ಮೋದಿಗೆ ಹ್ಯಾಂಡ್ ಶೇಕ್ ನೀಡಲು ರಾಹುಲ್ ನಿರಾಕರಿಸಿದ್ರೆ!?

Subscribe to Oneindia Kannada

ನವದೆಹಲಿ, ಡಿಸೆಂಬರ್, 11: ಈ ಕೆಳಗಿನ ಒಂದೊಂದು ಚಿತ್ರಗಳು ಒಂದೊಂದು ಕತೆ ಹೇಳುತ್ತವೆ. ಇಂದಿನ ರಾಜಕೀಯ ಬೆಳವಣಿಗೆ, ನಾಟಕೀಯ ತಿರುವುಗಳು, ಕ್ರೀಡಾ ಸ್ಫೂರ್ತಿ, ಸಂಭ್ರಮ, ಹಳ್ಳಿ ಸೊಗಡು, ಚೆನ್ನೈ ಪ್ರವಾಹದ ನಂತರದ ಸ್ಥಿತಿ...ಎಲ್ಲವನ್ನು ನಿಮ್ಮ ಮುಂದೆ ಇಡುತ್ತಿವೆ.

ಇಲ್ಲಿನ ಚಿತ್ರಗಳ ಅರ್ಥಕ್ಕೆ, ಭಾವಕ್ಕೆ ಯಾವ ಹಿಡಿ ತಡೆ ಇಲ್ಲ. ಅವರವರ ಭಾವಕ್ಕೆ ತಕ್ಕಂತೆ ಅರ್ಥ ಮಾಡಿಕೊಳ್ಳಬಹುದು. ಕತೆ, ಕವನವನ್ನು ಬರೆಯಬಹುದು. ಸುಮ್ಮನೇ ನೋಡಿಕೊಂಡು ಹೋಗಬಹುದು. ಎಲ್ಲಿ ನಿಂತು. ಯಾವ ಪರಿಸ್ಥಿತಿಯಲ್ಲಿ ಚಿತ್ರಗಳನ್ನು ನೋಡುತ್ತಿರಿ ಎಂಬುದರ ಮೇಲೆ ಅದರ ಭಾವಾರ್ಥಗಳನ್ನು ಲೆಕ್ಕ ಹಾಕಬಹುದು.[ಸಂಸತ್ ಕಲಾಪ ದಿಕ್ಕು ತಪ್ಪಿತೆ?]

ಸದ್ಯದ ದೇಶ-ವಿದೇಶದ ವಿದ್ಯಮಾನಗಳನ್ನು ಮತ್ತೊಂದು ಕಣ್ಣಿನಿಂದ ನೋಡುವಂಥ ಫೋಟೊಗಳು ಇಲ್ಲಿವೆ. ಇಲ್ಲಿ ನರೇಂದ್ರ ಮೋದಿ ಇದ್ದಾರೆ, ರಾಹುಲ್ ಗಾಂಧಿ ಇದ್ದಾರೆ, ಸಾನಿಯಾ ಮಿರ್ಜಾ, ನಡಾಲ್, ವಿರಾಟ್ ಕೊಹ್ಲಿ ಎಲ್ಲರೂ ಇದ್ದಾರೆ. ಗ್ರಾಮೀಣ ಭಾಗದ ಕತೆ ಹೇಳುವ ಎತ್ತಿನಗಾಡಿಯೂ ಇದೆ. ದಿನದ ಚಿತ್ರಗಳ ಮೇಲೆ ಒಂದು ಕ್ವಿಕ್ ರೌಂಡ್ ಹಾಕಿಕೊಂಡು ಬರೋಣ....

ಹ್ಯಾಂಡ್ ಶೇಕ್ ಬೇಡ!

ಹ್ಯಾಂಡ್ ಶೇಕ್ ಬೇಡ!

ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ 75 ನೇ ಜನ್ಮದಿನಾಚರಣೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ. ನ್ಯಾಶನಲ್ ಹೆರಾಲ್ಡ್ ಪ್ರಕರಣಕ್ಕೆ ಎರಡು ಪಕ್ಷಗಳ ನಾಯಕರ ನಡುವೆ ಮಾತಿನ ಯುದ್ಧ ನಡೆಯುತ್ತಿದೆ.

ಎಲ್ಲಿಗೆ ಪಯಣ

ಎಲ್ಲಿಗೆ ಪಯಣ

ಸೂರತ್ ನ ಹಳ್ಳಿಯೊಂದರ ರಸ್ತೆಯಲ್ಲಿ ಹೊರಟ ಎತ್ತಿನ ಗಾಡಿ ಗ್ರಾಮೀಣ ಭಾಗದ ಕನ್ನಡಿಯಂತೆ ಕಂಡಿದ್ದು ಸುಳ್ಳಲ್ಲ.

 ಚಿತ್ರರಂಗ ಬದಲಾಗಿದೆಯಾ?

ಚಿತ್ರರಂಗ ಬದಲಾಗಿದೆಯಾ?

