ಚಿತ್ರಗಳಲ್ಲಿ: ಟೀಮ್ ಇಂಡಿಯಾ ಪ್ರ್ಯಾಕ್ಟೀಸ್, ಚೀನಾ ಜೋಡಿ ಮದುವೆ
ನವದೆಹಲಿ, ಫೆ. 25 : ಜಂತರ್ ಮಂತರ್ ನಲ್ಲಿ ಮುಂದುವರಿದ ಅಣ್ಣಾ ಹಜಾರೆ ಹೋರಾಟ, ಬಜೆಟ್ ಅಧಿವೇಶನದಲ್ಲಿ ಹಾಜರಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅರುಣ್ ಜೇಟ್ಲಿ, ಶ್ರೀನಗರದಲ್ಲಿ ವ್ಯಾಪಕ ಮಳೆ.
ಪರ್ತ್ ನಲ್ಲಿ ಭಾರತ ತಂಡದ ಆಟಗಾರರ ಅಭ್ಯಾಸ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿದ ಬಾಲಿವುಡ್ ಬೆಡಗಿ ವಿದ್ಯಾಬಾಲನ್, ಪಾಟ್ನಾದಲ್ಲಿ ತಾರಕ್ಕೇರಿದ ಬಿಸಿಯೂಟ ಕಾರ್ಯಕರ್ತೆಯರ ಹೋರಾಟ.. ಇನ್ನಷ್ಟು ಸುದ್ದಿಗಳನ್ನು ಚಿತ್ರಗಳಲ್ಲಿ ನೋಡಿ.(ಪಿಟಿಐ ಚಿತ್ರಗಳು)

ವಿದ್ಯಾರ್ಥಿಗಳಿಗೆ ಪುರಸ್ಕಾರ
ನವದೆಹಲಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ನಟಿ ವಿದ್ಯಾ ಬಾಲನ್ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿದರು.

ಅಣ್ಣಾ ಹೋರಾಟ
ಭೂ ಸ್ವಾಧೀನ ಕಾಯ್ದೆ ಮಸೂದೆ ವಿರೋಧಿಸಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಹೋರಾಟದಲ್ಲಿ ಬುಧವಾರ ಪರಿಸರ ಹೋರಾಟಾಗಾರ್ತಿ ಮೇಧಾ ಪಾಟ್ಕರ್ ಭಾಗವಹಿಸಿದ್ದರು.

ಕಠಿಣ ಅಭ್ಯಾಸ
ವಿಶ್ವಕಪ್ ನ ಮುಂದಿನ ಪಂದ್ಯಕ್ಕಾಗಿ ಆಸ್ಟ್ರೇಲಿಯಾದ ಪರ್ತ್ ನಲ್ಲಿ ಕಠಿಣ ಅಭ್ಯಾಸ ನಡೆಸಿದ ಶಿಖರ್ ಧವನ್ ಮತ್ತು ಸುರೇಶ್ ರೈನಾ.

ಪ್ರತಿಭಟನೆ
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೀದಿಗಿಳಿದು ಹೋರಾಟ ಮಾಡುತ್ತಿರುವ ಬಿಹಾರದ ಬಿಸಿಯೂಟ ಕಾರ್ಯಕರ್ತೆಯರು.

ಒಂಟೆ ಏರಿದ ಯೋಧರು
ಪ್ರದರ್ಶನ ಕಾರ್ಯಕ್ರಮಕ್ಕೂ ಮುನ್ನ ಭುಜ್ ನಲ್ಲಿ ಒಂಟೆ ಏರಿ ಬಂದಗಡಿ ಭದ್ರತಾ ಪಡೆ ಯೋಧರು.

ಹೊಸ ಬಾಳು
ಭಾರತೀಯ ಸಂಪ್ರದಾಯದಂತೆ ಬುದ್ಧಗಯಾದಲ್ಲಿ ಹೊಸ ಬಾಳಿಗೆ ಕಾಲಿಟ್ಟ ಚೀನಾದ ಜೋಡಿ.

ಮಳೆ ಅವಾಂತರ
ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಬುಧವಾರ ತೀವ್ರ ಮಳೆ ಸುರಿದಿದ್ದು ರಸ್ತೆ ಮಧ್ಯೆ ಬೀರಿ ನಿಂತಿತ್ತು.

ಬಜೆಟ್ ಅಧಿವೇಶನ
ರಾಜ್ಯಸಭೆಯಲ್ಲಿ ಬಜೆಟ್ ಅಧಿವೇಶನ ಆಲಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅರುಣ್ ಜೇಟ್ಲಿ.

ಎಸ್ ಪಿ ಸದಸ್ಯೆ ಮಾತು
ಸಮಾಜವಾದಿ ಪಕ್ಷದ ಸಂಸದೆ ಕನಕ್ ಲತಾ ರಾಜ್ಯಸಭೆಯಲ್ಲಿ ಮಾತನಾಡಿದರು. ಸಂಸದೆ ಜಯಾ ಬಚ್ಚನ್ ಸಹ ಇದ್ದರು.

ಕಿಂಗ್ ಖಾನ್
ಮುಂಬೈನ ಟಿವಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಬಾಲಿವುಡ್ ಬಾದ್ ಷಾ ಶಾರುಕ್ ಖಾನ್.

ರೈಲಿಗೆ ಬೆಂಕಿ
ಜೈಪುರದ ಬಸ್ಸಿ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಬೋಗಿಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿತ್ತು.












Click it and Unblock the Notifications