಮಶಿವನ ಅಭಿಷೇಕಕ್ಕೆ ಗಂಗಾ ನದಿಯಿಂದ ನೀರು ಹೊತ್ತು ತಂದ ಭಕ್ತರ ಸಾಲು ಕಂಡಿದ್ದು ಹೀಗೆ. ಪವಿತ್ರ ಪುರುಷೋತ್ತಮ ತಿಂಗಳು ಆರಂಭವಾಗಿದ್ದು ಅಲಹಾಬಾದ್ ಸೇರಿದಂತೆ ದೇಶದ ವಿವಿಧೆಡೆ ಶಿವಾಲಯಗಳಲ್ಲಿ ಪೂಜೆ ನಡೆಯುತ್ತಿದೆ.

ವಿವಾದ ತಣ್ಣಗಾಯಿತೇ?

ವಿವಾದ ತಣ್ಣಗಾಯಿತೇ?

ಸುಷ್ಮಾ ಸ್ವರಾಜ್ ಮತ್ತು ಲಲಿತ್ ಮೋದಿ ವೀಸಾ ವಿವಾದ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಬುಧವಾರವೂ ಈ ಬಗ್ಗೆ ಆರೋಪ ಪ್ರತ್ಯಾರೋಪಗಳು ನಡೆದವು. ಕ್ಯಾಬಿನೆಟ್ ಸಭೆಯನ್ನು ಮುಗಿಸಿ ಹೊರ ಬಂದ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್.

ಅಂತಾರಾಷ್ಟ್ರೀಯ ಯೋಗ ದಿನ

ಅಂತಾರಾಷ್ಟ್ರೀಯ ಯೋಗ ದಿನ

ಜೂನ್ 21 ಕ್ಕೆ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ನವದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಭಾಗವಹಿಸುವ ನಿರೀಕ್ಷೆಯಿದ್ದು ಬಾಬಾ ರಾಮ್ ದೇವ್ ನೇತೃತ್ವ ವಹಿಸಲಿದ್ದಾರೆ. ಅಹಮದಾಬಾನಲ್ಲಿ ಬುಧವಾರ ಯೋಗದಲ್ಲಿ ತೊಡಗಿದ್ದ ವಿದ್ಯಾರ್ಥಿಗಳು.

ದೇಶದೆಲ್ಲೆಡೆ ವೈ ಫೈ

ದೇಶದೆಲ್ಲೆಡೆ ವೈ ಫೈ

ದೇಶದೆಲ್ಲೆಡೆ ಬಿ ಎಸ್ ಎನ್ ಎಲ್ ವೈ ಫೈ ಜಾಲ ವಿಸ್ತರಣೆಯಾಗಲಿದೆ. ಆರಂಭಿಕವಾಗಿ ದೇಶದ ಪ್ರಸಿದ್ಧ ಪ್ರವಾಸಿ ತಾಣ ತಾಜ್ ಮಹಲ್ ಗೆ ವೂ ಫೈ ಸೌಲಭ್ಯ ಕಲ್ಪಿಸಲಾಗಿದೆ. ವಿನೂತನ ಸೌಲಭ್ಯವನ್ನು ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್ ಬುಧವಾರ ಉದ್ಘಾಟನೆ ಮಾಡಿದರು.

ವಿಮಾನ ನಿಲ್ದಾಣಕ್ಕೆ ಬಂದಿಳಿದ ನಟಿ

ವಿಮಾನ ನಿಲ್ದಾಣಕ್ಕೆ ಬಂದಿಳಿದ ನಟಿ

ಬಾಲಿವುಡ್ ಬೆಡಗಿ ಪ್ರಿಯಾಂಕಾ ಛೋಪ್ರಾ ಭೋಪಾಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ದಿಲ್ ದಢಕ್ ನೇ ದೋ ಸಿನಿಮಾದ ಯಶಸ್ಸಿನ ಗುಂಗಿನಲ್ಲಿ ಪ್ರಿಯಾಂಕಾ ತೇಲುತ್ತಿದ್ದಾರೆ.

ಬಿಸಿಲ ಝಳಕ್ಕೆ ಸ್ನಾನ

ಬಿಸಿಲ ಝಳಕ್ಕೆ ಸ್ನಾನ

ಒಂದೆಡೆ ಮುಂಗಾರು ಆರ್ಭಟ ಮಾಡುತ್ತಿದ್ದರೆ ದೆಹಲಿಯಲ್ಲಿ ಬಿಸಿಲಿಜ ಝಳ ಜೋರಾಗಿದೆ. ಬುಧವಾರ ಪಾರ್ಕಿನಲ್ಲೇ ನೀರಾಟದಲ್ಲಿ ತೊಡಗಿದ್ದ ನಾಗರಿಕರು ತಾಪ ತಣಿಸಿಕೊಂಡರು.

ಯೋಗ ದಿನಕ್ಕೆ ನೃತ್ಯ ಪ್ರದರ್ಶನ

ಯೋಗ ದಿನಕ್ಕೆ ನೃತ್ಯ ಪ್ರದರ್ಶನ

ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಭರದ ಸಿದ್ಧತೆ ನಡೆಯುತ್ತಿದ್ದು, ಯೋಓಗದೊಂದಿಗೆ ನೃತ್ಯ, ಸಂಗೀತ ಕಾರ್ಯಕ್ರಮಗಳು ಇರಲಿವೆ. ನವದೆಗಹಲಿಯಲ್ಲಿ ನೃತ್ಯ ಕಾರ್ಯಕ್ರಮದ ಪೂರ್ವಭಾವಿ ಅಭ್ಯಾಸದಲ್ಲಿ ತೊಡಗಿರುವ ವಿದ್ಯಾರ್ಥಿನಿಯರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+