ದೇಶಾದ್ಯಂತ ಸಂಭ್ರಮದ ರಂಜಾನ್ ಆಚರಣೆ
ನವದೆಹಲಿ,
ಜು. 18: ದೇಶಾದ್ಯಂತ ಪವಿತ್ರ ರಂಜಾನ್ ಹಬ್ಬವನ್ನು ಆಚರಿಸಲಾಯಿತು. ನವದೆಹಲಿ, ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತ್ತಾ ಸೇರಿದಂತೆ ಎಲ್ಲ ಮಹಾನಗರದಲ್ಲೂ ಮುಸ್ಲಿಮರು ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. id="toptextpromo"> id='are-slot-1' class='oiad oi-axt oiadv'>ಒಂದು
ತಿಂಗಳಿಂದ ಕೈಗೊಂಡಿದ್ದ ಉಪವಾಸವನ್ನು ಅಂತ್ಯಗೊಳಿಸಲಾಯಿತು. ಹೊಸ ಬಟ್ಟೆ ಧರಿಸಿ , ಸಿಹಿ ಹಂಚಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.(ಪಿಟಿಐ ಚಿತ್ರಗಳು) id='are-slot-2' class='oiad oi-axt oiadv'>
ಜೈಪುರದಲ್ಲಿ ಪ್ರಾರ್ಥನೆ ಸಲ್ಲಿಕೆ
ಮುಸ್ಲಿಮರು ಪವಿತ್ರ ರಂಜಾನ್ ಪ್ರಯುಕ್ತ ಜೈಪುರ ದೆಹಲಿ ಹೆದ್ದಾರಿಯಲ್ಲೇ ಪ್ರಾರ್ಥನೆ ಸಲ್ಲಿಸಿದ್ದು ಕಂಡು ಬಂದಿದ್ದು ಹೀಗೆ.

ಮುಕ್ತಾರ್ ಅಬ್ಬಾಸ್ ನಖ್ವಿ
ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ನವದೆಹಲಿಯ ಮಸೀದಿಯೊಂದರಲ್ಲಿ ಪ್ರಾರ್ಥನೆ ಸಲ್ಲಿಕೆ ಮಾಡಿದರು.

ಜೈಪುರದ ಈದ್ಗಾ ಮೈದಾನ
ಜೈಪುರದ ಈದ್ಗಾ ಮೈದಾನದಲ್ಲಿ ರಂಜಾನ್ ಪ್ರಯುಕ್ತ ಪ್ರಾರ್ಥನೆ ಸಲ್ಲಿಕೆ ಮಾಡಿದ ಮುಸ್ಲಿಮರು.

ಪೊಲೀಸ್ ಅಧಿಕಾರಿಗಳಿಂದ ಶುಭಾಶಯ
ರಂಜಾನ್ ಪ್ರಯುಕ್ತ ಈದ್ ಶುಭಾಶಯವನ್ನು ವಿನಿಮಯ ಮಾಡಿದ ಪೊಲೀಸ್ ಅಧಿಕಾರಿಗಳು.

ಗೌಹಾಟಿಲ್ಲಿ ಪ್ರಾರ್ಥನೆ
ರಂಜಾನ್ ಹಿನ್ನೆಲೆಯಲ್ಲಿ ಗೌಹಾಟಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಸಾವಿರಾರು ಮುಸ್ಲಿಮರು.

ನಿತೀಶ್ ಕುಮಾರ್ ಶುಭಾಶಯ
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಈದ್ ಶುಭಾಶಯವನ್ನು ಹಂಚಿಕೊಂಡರು.

ಶ್ರೀನಗರ
ಶ್ರೀನಗರದಲ್ಲಿ ನಡೆದ ರಂಜಾನ್ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೊಹಮದ್ ಸಯ್ಯಿದ್ ಮತ್ತು ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಭಾಗವಹಿಸಿದರು.

ಚೆನ್ನೈ ನಲ್ಲಿ ಮಹಿಳೆಯರ ಪ್ರಾರ್ಥನೆ
ಚೆನ್ನೈನಲ್ಲಿ ಮುಸ್ಲಿಂ ಮಹಿಳೆಯರು ರಂಜಾನ್ ಪ್ರಯುಕ್ತ ಪ್ರಾರ್ಥನೆ ಸಲ್ಲಿಕೆ ಮಾಡಿದರು.












Click it and Unblock the Notifications