ಇಂದಿನ ಪ್ರಮುಖ ಸುದ್ದಿ: ಪ.ಬಂ.ದಲ್ಲಿ ಉಗ್ರರ ಪರ ಪೋಸ್ಟರ್
ಬೆಂಗಳೂರು, ನ. 29: ಜಮಾತ್ ಉಲ್ ಮುಜಾಹಿದೀನ್ ಬಾಂಗ್ಲಾದೇಶ ಶಂಕಿತರನ್ನು ತನಿಖೆಗೆ ಬಾಂಗ್ಲಾ ತಂಡ. ನರೇಂದ್ರ ಮೋದಿ ಅವರಿಂದ ಅಸ್ಸಾಂ ರಾಜ್ಯದಲ್ಲಿ ಎರಡು ದಿನಗಳ ಪ್ರವಾಸ ಆರಂಭ.

ಇಂದಿನ ಬೆಳವಣಿಗೆಗಳು:
ಮಧ್ಯಾಹ್ನ
12.20: ಮಣಿಪುರ ರಾಜ್ಯದ ಥೌಬಾಲ್ ಜಿಲ್ಲೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಒಂದು ಸಾವು.
12.00: ದೆಹಲಿಯ ಕಮಲ ನಗರದಲ್ಲಿ ಖಾಸಗಿ ಬ್ಯಾಂಕ್ ಒಂದರ ಸೆಕ್ಯುರಿಟಿ ಗಾರ್ಡ್‌ನನ್ನು ಕೊಂದ ದರೋಡೆಕೋರರು.
ಬೆಳಗ್ಗೆ
11.38: ಜಮ್‌ಶೆಡ್‌ಪುರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ, ಶೀಘ್ರ ರ್ಯಾಲಿ ಉದ್ದೇಶಿಸಿ ಭಾಷಣ
Jamshedpur (Jharkhand) : PM Narendra Modi arrives at the venue, will address a rally shortly pic.twitter.com/Og6LnNPgId
— ANI (@ANI_news) November 29, 2014 11.25: ಪಶ್ಚಿಮ ಬಂಗಾಲದಲ್ಲಿ ಕಂಡುಬಂದವು ಜಮಾತ್ ಉಲ್ ಮುಜಾಹಿದೀನ್ ಪರ ಪೋಸ್ಟರ್‌ಗಳು.
11.20: ಬರ್ಧ್ವಾನ್ ಸ್ಫೋಟ ಆರೋಪಿಗಳನ್ನು ಬಂಧಿಸಿದ ಪಶ್ಚಿಮ ಬಂಗಾಳ ಪೊಲೀಸರಿಗೆ ಬಹುಮಾನ ಘೋಷಣೆ
11.00: ಕಲ್ಕತ್ತ ಹೈ ಕೋರ್ಟ್ ನೈಮಿಸಿದ ವಿಶೇಷ ಅಧಿಕಾರಿಗಳಿಂದ ಕೋಲ್ಕತದಲ್ಲಿ ಬಿಜೆಪಿ ಪ್ರತಿನಿಧಿಗಳ ಭೇಟಿ.
10.05: ಐಎಸ್ ಸಂಘಟನೆಯತ್ತ ಆಕರ್ಷಿತರಾಗುತ್ತಿರುವ ಯುವಕರ ಕುರಿತು ನಾವು ಆತಂಕ ಹೊಂದಿದ್ದೇವೆ : ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್
9.40: ನಾಗಪಟ್ಟಿನಮ್ ಪ್ರದೇಶದಲ್ಲಿ ನಾಲ್ವರು ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾ ಸೇನೆ.
Guwahati : Home Minister Rajnath Singh arrives to attend DGPs/IGPs conference pic.twitter.com/Oul4GyT4on
— ANI (@ANI_news) November 29, 2014 9.25: ಗುವಾಹತಿ : ಡಿಜಿಪಿ/ ಐಜಿಪಿಗಳ ಸಮಾವೇಶಕ್ಕೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಆಗಮನ
9.00: ನಾನು ಅಸ್ಸಾಂ, ಮಣಿಪುರ, ತ್ರಿಪುರಾ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ. ಇದರಿಂದ ಸಮಾಜದ ಎಲ್ಲ ವರ್ಗಗಳ ಜನರೊಂದಿಗೆ ಸಂಪರ್ಕ ಹೊಂದಲು ಸಾಧ್ಯವಾಗುತ್ತದೆ: ಪ್ರಧಾನಿ ನರೇಂದ್ರ ಮೋದಿ












Click it and Unblock the Notifications