ಕೇರಳದ ಕೊಚ್ಚಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ಖ್ಯಾತ ಹಿನ್ನಲೆ ಗಾಯಕ ಜೇಸುದಾಸ್ ಮತ್ತು ನಟ ಜಯರಾಂ ಇಂದಿನ ಚಿತ್ರರಂಗದ ಸ್ಥಿತಿಯ ಬಗ್ಗೆ ಪರಸ್ಪರ ಮಾತುಕತೆ ನಡೆಸಿದಂತೆ ಕಂಡುಬಂತು.

ಕೊಹ್ಲಿ ಕಿವಿಯಲ್ಲಿ ಸಾನಿಯಾ ಏನು ಹೇಳಿದ್ರು?

ಕೊಹ್ಲಿ ಕಿವಿಯಲ್ಲಿ ಸಾನಿಯಾ ಏನು ಹೇಳಿದ್ರು?

ಐಪಿಟಿಎಲ್ ಟೆನಿಸ್ ಪಂದ್ಯಾವಳಿಯ ಪುರುಷರ ಪಂದ್ಯ ನಡೆಯುತ್ತಿದ್ದ ವೇಳೆ ಕಂಡು ಬಂದ ದೃಶ್ಯ, ಸಾನಿಯಾ ಮಿರ್ಜಾ ವಿರಾಟ್ ಬಳಿ ಏನು ಹೇಳಿದರು ಎಂಬುದು ಪಕ್ಕದಲ್ಲಿದ್ದವರಿಗೂ ಕೇಳಲಿಲ್ಲ.

ನವದೆಹಲಿಯಲ್ಲಿ ನಡಾಲ್

ನವದೆಹಲಿಯಲ್ಲಿ ನಡಾಲ್

ನವದೆಹಲಿಯಲ್ಲಿ ನಡೆದ ಐಪಿಟಿಎಲ್ ಟೆನಿಸ್ ಪಂದ್ಯಾವಳಿಯಲ್ಲಿ ಫಿಲಿಪೈನ್ಸ್ಆಟಗಾರರನ್ನು ಸೋಲಿಸಿದ ನಂತರ ರಫೆಲ್ ನಡಾಲ್ ಮತ್ತು ಸಾನಿಯಾ ಸಂಭ್ರಮ.

ಬದಲಾವಣೆ ತರುತ್ತೇನೆ

ಬದಲಾವಣೆ ತರುತ್ತೇನೆ

ಅರ್ಜೇಂಟಿನಾದ ಅಧ್ಯಕ್ಷರಾಗಿ ಪ್ರಮಾಣ ವಚನ ತೆಗೆದುಕೊಂಡ ನಂತರ ಮಾರಿಶಿಯೋ ಮಾಕ್ರಿ ತಮ್ಮ ಬೆಂಬಲಿಗರೊಂದಿಗೆ ಸಂತಸ ಹಂಚಿಕೊಂಡಿದ್ದು ಹೀಗೆ.

ಅಭಿಮಾನಿಗಳ ಸಂಭ್ರಮಕ್ಕೆ ಎಣೆ ಎಲ್ಲಿ?

ಅಭಿಮಾನಿಗಳ ಸಂಭ್ರಮಕ್ಕೆ ಎಣೆ ಎಲ್ಲಿ?

ಗುದ್ದೋಡು ಪ್ರಕರಣದಲ್ಲಿ ಸಲ್ಮಾನ್ ಖಾನ್ ನಿರ್ದೋಷಿ ಎಂಬ ನಿರ್ಧಾರ ಹೊರಬೀಳುತ್ತಿದ್ದಂತೆ ಮುಂಬೈನಲ್ಲಿ ಸಂಭ್ರಮಿಸಿದ ಸಲ್ಮಾನ್ ಅಭಿಮಾನಿಗಳು.

 ಅಯ್ಯಪ್ಪಾ.. ಅಂತೂ ಹೇರ್ ಕಟ್ ಮಾಡಿಸ್ದೆ

ಅಯ್ಯಪ್ಪಾ.. ಅಂತೂ ಹೇರ್ ಕಟ್ ಮಾಡಿಸ್ದೆ

ಪ್ರವಾಹಕ್ಕೆ ಸಿಕ್ಕಿ ನಲುಗಿಹೋಗಿದ್ದ ಚೆನ್ನೈ ಬಾಲಕರಿಗೆ ಕೇಶ ಮಂಡನ ಮಾಡಿದ ಎನ್ ಜಿಒ ಸದಸ್ಯರು. ಚೆನ್ನೈ ನಲ್ಲಿ ಮಳೆ ಕಳೆದೆರಡು ದಿನಗಳಿಂದ ನಿಯಂತ್ರಣಕ್ಕೆ ಬಂದಿದ್ದು ಜನಜೀವನ ಸಹಜ ಸ್ಥಿತಿಗೆ ಬಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
News In Pics: Prime Minister Narendra Modi exchanges greetings with Congress Vice President Rahul Gandhi during a function to celebrate NCP chief Sharad Pawar's 75th birthday at Vigyan Bhawan in New Delhi, India's Sania Mirza being greeted by Rafel Nadal after beating Phillippine Mavericks players Tomljanovic and Huey in the Mixed doubles match of IPTL at IG stadium.
Please Wait while comments are loading...